ಮಹಾವೀರರ ಅಹಿಂಸಾ ತತ್ವ ಪಾಲನೆಯಿಂದ ಜಗತ್ತಿನಲ್ಲೇ ಶಾಂತಿ ನೆಲೆಸಲು ಸಾಧ್ಯ : ರಶ್ಮಿ ಎಸ್.ಆರ್. - Karavali Times ಮಹಾವೀರರ ಅಹಿಂಸಾ ತತ್ವ ಪಾಲನೆಯಿಂದ ಜಗತ್ತಿನಲ್ಲೇ ಶಾಂತಿ ನೆಲೆಸಲು ಸಾಧ್ಯ : ರಶ್ಮಿ ಎಸ್.ಆರ್. - Karavali Times

728x90

14 April 2022

ಮಹಾವೀರರ ಅಹಿಂಸಾ ತತ್ವ ಪಾಲನೆಯಿಂದ ಜಗತ್ತಿನಲ್ಲೇ ಶಾಂತಿ ನೆಲೆಸಲು ಸಾಧ್ಯ : ರಶ್ಮಿ ಎಸ್.ಆರ್.

ಬಂಟ್ವಾಳ, ಎಪ್ರಿಲ್ 14, 2022 (ಕರಾವಳಿ ಟೈಮ್ಸ್) : ಅಹಿಂಸೆಯೇ ಪರಮ ಧರ್ಮ ಎಂದು ಮಹಾವೀರರು ಸಾರಿದ್ದಾರೆ. ಈ ಅಹಿಂಸೆಯ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪ್ರಪಂಚವೇ ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ ಎಂದು ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್ ಹೇಳಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಬಿ ಸಿ ರೋಡು ಮಿನಿ ವಿಧಾನಸೌಧ ಸಭಾಂಗಣದಲ್ಲಿ ಗುರುವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಈ ಸಂದರ್ಭ ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಪ್ರಮುಖರಾದ ಪಟ್ಟಾಜೆ ಜಿನರಾಜ ಅರಿಗ, ವಿಜಯ ಇಂದ್ರ, ಮನ್ಮಥರಾಜ ಕಾಜವ, ಮದುಶ್ರೀ ಜೀತೇಶ್, ಸನ್ಮತಿ ಜಯಕೀರ್ತಿ, ಹೇಮಂತ್ ಜೈನ್, ಹರ್ಷರಾಜ್ ಬಲ್ಲಾಳ್, ಉಪತಹಸೀಲ್ದಾರ್ ದಿವಾಕರ ಮುಗುಳಿಯ, ಕಂದಾಯ ನಿರೀಕ್ಷಕರಾದ ವಿಜಯ್ ಆರ್, ಸಂತೋಷ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಕುಮಾರ್ ಟಿ ಸಿ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮಹಾವೀರರ ಅಹಿಂಸಾ ತತ್ವ ಪಾಲನೆಯಿಂದ ಜಗತ್ತಿನಲ್ಲೇ ಶಾಂತಿ ನೆಲೆಸಲು ಸಾಧ್ಯ : ರಶ್ಮಿ ಎಸ್.ಆರ್. Rating: 5 Reviewed By: karavali Times
Scroll to Top