ಎಪ್ರಿಲ್ 17 ರಂದು ಮೂಡೂರು-ಪಡೂರು ಖ್ಯಾತಿಯ ‘ಬಂಟ್ವಾಳ ಕಂಬಳ’ : ಅಧಿಕೃತ ದಿನಾಂಕ ಘೋಷಿಸಿದ ಕಂಬಳ ಸಮಿತಿ - Karavali Times ಎಪ್ರಿಲ್ 17 ರಂದು ಮೂಡೂರು-ಪಡೂರು ಖ್ಯಾತಿಯ ‘ಬಂಟ್ವಾಳ ಕಂಬಳ’ : ಅಧಿಕೃತ ದಿನಾಂಕ ಘೋಷಿಸಿದ ಕಂಬಳ ಸಮಿತಿ - Karavali Times

728x90

7 April 2022

ಎಪ್ರಿಲ್ 17 ರಂದು ಮೂಡೂರು-ಪಡೂರು ಖ್ಯಾತಿಯ ‘ಬಂಟ್ವಾಳ ಕಂಬಳ’ : ಅಧಿಕೃತ ದಿನಾಂಕ ಘೋಷಿಸಿದ ಕಂಬಳ ಸಮಿತಿ

ಬಂಟ್ವಾಳ, ಎಪ್ರಿಲ್ 07, 2022 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಗೌರವಾಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಹಲವು ವರ್ಷಗಳ ಬಳಿಕ ತಾಲೂಕಿನ ನಾವೂರು-ಕೂಡಿಬೈಲಿನಲ್ಲಿ ನಡೆಯುವ ಮೂಡೂರು-ಪಡೂರು ಖ್ಯಾತಿಯ ‘ಬಂಟ್ವಾಳ ಕಂಬಳ’ವು ಎಪ್ರಿಲ್ 17 ರಂದು ಭಾನುವಾರ ನಡೆಯಲಿದೆ ಎಂದು ಕಂಬಳ ಸಮಿತಿ ಅಧಿಕೃತ ದಿನಾಂಕ ಘೋಷಿಸಿದೆ. 

ಎಪ್ರಿಲ್ 4 ರಂದು ಸಂಜೆ ಕಂಬಳ ಗದ್ದೆಯಲ್ಲಿ ನಡೆದ ಕಂಬಳಾಸಕ್ತರ ಒಟ್ಟುಗೂಡಿವಿಕೆಯಿಂದ ಕಂಬಳ ಸಮಿತಿ ರಚಿಸಲಾಗಿದ್ದು, ಆ ಬಳಿಕ ಕಂಬಳದ ಅಧಿಕೃತ ದಿನಾಂಕ ಘೋಷಣೆಯಾಗಿದೆ. ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಲ್ಲಿ ನಿರಂತರ 10 ವರ್ಷಗಳ ಕಾಲ ಮೂಡೂರು-ಪಡೂರು ಜೋಡುಕರೆ ಕಂಬಳ ರಮಾನಾಥ ರೈ ಅವರ ಗೌರವಾಧ್ಯಕ್ಷತೆ ಹಾಗೂ ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಅಧ್ಯಕ್ಷತೆಯಲ್ಲಿ ನಡೆಸಲಾಗಿತ್ತು. ಆ ಬಳಿಕ ಕಾರಣಾಂತರಗಳಿಂದ ಕಂಬಳ ಸ್ಥಗಿತಗೊಂಡಿತ್ತು. 

ಇದೀಗ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿನ ಗದ್ದೆಯಲ್ಲಿ ಮತ್ತೆ ಮೂಡೂರು-ಪಡೂರು ಅದೇ ಹೆಸರಿನಲ್ಲಿ ನಡೆಸುವಂತೆ ರಮಾನಾಥ ರೈ ನೇತೃತ್ವದಲ್ಲಿ ತೀರ್ಮಾನಿಸಿ ಯುದ್ದೋಪಾದಿಯಲ್ಲಿ ಕರೆಯ ಕೆಲಸ ಕಾಮಗಾರಿಗಳು ಸಾಗಿ ಬಂದು ಇದೀಗ ಇದೇ ಸೀಸನಿನಲ್ಲಿ ಕಂಬಳ ನಡೆಸಲು ಉದ್ದೇಶಿಸಲಾಗಿತ್ತು. ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ನಡೆದುದರಿಂದ ಇದೀಗ ಕಂಬಳ ಸಮಿತಿ ರಚಿಸಿ ಕಂಬಳ ನಡೆಸಲು ಅಧಿಕೃತ ದಿನಾಂಕ ಘೋಷಣೆಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಎಪ್ರಿಲ್ 17 ರಂದು ಮೂಡೂರು-ಪಡೂರು ಖ್ಯಾತಿಯ ‘ಬಂಟ್ವಾಳ ಕಂಬಳ’ : ಅಧಿಕೃತ ದಿನಾಂಕ ಘೋಷಿಸಿದ ಕಂಬಳ ಸಮಿತಿ Rating: 5 Reviewed By: karavali Times
Scroll to Top