ಜೆಇಇ, ನೀಟ್, ಸಿಇಟಿ‌ ವಿದ್ಯಾರ್ಥಗಳ ನೆರವಿಗೆ ಗೆಟ್ ಸೆಟ್ ಗೋ ಉಪಕ್ರಮಕ್ಕೆ ಸಚಿವ ಅಶ್ವತ್ಥ ನಾರಾಯಣ ಚಾಲನೆ  - Karavali Times ಜೆಇಇ, ನೀಟ್, ಸಿಇಟಿ‌ ವಿದ್ಯಾರ್ಥಗಳ ನೆರವಿಗೆ ಗೆಟ್ ಸೆಟ್ ಗೋ ಉಪಕ್ರಮಕ್ಕೆ ಸಚಿವ ಅಶ್ವತ್ಥ ನಾರಾಯಣ ಚಾಲನೆ  - Karavali Times

728x90

30 March 2022

ಜೆಇಇ, ನೀಟ್, ಸಿಇಟಿ‌ ವಿದ್ಯಾರ್ಥಗಳ ನೆರವಿಗೆ ಗೆಟ್ ಸೆಟ್ ಗೋ ಉಪಕ್ರಮಕ್ಕೆ ಸಚಿವ ಅಶ್ವತ್ಥ ನಾರಾಯಣ ಚಾಲನೆ 

 ಬೆಂಗಳೂರು, ಮಾರ್ಚ್ 31, 2022 (ಕರಾವಳಿ ಟೈಮ್ಸ್) : ಜೆಇಇ, ನೀಟ್ ಮತ್ತು ಸಿಇಟಿಯಂತಹ ಕಠಿಣ ಪ್ರವೇಶ ಪರೀಕ್ಷೆಗಳನ್ನು ಬರೆಯುವ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ನೆರವು ನೀಡುವ ಮೂರನೇ ವರ್ಷದ ಗೆಟ್-  ಸೆಟ್- ಗೋ ಆನ್ ಲೈನ್ ತರಬೇತಿ ಕಾರ್ಯಕ್ರಮಕ್ಕೆ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಬುಧವಾರ ಚಾಲನೆ ನೀಡಿದರು. 

 ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಲತಾಣ www. getcetgo.in ಅನಾವರಣಗೊಳಿಸಿ ಮಾತನಾಡಿದ ಸಚಿವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳು ''ಡಿಜಿಲರ್ನ್ ಎಜುಟೆಕ್ ಸಂಸ್ಥೆಯ ಜೊತೆಗೂಡಿ ರೂಪಿಸಿರುವ ಈ ವಿದ್ಯಾರ್ಥಿ ಸ್ನೇಹಿ ಉಪಕ್ರಮದ ಲಾಭವು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ಪಿಯುಸಿಯಿಂದಲೇ ಸಿಗುವಂತೆ ಮಾಡಲಾಗುವುದು, ಈ ಸಂಬಂಧ ಕಂಪನಿಯೊಂದಿಗೆ  ಮಾತುಕತೆ ನಡೆಸಲಾಗುತ್ತಿದೆ ಎಂದರು.   

ಜಾಲತಾಣದ ಜೊತೆಗೆ ಆ್ಯಪ್ ಮೂಲಕವೂ ಈ ಪ್ರಯೋಜನ ಪಡೆಯಬಹುದಾಗಿದ್ದು, ಇದನ್ನು ಗೂಗಲ್ ಫ್ಲೇ ಸ್ಟೋರಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಅಲ್ಲದೇ, ಯೂ ಟ್ಯೂಬ್ ಮೂಲಕವೂ ಅದರ ವಿಡಿಯೋಗಳನ್ನು ವೀಕ್ಷಿಸಬಹುದು. ಇದು ಪರಿಣಾಮಕಾರಿ ಕಲಿಕೆಯನ್ನು ಸುಲಭಗೊಳಿಸಿದ್ದು, ಕಳೆದ ಎರಡು ವರ್ಷಗಳಲ್ಲಿ ಈ ವೇದಿಕೆಯು 3. 50 ಲಕ್ಷಕ್ಕೂ ಹೆಚ್ಚು ಲಾಗಿನ್  ಕಂಡಿದೆ ಎಂದವರು ತಿಳಿಸಿದರು.

 ಗೆಟ್ ಸೆಟ್ ಗೋ ಜಾಲತಾಣದಲ್ಲಿ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಒಮ್ಮೆ ನೋಂದಾಯಿಸಿಕೊಂಡರೆ ಓದಿನ ಪುನರ್ಮನನಕ್ಕೆ ಅನುಕೂಲವಾಗುವ ವಿಡಿಯೋಗಳು, ಸಾರ ರೂಪದ ಪಿಪಿಟಿಗಳು, ಅಭ್ಯಾಸ ಪ್ರಶ್ನೆಗಳು,  ಅಧ್ಯಾಯವಾರು ಪರೀಕ್ಷೆಗಳು, ಅಣಕು ಪರೀಕ್ಷೆಗಳು ಎಲ್ಲವೂ ಉಚಿತವಾಗಿ ಸಿಗುತ್ತವೆ. ಜೊತೆಗೆ ವಿದ್ಯಾರ್ಥಿಗಳು ತಮ್ಮ ಅಂಕ ಮತ್ತು ಸ್ಥಾನಗಳನ್ನು ತಿಳಿದುಕೊಳ್ಳಬಹುದು ಎಂದು ಸಚಿವರು ಹೇಳಿದರು. 

 ಎರಡು ವರ್ಷಗಳ ಹಿಂದೆ ಕೊರೊನಾ ಕಾಣಿಸಿಕೊಂಡಾಗ ಈ ಉಪಕ್ರಮವನ್ನು ಆರಂಭಿಸಲಾಯಿತು. ಈಗ ಭೌತಿಕ ತರಗತಿಗಳು ನಡೆಯುತ್ತಿದ್ದರೂ ಈ ನೆರವನ್ನು ವಿಸ್ತರಿಸಲಾಗುತ್ತಿದ್ದು, ಆನ್‌ಲೈನ್ ಕಲಿಕೆಗೆ ವರದಾನವಾಗಿದೆ. ಇದರಿಂದಾಗಿ ರಾಜ್ಯದ ಹೆಚ್ಚಿನ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಅಧ್ಯಯನಕ್ಕೆ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದು ಸಾಧ್ಯವಾಗಿದೆ. ಎರಡು ವರ್ಷಗಳಲ್ಲಿ 3.6 ಲಕ್ಷ ವಿದ್ಯಾರ್ಥಿಗಳು ಈ ವೀಡಿಯೋಗಳನ್ನು ವೀಕ್ಷಿಸಿದ್ದಾರೆ ಎಂದು ಸಚಿವ ಡಾ ಅಶ್ವತ್ಥನಾರಾಯಣ ತಿಳಿಸಿದರು.  ಕಾ

ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ ಪ್ರದೀಪ್, ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎನ್ ರವಿಚಂದ್ರನ್ ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಜೆಇಇ, ನೀಟ್, ಸಿಇಟಿ‌ ವಿದ್ಯಾರ್ಥಗಳ ನೆರವಿಗೆ ಗೆಟ್ ಸೆಟ್ ಗೋ ಉಪಕ್ರಮಕ್ಕೆ ಸಚಿವ ಅಶ್ವತ್ಥ ನಾರಾಯಣ ಚಾಲನೆ  Rating: 5 Reviewed By: karavali Times
Scroll to Top