ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ಅಸೀಫ್ ಶಾಂತಿಅಂಗಡಿ ಹಂತಕರು ಬಂಟ್ವಾಳ ಪೊಲೀಸ್ ಬಲೆಗೆ - Karavali Times ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ಅಸೀಫ್ ಶಾಂತಿಅಂಗಡಿ ಹಂತಕರು ಬಂಟ್ವಾಳ ಪೊಲೀಸ್ ಬಲೆಗೆ - Karavali Times

728x90

5 July 2022

ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ಅಸೀಫ್ ಶಾಂತಿಅಂಗಡಿ ಹಂತಕರು ಬಂಟ್ವಾಳ ಪೊಲೀಸ್ ಬಲೆಗೆ

 ಬಂಟ್ವಾಳ, ಜುಲೈ 05, 2022 (ಕರಾವಳಿ ಟೈಮ್ಸ್) : ಬೈಕ್ ಹಾರ್ನ್ ಮಾಡಿದ ಎಂಬ ಕ್ಷುಲ್ಲಕ ನೆಪಕ್ಕಾಗಿ ಶಾಂತಿಅಂಗಡಿ ನಿವಾಸಿ ಆಸೀಫ್ ಎಂಬಾತನನ್ನು ಸೋಮವಾರ ರಾತ್ರಿ ಪೊನ್ನೋಡಿ ಬಳಿ ಇರಿದು ಕೊಂದ ಆರೋಪಿಗಳಾದ ಪುದು ಗ್ರಾಮದ ಮಾರಿಪಳ್ಳ ನಿವಾಸಿಗಳಾದ ಮಹಮ್ಮದ್ ನೌಫಾಲ್ ಹಾಗೂ ಮಹಮ್ಮದ್ ನೌಶೀರ್ ಎಂಬವರನ್ನು ಬಂಟ್ವಾಳ ನಗರ ಪೊಲೀಸರು ಮಂಗಳವಾರವೇ ಬಂಧಿಸುವಲ್ಲಿ ಸಫಲರಾಗಿದ್ದಾರೆ. 

 ಶಾಂತಿಅಂಗಡಿ ನಿವಾಸಿ ಮಹಮ್ಮದ್ ಆಶಿಫ್ ಹಾಗೂ ಕೊಲೆ ಆರೋಪಿಗಳು ಸ್ನೇಹಿತರಾಗಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಸೋಮವಾರ ರಾತ್ರಿ ತಲಪಾಡಿ ಬಳಿ ಜಗಳವಾಡಿಕೊಂಡಿದ್ದರು. ಜಗಳದಲ್ಲಿ ಉಂಟಾದ ಮಾತಿನ ಚಕಮಕಿ ಬಳಿಕ ಅಸೀಫನ ಕೊಲೆಯಲ್ಲಿ ಪರ್ಯಾವಸಾನಗೊಂಡಿತ್ತು. 

 ಈ ಬಗ್ಗೆ ಕೊಲೆಯಾದ ಆಸೀಫನ ಸ್ನೇಹಿತ ನೌಫಲ್ ಶಾಂತಿಅಂಗಡಿ ಎಂಬಾತ ಠಾಣೆಗೆ ನೀಡಿದ ದೂರಿನಂತೆ ಕಾರ್ಯಪ್ರವೃತ್ತರಾದ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ನೇತೃತ್ವದ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ಅಸೀಫ್ ಶಾಂತಿಅಂಗಡಿ ಹಂತಕರು ಬಂಟ್ವಾಳ ಪೊಲೀಸ್ ಬಲೆಗೆ Rating: 5 Reviewed By: karavali Times
Scroll to Top