ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಕೊಂಚ ಬದಲಾವಣೆಯೊಂದಿಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ - Karavali Times ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಕೊಂಚ ಬದಲಾವಣೆಯೊಂದಿಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ - Karavali Times

728x90

7 April 2022

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಕೊಂಚ ಬದಲಾವಣೆಯೊಂದಿಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

  ಬೆಂಗಳೂರು, ಎಪ್ರಿಲ್ 07, 2022 (ಕರಾವಳಿ ಟೈಮ್ಸ್) : 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ  ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ. 

ಕೆಲ‌ ತಾಂತ್ರಿಕ ಕಾರಣಗಳಿಂದ ವಿವಿಧ ವಿಷಯಗಳ ಪರೀಕ್ಷೆ ದಿನಾಂಕ ಮಾತ್ರ ಅದಲು ಬದಲು ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಬದಲಾವಣೆ ಮಾಡಿರುವ ವಿಷಯಗಳ ಅಂತಿಮ ವೇಳಾಪಟ್ಟಿ ಪದವಿಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. 

 ಈ ಮೊದಲು ತಿಳಿಸಿದಂತೆ ಎ. 22 ರಿಂದ‌ ಮೇ 18ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು ದಿನಾಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಿಷಯಗಳ ಪರೀಕ್ಷಾ ದಿನಾಂಕದಲ್ಲಿ ಸ್ವಲ್ಪ ಅದಲು-ಬದಲಾಗಿದೆ. 

 ಬದಲಾದ ವೇಳಾಪಟ್ಟಿ ಈ ರೀತಿ ಇದೆ : 

 ಎಪ್ರಿಲ್ 22 ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, 

ಎಪ್ರಿಲ್ 23 ರಂದು ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ, 

ಎಪ್ರಿಲ್ 25 ರಂದು ಅರ್ಥಶಾಸ್ತ್ರ, 

ಎಪ್ರಿಲ್ 26 ರಂದು ಮನಶ್ಶಾಸ್ತ್ರ, ರಸಾಯನ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ, 

ಎಪ್ರಿಲ್ 27 ರಂದು ತಮಿಳು, ತೆಲುಗು,ಮಲಾಯಳಂ, ಮರಾಠಿ, ಉರ್ದು, ಸಂಸ್ಕೃತ, ಪ್ರೆಂಚ್, 

ಎಪ್ರಿಲ್ 28 ರಂದು ಕನ್ನಡ, 

ಮೇ  4 ರಂದು ಭೂಗೋಳಶಾಸ್ತ್ರ, ಜೀವಶಾಸ್ತ್ರ, 

ಮೇ 5 ರಂದು ಮಾಹಿತಿ ತಂತ್ರಜ್ಞಾನ, ರಿಟೈಲ್ ಆಟೋಮೊಬೈಲ್, ಹೆಲ್ತ್ ಕೇರ್ ಬ್ಯೂಟಿ ಅಂಡ್ ವೆಲ್ ನೆಸ್, 

ಮೇ. 6 ರಂದು ಇಂಗ್ಲಿಷ್, 

ಮೇ 10 ರಂದು ಇತಿಹಾಸ, ಭೌತಶಾಸ್ತ್ರ , 

ಮೇ 12 ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, 

ಮೇ 14 ರಂದು ಸಮಾಜಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ, 

ಮೇ 17 ರಂದು ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ, 

ಮೇ 18 ರಂದು ಹಿಂದಿ ಪರೀಕ್ಷೆ ನಡೆಯಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಕೊಂಚ ಬದಲಾವಣೆಯೊಂದಿಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ Rating: 5 Reviewed By: karavali Times
Scroll to Top