ಬೆಳ್ಳಾರೆ, ಸೆಪ್ಟೆಂಬರ್ 11, 2022 (ಕರಾವಳಿ ಟೈಮ್ಸ್) : ಸುಳ್ಯ ತಾಲೂಕು, ಬೆಳ್ಳಾರೆ ಗ್ರಾಮದ ದೇವಿ ಹೈಟ್ಸ್ ಲಾಡ್ಜ್ ಮ್ಯಾನೇಜರ್, ಸ್ಥಳೀಯ ನಿವಾಸಿ ಪ್ರಶಾಂತ್ ಪೂಂಜಾ ಬಿನ್ ರವೀಂದ್ರ ಪೂಂಜಾ (28) ಅವರಿಗೆ ಶನಿವಾರ ದೂರವಾಣಿ ಮೂಲಕ ನಿಂದಿಸಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ನೀಡಲಾದ ದೂರಿಗೆ ಸಂಬಂಧಿಸಿದಂತೆ ಆರೋಪಿ ಬೆಳ್ಳಾರೆ ಕಲ್ಪವೃಕ್ಷ ಆರ್ಕೆಡ್ ನಿವಾಸಿ ಇಬ್ರಾಹಿಂ ಅವರ ಪುತ್ರ ಸಪ್ರಿತ್ ಯಾನೆ ಸಫ್ರಿಜ್ (21) ಎಂಬಾತನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಶನಿವಾರ (ಸೆ 10) ರಂದು ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ನಿವಾಸಿ ಪ್ರಶಾಂತ ಪೂಂಜ ಅವರು ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ದೇವಿ ಹೈಟ್ಸ್ ಲಾಡ್ಜಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವ ಸಮಯ ಪರಿಚಯದ ಅಬ್ದುಲ್ ಸಪ್ರಿತ್ ಮೊಬೈಲ್ ನಂಬ್ರ 9731735306 ರಿಂದ ಪ್ರಶಾಂತ್ ಪೂಂಜಾ ಅವರ ಮೊಬೈಲ್ ನಂಬ್ರ 9743891331 ಗೆ ಕರೆ ಮಾಡಿ ವಿನಾ ಕಾರಣ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುತ್ತಾನೆ ಎಂಬಿತ್ಯಾದಿ ನೀಡಿದ ದೂರನ್ನು ಠಾಣಾ ಎನ್ ಸಿ ಆರ್ ನಂಬರ್ 88/2022 ರಂತೆ ನೊಂದಾಯಿಸಿಕೊಂಡು ಇದೊಂದು ಅಸಂಜ್ಞೆಯ ಅಪರಾಧವಾಗಿರುವುದರಿಂದ ನ್ಯಾಯಾಲಯಕ್ಕೆ ಕಲಂ 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳುವ ಅನುಮತಿ ನೀಡುವಂತೆ ಕೋರಿಕೆ ಪತ್ರ ಸಲ್ಲಿಸಲಾಗಿದ್ದು, ಅದರಂತೆ ನ್ಯಾಯಾಲಯದ ಅನುಮತಿ ಪ್ರಕಾರ ಆರೋಪಿ ಅಬ್ದುಲ್ ಸಪ್ರೀತ್ ಯಾನೆ ಅಬ್ದುಲ್ ಸಫ್ರಿಜ್ ಎಂಬಾತನ ವಿರುದ್ಧ ಕಲಂ 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
0 comments:
Post a Comment