ಸ್ವಾತಂತ್ರ್ಯ ಬಂದು 75 ಕಳೆದರೂ ನಿವಾರಣೆಯಾಗದ ಅಸ್ಪøಶ್ಯತೆ ಬಗ್ಗೆ ಸ್ವಾಮೀಜಿಗಳು ಚಕಾರವೆತ್ತುತ್ತಿಲ್ಲ : ಸೇಸಪ್ಪ ಬೆದ್ರಕಾಡು ವಿಷಾದ - Karavali Times ಸ್ವಾತಂತ್ರ್ಯ ಬಂದು 75 ಕಳೆದರೂ ನಿವಾರಣೆಯಾಗದ ಅಸ್ಪøಶ್ಯತೆ ಬಗ್ಗೆ ಸ್ವಾಮೀಜಿಗಳು ಚಕಾರವೆತ್ತುತ್ತಿಲ್ಲ : ಸೇಸಪ್ಪ ಬೆದ್ರಕಾಡು ವಿಷಾದ - Karavali Times

728x90

14 April 2022

ಸ್ವಾತಂತ್ರ್ಯ ಬಂದು 75 ಕಳೆದರೂ ನಿವಾರಣೆಯಾಗದ ಅಸ್ಪøಶ್ಯತೆ ಬಗ್ಗೆ ಸ್ವಾಮೀಜಿಗಳು ಚಕಾರವೆತ್ತುತ್ತಿಲ್ಲ : ಸೇಸಪ್ಪ ಬೆದ್ರಕಾಡು ವಿಷಾದ

ಬಂಟ್ವಾಳ, ಎಪ್ರಿಲ್ 14, 2022 (ಕರಾವಳಿ ಟೈಮ್ಸ್) : ಪ್ರಸ್ತುತ ಕಾಲಘಟ್ಟದಲ್ಲಿ ಭಾರತದ ಸಂವಿಧಾನವನ್ನೇ ತಿರುಚುವಂತಹ ಷಡ್ಯಂತ್ರ ನಡೆಯುತ್ತಿದೆ, ಇದೀಗ ಒಂದು ವಿಭಾಗವನ್ನು ಗುರಿಯಾಗಿಸಿಕೊಂಡು ಪ್ರತ್ಯೇಕಿಸುತ್ತಾ ಬರುತ್ತಿರುವವರು ಮುಂದಿನ ದಿನಗಳಲ್ಲಿ ಇನ್ನೊಬ್ಬರ ಮೇಲೂ ದೌರ್ಜನ್ಯ ಎಸಗಲಿದ್ದಾರೆ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ದಲಿತ ಸೇವಾ ಸಮಿತಿ ಸಂಸ್ಥಾಪಕ ಸೇಸಪ್ಪ ಬೆದ್ರಕಾಡು ಎಚ್ಚರಿಸಿದರು. 

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಹಾಗೂ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಗುರುವಾರ ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಂಬೆಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗೈದ ಅವರು  ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಕಳೆದರೂ ಅಸ್ಪ್ರಶ್ಯತೆ ನಿರ್ಮೂಲನೆ ಇನ್ನೂ ಆಗಿಲ್ಲ, ಈ ಬಗ್ಗೆ ಸ್ವಾಮೀಜಿಗಳು ಚಕಾರವೆತ್ತುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದ ಅವರು ಅಸ್ಪ್ರಶ್ಯತೆ ನಿರ್ಮೂಲನೆಗಾಗಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಕೈಗೊಂಡ ದಿಟ್ಟ ನಿರ್ಧಾರದ ಬಗ್ಗೆ ಇದೇ ವೇಳೆ ಅವರು ಸ್ಮರಿಸಿಕೊಂಡರು. 

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ ವಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಉದ್ಘಾಟಿಸಿದರು. ಜಿ ಪಂ ಮಾಜಿ ಅಧ್ಯಕ್ಷ ಸೋಮನಾಥ, ಮಾಜಿ ಉಪಾಧ್ಯಕ್ಷ ಎಂ ಎಸ್ ಮುಹಮ್ಮದ್, ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿದರು.

ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹಸೈನಾರ್ ನೆಲ್ಲಿಗುಡ್ಡೆ, ಪದ್ಮಕುಮಾರಿ, ಲತಾವೇಣಿ, ಪಕ್ಷ ಪ್ರಮುಖರಾದ ಯು ಟಿ ತೌಸೀಫ್, ವಿ ಎ ರಶೀದ್ ವಿಟ್ಲ, ಪದ್ಮನಾಭ ಅಳಿಕೆ, ಹನೀಫ್ ಬಗ್ಗುಮೂಲೆ, ನಝೀರ್ ಮಠ, ಅಬ್ದುರ್ರಹ್ಮಾನ್ ಯುನಿಕ್, ಶ್ರೀನಿವಾಸ ಶೆಟ್ಟಿ ಕೊಲ್ಯ, ಮೋಹನ್ ಗುರ್ಜಿನಡ್ಕ, ಕರೀಂ ಕುದ್ದುಪದವು, ಇಬ್ರಾಹಿಂ ಉಪ್ಪಿನಂಗಡಿ, ಎಸ್ ಕೆ ಮುಹಮ್ಮದ್, ಎಲ್ಯಣ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. 

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್  ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ ಸ್ವಾಗತಿಸಿ, ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಸ್ವಾತಂತ್ರ್ಯ ಬಂದು 75 ಕಳೆದರೂ ನಿವಾರಣೆಯಾಗದ ಅಸ್ಪøಶ್ಯತೆ ಬಗ್ಗೆ ಸ್ವಾಮೀಜಿಗಳು ಚಕಾರವೆತ್ತುತ್ತಿಲ್ಲ : ಸೇಸಪ್ಪ ಬೆದ್ರಕಾಡು ವಿಷಾದ Rating: 5 Reviewed By: karavali Times
Scroll to Top