ಗೋಳ್ತಮಜಲು : ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ಪ್ರವೀಣ್ ಅವರಿಗೆ ಸನ್ಮಾನ, ಪ್ರಶಸ್ತಿ ಜೊತೆ ದೊರೆತ ನಗದು ಶಾಲಾಭಿವೃದ್ದಿಗೆ ನೀಡಿದ ಶಿಕ್ಷಕ - Karavali Times ಗೋಳ್ತಮಜಲು : ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ಪ್ರವೀಣ್ ಅವರಿಗೆ ಸನ್ಮಾನ, ಪ್ರಶಸ್ತಿ ಜೊತೆ ದೊರೆತ ನಗದು ಶಾಲಾಭಿವೃದ್ದಿಗೆ ನೀಡಿದ ಶಿಕ್ಷಕ - Karavali Times

728x90

11 September 2022

ಗೋಳ್ತಮಜಲು : ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ಪ್ರವೀಣ್ ಅವರಿಗೆ ಸನ್ಮಾನ, ಪ್ರಶಸ್ತಿ ಜೊತೆ ದೊರೆತ ನಗದು ಶಾಲಾಭಿವೃದ್ದಿಗೆ ನೀಡಿದ ಶಿಕ್ಷಕ

ಬಂಟ್ವಾಳ, ಸೆಪ್ಟೆಂಬರ್ 11, 2022 (ಕರಾವಳಿ ಟೈಮ್ಸ್) : 2022-23ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲಾ ಶಿಕ್ಷಕ ಪ್ರಶಸ್ತಿ ಪಡೆದ ತಾಲೂಕಿನ ಗೋಳ್ತಮಜಲು-ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಪ್ರವೀಣ್ ಅವರನ್ನು ಶಾಲಾ ಎಸ್ ಡಿ ಎಂ ಸಿ ಹಾಗೂ ವಿದ್ಯಾರ್ಥಿ ಪೋಷಕರ ವತಿಯಿಂದ ಸನ್ಮಾನಿಸಲಾಯಿತು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಪ್ರವೀಣ್, ಪ್ರಶಸ್ತಿಯ ಹಿಂದೆ ಶಾಲಾ ವಿಧ್ಯಾರ್ಥಿಗಳು, ಪೆÇೀಷಕರು, ಶಿಕ್ಷಕರು, ಊರವರ ಮತ್ತು ಸಂಘ-ಸಂಸ್ಥೆಗಳ ಪ್ರೋತ್ಸಾಹ ಇದ್ದು, ನಿಮ್ಮೆಲ್ಲರ ಪ್ರೀತಿಗೆ ನಾನು ಋಣಿಯಾಗಿದ್ದೇನೆ, ಈ ಪ್ರಶಸ್ತಿಯು ಈ ಊರಿನ ವಿದ್ಯಾಭಿಮಾನಿಗಳಿಗೆ ಸಂದ ಗೌರವವಾಗಿದೆ ಎಂದರಲ್ಲದೆ ಜಿಲ್ಲಾ ಮಟ್ಟದ ಪ್ರಶಸ್ತಿ ಜೊತೆ ದೊರೆತ ನಗದು ಹಣವನ್ನು ಶಾಲೆಯ ಅಭಿವೃದ್ಧಿಗಾಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಇದೇ ವೇಳೆ ಶಾಲಾ ಹಿರಿಯ ವಿದ್ಯಾರ್ಥಿಗಳಿಂದ ಉತ್ತಮ ಶಿಕ್ಷಕ ಎನ್ನುವ ಪ್ರಹಸನ ಹಾಗೂ ಶಾಲಾ ವಿದ್ಯಾರ್ಥಿಗಳು ಶಿಕ್ಷಕ ಪ್ರವೀಣರ ಬಗ್ಗೆ ಸ್ವ ಬರೆದ  ಚುಟುಕು ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಶಾಲಾ  ಮಕ್ಕಳಿಗೆ ನಳಿನಾಕ್ಷಿ ಈಶ್ವರ ಕುಲಾಲ್ ಕೊಡುಗೆಯಾಗಿ ನೀಡಿದ ಗುರುತಿನ ಕಾರ್ಡನ್ನು ವಿತರಿಸಲಾಯಿತು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭಾಸ್ಕರ್ ಕುಲಾಲ್, ಉಪಾಧ್ಯಕ್ಷೆ ಚಂಚಲಾಕ್ಷಿ, ನೆಟ್ಲ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಣಿ ಸೆಲಿನಾ ಪಿಂಟೋ ಮೊದಲಾದವರು ಭಾಗವಹಿಸಿದ್ದರು. 

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಬಾಲತ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಮನೋಜ್ ವಂದಿಸಿದರು. ಕಲಾ ಶಿಕ್ಷಕ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಗೋಳ್ತಮಜಲು : ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ಪ್ರವೀಣ್ ಅವರಿಗೆ ಸನ್ಮಾನ, ಪ್ರಶಸ್ತಿ ಜೊತೆ ದೊರೆತ ನಗದು ಶಾಲಾಭಿವೃದ್ದಿಗೆ ನೀಡಿದ ಶಿಕ್ಷಕ Rating: 5 Reviewed By: karavali Times
Scroll to Top