ಇಡ್ಕಿದು ಮನೆ ಕಳವು ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು : ಮಾರಾಟ ಮಾಡಿದ ಚಿನ್ನಾಭರಣ ಸಹಿತ ಕೇರಳ ಮೂಲದ ಆರೋಪಿ ದಸ್ತಗಿರಿ - Karavali Times ಇಡ್ಕಿದು ಮನೆ ಕಳವು ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು : ಮಾರಾಟ ಮಾಡಿದ ಚಿನ್ನಾಭರಣ ಸಹಿತ ಕೇರಳ ಮೂಲದ ಆರೋಪಿ ದಸ್ತಗಿರಿ - Karavali Times

728x90

30 October 2022

ಇಡ್ಕಿದು ಮನೆ ಕಳವು ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು : ಮಾರಾಟ ಮಾಡಿದ ಚಿನ್ನಾಭರಣ ಸಹಿತ ಕೇರಳ ಮೂಲದ ಆರೋಪಿ ದಸ್ತಗಿರಿ

ಬಂಟ್ವಾಳ, ಅಕ್ಟೋಬರ್ 30, 2022 (ಕರಾವಳಿ ಟೈಮ್ಸ್) : ತಾಲೂಕಿನ ಇಡ್ಕಿದು ಗ್ರಾಮದ ಮಿತ್ತೂರು ನಿವಾಸಿ  ಹಂಝ ಮುರ ಉಮ್ಮರ್ ಎಂಬವರ ಮನೆಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಮನೆ ಕಳ್ಳತನ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ಚಿನ್ನಾಭರಣ ಸಹಿತ ಕೇರಳ ಮೂಲದ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. 

ಇಡ್ಕಿದು ನಿವಾಸಿ ಹಂಝ ಅವರ ಮನೆಯಲ್ಲಿ ಕಳೆದ ಮಾರ್ಚ್ 9 ರಂದು ರಾತ್ರಿ 11 ರಿಂದ ಮಾ 10 ರ ಬೆಳಗ್ಗಿನ ಜಾನ 4 ಗಂಟೆಯ ಮಧ್ಯದ ಅವಧಿಯಲ್ಲಿ ಮನೆ ಮಂದಿ ಹಾಗೂ ಸಂಬಂಧಿಕರು ಮನೆಯಲ್ಲಿರುವಾಗಲೇ ಮನೆಯ ಹಿಂಬಾಗಿಲು ಮುರಿದು ಮನೆಯ ಕಪಾಟಿನಲ್ಲಿದ್ದ ಸುಮಾರು 4.28 ಲಕ್ಷ ರೂಪಾಯಿ ಮೌಲ್ಯದ 107 ಗ್ರಾಂ ಚಿನ್ನವನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2022 ಕಲಂ 457 380  ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. 

ಈ ಬಗ್ಗೆ ತನಿಖೆ ಕೈಗೊಂಡು ಕಾರ್ಯಪ್ರವೃತ್ತರಾದ ಪೊಲೀಸರು ಕೇರಳದ ಕಣ್ಣೂರು ಜಿಲ್ಲೆಯ ಕೋಟಪರಂಬ ಗ್ರಾಮದ ಆಲಕೋಡ್ ಅಂಚೆ ವ್ಯಾಪ್ತಿಯ ಕೊಲ್ಲಪರಂಬಿಲ ನಿವಾಸಿ ಯೂಸುಫ್ ಅವರ ಪುತ್ರ ಮಹಮ್ಮದ್ ಕೆ ಯು (42) ಎಂಬಾತನನ್ನು ವಿಚಾರಿಸಿದಾಗ ಕಳ್ಳತನವಾದ ಸ್ವತ್ತುಗಳನ್ನು ಕಾಸರಗೋಡಿನಲ್ಲಿ ಮಾರಾಟ ಮಾಡಿದ ಬಗ್ಗೆ ತಿಳಿಸಿದ ಹಿನ್ನಲೆಯಲ್ಲಿ ಕಳವು ಮಾಲನ್ನು ಕಾಸರಗೂಡಿನ ಜುವ್ಯೆಲ್ಲರಿ ಅಂಗಡಿಯಿಂದ 3,71,600/- ರೂಪಾಯಿ ಮೌಲ್ಯದ ಸುಮಾರು 80.10 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಇಡ್ಕಿದು ಮನೆ ಕಳವು ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು : ಮಾರಾಟ ಮಾಡಿದ ಚಿನ್ನಾಭರಣ ಸಹಿತ ಕೇರಳ ಮೂಲದ ಆರೋಪಿ ದಸ್ತಗಿರಿ Rating: 5 Reviewed By: karavali Times
Scroll to Top