ಪಂಜಿಕಲ್ಲು : ಮನೆ ಬದಿಯ ಗುಡ್ಡ ಕುಸಿದು ಲಕ್ಷಾಂತರ ರೂಪಾಯಿ ನಷ್ಟ - Karavali Times ಪಂಜಿಕಲ್ಲು : ಮನೆ ಬದಿಯ ಗುಡ್ಡ ಕುಸಿದು ಲಕ್ಷಾಂತರ ರೂಪಾಯಿ ನಷ್ಟ - Karavali Times

728x90

5 July 2022

ಪಂಜಿಕಲ್ಲು : ಮನೆ ಬದಿಯ ಗುಡ್ಡ ಕುಸಿದು ಲಕ್ಷಾಂತರ ರೂಪಾಯಿ ನಷ್ಟ

ಬಂಟ್ವಾಳ, ಜುಲೈ 05, 2022 (ಕರಾವಳಿ ಟೈಮ್ಸ್) : ಸತತವಾಗಿ ಸುರಿಯುತ್ತಿರುವ ಗಾಳಿ-ಮಳೆಯಿಂದಾಗಿ ತಾಲೂಕಿನ ಪಂಜಿಕಲ್ಲು ಗ್ರಾಮದ, ಮುಕುಡ ನಿವಾಸಿ ಹೆನ್ರಿ ಕಾರ್ಲೋ ಅವರ ಮನೆ ಬದಿಯ ಗುಡ್ಡ ಕುಸಿತ ಉಂಟಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. 

ಅನಾಹುತದಿಂದಾಗಿ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಡಿಕೆ ಒಣಗಿಸುವ ಸೋಲಾರ್ ಗೂಡು ಸಂಪೂರ್ಣ ಮಣ್ಣಿನಡಿ ಸಿಲುಕಿ ಮುಚ್ಚು ಹೋಗಿದ್ದು, ಹಾನಿ ಸಂಭವಿಸಿದೆ. ದನದ ಕೊಟ್ಟಿಗೆಗೆ ಹಾಕಲಾದ ಸಿಮೆಂಟ್ ಸೀಟುಗಳು ಮುರಿದುಬಿದ್ದಿವೆ. 

ಈ ಬಗ್ಗೆ ಸ್ಥಳೀಯ ಗ್ರಾಮ ಕರಣಿಕರಿಗೆ ಈಗಾಗಲೇ ಮನೆ ಮಂದಿ ಮಾಹಿತಿ ನೀಡಿದ್ದು, ಗರಿಷ್ಠ ಮಟ್ಟದ ಪರಿಹಾರ ಒದಗಿಸಲು ಅಧಿಕಾರಿಗಳು ಸಹಕರಿಸುವಂತೆ ಹೆನ್ರಿ ಕಾರ್ಲೊ ಮನೆ ಮಂದಿ ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪಂಜಿಕಲ್ಲು : ಮನೆ ಬದಿಯ ಗುಡ್ಡ ಕುಸಿದು ಲಕ್ಷಾಂತರ ರೂಪಾಯಿ ನಷ್ಟ Rating: 5 Reviewed By: karavali Times
Scroll to Top