ತುಳು ಸಾಹಿತ್ಯ ಅಕಾಡೆಮಿಯಿಂದ ಜುಲೈ 16 ರಿಂದ 22ರವರೆಗೆ “ತುಳು ನಾಟಕ ಪರ್ಬ-2022” - Karavali Times ತುಳು ಸಾಹಿತ್ಯ ಅಕಾಡೆಮಿಯಿಂದ ಜುಲೈ 16 ರಿಂದ 22ರವರೆಗೆ “ತುಳು ನಾಟಕ ಪರ್ಬ-2022” - Karavali Times

728x90

15 July 2022

ತುಳು ಸಾಹಿತ್ಯ ಅಕಾಡೆಮಿಯಿಂದ ಜುಲೈ 16 ರಿಂದ 22ರವರೆಗೆ “ತುಳು ನಾಟಕ ಪರ್ಬ-2022”

ಮಂಗಳೂರು, ಜುಲೈ 15, 2022 (ಕರಾವಳಿ ಟೈಮ್ಸ್) : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ಇವುಗಳ ಜಂಟಿ ಆಶ್ರಯದಲ್ಲಿ ಅಕಾಡೆಮಿಯ ಸಿರಿಚಾವಡಿಯಲ್ಲಿ ಜುಲೈ 16 ರಿಂದ 22ರವರೆಗೆ “ತುಳು ನಾಟಕ ಪರ್ಬ-2022” ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದೇ ಈ ನಾಟಕ ಪರ್ಬದ ಉದ್ದೇಶವಾಗಿರುತ್ತದೆ. 

ಜು 16 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ  ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಸಹಿತ ಮನಪಾ ಸದಸ್ಯರು, ಆಯುಕ್ತರು, ರಂಗಭೂಮಿ ಹಿರಿಯ ಕಲಾವಿದರು, ತುಳು ಸಿನೆಮಾ ನಟ, ನಿರ್ದೇಶಕರು, ಅಕಾಡೆಮಿ ಸದಸ್ಯರು ಭಾಗವಹಿಸಲಿದ್ದಾರೆ. 

7 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಒಟ್ಟು 9 ತುಳು ನಾಟಕಗಳು ಪ್ರದರ್ಶನಗೊಳ್ಳಲಿದೆ. 

ನವರಸ ಕಲಾವಿದೆರ್, ಓಂಶಕ್ತಿ ಗೆಳೆಯರ ಬಳಗ ಲಾೈಲಾ ಬೆಳ್ತಂಗಡಿ ಅವರಿಂದ “ತುಂಗಭದ್ರ”, ಶ್ರೀ ವಿಷ್ಣು ಕಲಾ ತಂಡ, ತುಳುವಪ್ಪೆ ಕಲಾವಿದೆರ್ ಪೆರ್ನೆ ಇವರಿಂದ “ಕುಡ ಒಂಜಾಕ”, ಅಭಿನಯ ಕಲಾವಿದೆರ್ ಮಂಕುಡೆ ಕುಡ್ತಮುಗೇರು ಇವರಿಂದ “ಈ ತೆರಿನಗ”, ಕಲಾಮೃತ ಕಲಾವಿದೆರ್ (ರಿ) ವಾಮಂಜೂರ್ ಇವರಿಂದ “ಕಥೆ ಏರ್ ಬರೆಪೆರ್?”, ಸಿಂಗಾರ ಕಲಾವಿದೆರ್ ಬಜಗೋಳಿ ಇವರಿಂದ “ನಂಬುಗೆದ ಬೊಲ್ಪು”, ವಿಷ್ಣು ಕಲಾವಿದೆರ್ ಮದ್ದಡ್ಕ ಇವರಿಂದ “ಆ.. ದೇವೆರ್ ತೂವಡ್”, ಸೃಷ್ಟಿ ಕಲಾವಿದೆರ್ ನೆಲ್ಲಿಗುಡ್ಡೆ, ಬಜಗೋಳಿ ಇವರಿಂದ “ಕಾಲ ತತ್ತ್‍ಂಡ  ಏರೆನ್ಲಾ ಬುಡಯೆ”, ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಇವರಿಂದ “ಅಮ್ಮಾ ಎನ್ನಮ್ಮಾ” ಮತ್ತು ಮಂಜುಶ್ರೀ ಕಲಾವಿದೆರ್ ಮಂಗಳೂರು ಇವರಿಂದ “ದಿಸೆ ತಿರ್ಗ್‍ನಗ” ತುಳು ನಾಟಕಗಳು ಪ್ರದರ್ಶನಗೊಳ್ಳಲಿದೆ. 

ಜುಲೈ 22 ರಂದು ಅಪರಾಹ್ನ 3 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮನಪಾ  ಮೇಯರ್ ಪ್ರೇಮಾನಂದ ಶೆಟ್ಟಿ, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್, ಮನಪಾ ಸದಸ್ಯರು, ಆಯುಕ್ತರು, ರಂಗಭೂಮಿ ಹಿರಿಯ ಕಲಾವಿದರು, ತುಳು ಸಿನೆಮಾ ನಟ, ನಿರ್ದೇಶಕರು, ಅಕಾಡೆಮಿ ಸದಸ್ಯರು ಭಾಗವಹಿಸಲಿದ್ದಾರೆ. 

ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ನಾಟಕ ವೀಕ್ಷಿಸಲು  ಮುಕ್ತ ಅವಕಾಶವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ತುಳು ಸಾಹಿತ್ಯ ಅಕಾಡೆಮಿಯಿಂದ ಜುಲೈ 16 ರಿಂದ 22ರವರೆಗೆ “ತುಳು ನಾಟಕ ಪರ್ಬ-2022” Rating: 5 Reviewed By: karavali Times
Scroll to Top