ಮಂಗಳೂರು ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಲಕೋಟೆ ಹಾಗೂ ಪಿಚ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ - Karavali Times ಮಂಗಳೂರು ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಲಕೋಟೆ ಹಾಗೂ ಪಿಚ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ - Karavali Times

728x90

30 October 2022

ಮಂಗಳೂರು ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಲಕೋಟೆ ಹಾಗೂ ಪಿಚ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ

ಮಂಗಳೂರು, ಅಕ್ಟೋಬರ್ 30, 2022 (ಕರಾವಳಿ ಟೈಮ್ಸ್) : ಮಂಗಳೂರು ಅಂಚೆ ಇಲಾಖೆ ವತಿಯಿಂದ ‘ಮಂಗಳೂರು ಟೈಲ್ಸ್’ ಮತ್ತು ‘ಮಂಗಳೂರಿನಲ್ಲಿ ಖಾಕಿ ಬಣ್ಣದ ಆವಿಷ್ಕಾರ’ದ ಬಗ್ಗೆ ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ಎರಡು ವಿಶೇಷ ಅಂಚೆ ಲಕೋಟೆ ಬಿಡುಗಡೆ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ‘ಜಿನ ರತ್ನ ಭೂಷಣರು’ ವಿಷಯದ ಕುರಿತು 10 ವಿವಿಧ ಐತಿಹಾಸಿಕ ವ್ಯಕ್ತಿಗಳ ಪಿಚ್ಚರ್ ಪೆÇೀಸ್ಟ್ ಕಾರ್ಡ್ ಬಿಡುಗಡೆ ಕಾರ್ಯಕ್ರಮ ಭಾನುವಾರ (ಅ 30) ನಡೆಯಿತು. 

ಮಂಗಳೂರಿನಲ್ಲೇ ಮೊದಲು ತಯಾರಾಗಿ ವಿಶ್ವದ ಹಲವು ದೇಶಗಳಿಗೆ ರವಾನೆಯಾಗಿ ತನ್ನದೇ ಆದ ಛಾಪು ಮೂಡಿಸಿದ ಮಂಗಳೂರು ಟೈಲ್ಸ್ ಗುರುತಿಸಲು ಇಂದು ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಯಿತು. ಮಿಷನರಿ ಜಾರ್ಜ್ ಪ್ಲೆಬ್ಸ್ಟ್ ಅವರ ಮೇಲ್ವಿಚಾರಣೆಯಲ್ಲಿ ಟೈಲ್ ಉದ್ಯಮವು ಮಂಗಳೂರಿನಲ್ಲಿ ಪ್ರಾರಂಭವಾಯಿತು. ಅವರು ಜರ್ಮನಿಯ ಟೈಲ್ ತಯಾರಿಕೆಯ ಜ್ಞಾನವನ್ನು ಮತ್ತು ಭಾರತದಲ್ಲಿನ ಸಾಂಪ್ರದಾಯಿಕ ಕುಂಬಾರರ ಅಂಚುಗಳ ಅವಲೋಕನಗಳನ್ನು ಸಂಯೋಜಿಸಿದರು. ಈ ಹೊಸ ವಿನ್ಯಾಸವು 1865 ರಲ್ಲಿ ಮಂಗಳೂರಿನ ಜೆಪ್ಪುವಿನಲ್ಲಿ ಮೊದಲ ಬಾಸೆಲ್ ಮಿಷನ್ ಟೈಲ್ ಕಾರ್ಖಾನೆಯನ್ನು ಸ್ಥಾಪಿಸಲು ಪ್ರೇರೆಪಿಸಿತು. ಇದರ ಯಶಸ್ಸು ಮಂಗಳೂರಿನಲ್ಲಿ ಆಲ್ಬುಕರ್ಕ್ ಮತ್ತು ಸನ್ಸ್, ರೆಗೊ ಮತ್ತು ಸನ್ಸ್, ಕ್ಯಾಸಿಯಾ ಸೇರಿದಂತೆ ಸ್ಪರ್ಧಾತ್ಮಕ ಕಾರ್ಖಾನೆಗಳ ಸ್ಥಾಪನೆಗೆ ನಾಂದಿ ಹಾಡಿತು. ಪ್ರಸ್ತುತ ಮಂಗಳೂರು ಟೈಲ್ಸ್ ತನ್ನ ಸದೃಢತೆ ಹಾಗೂ ವಿಶಿಷ್ಟ ವಿನ್ಯಾಸದಿಂದ ವಿಶ್ವದ ಗಮನ ಸೆಳೆದಿದೆ.  ಮಂಗಳೂರಿನ ಈ ಅಪೂರ್ವ ಉತ್ಪನ್ನವು ಈ ವಿಶೇಷ ಅಂಚೆ ಲಕೋಟೆಯ ಮೂಲಕ ಸ್ಮರಿಸಲ್ಪಡುತ್ತಿದೆ.  

ಬ್ರಿಟಿಷರ ಮೂಲಕ ಜಗತ್ತಿನಾದ್ಯಂತ ಪಸರಿಸಿದ ವಿವಿಧ ಸರಕಾರಿ ಇಲಾಖೆಗಳ, ಸೇನೆಯ ಯೂನಿಫಾರ್ಮ್ ಬಣ್ಣ ಖಾಕಿಯ ಹುಟ್ಟು ಮಂಗಳೂರಿನಲ್ಲಿ (19ನೇ ಶತಮಾನದ ಸರಿಸುಮಾರು ಮಧ್ಯಭಾಗದಲ್ಲಿ) ಆಗಿರುವುದನ್ನು ಗುರುತಿಸಲು ವಿಶೇಷ ಅಂಚೆ ಲಕೋಟೆ ಬಿಡುಗಡೆ. 

1851 ರಲ್ಲಿ ಮಂಗಳೂರಿನ ಬಲ್ಮಠದಲ್ಲಿರುವ ಬಾಸೆಲ್ ಮಿಷೆನ್ ನ ನೇಯ್ಗೆ ಸಂಸ್ಥೆಯಲ್ಲಿ ಸೆಮಿ ಕಾರ್ಪಸ್ ಮರದ ತೊಗಟೆಯಿಂದ ಹೊಸ ಖಾಕಿ ಬಣ್ಣವನ್ನು ಯುರೋಪಿನ ನೇಕಾರ ಜಾನ್ ಹಾಲರ್ ಕಂಡು ಹಿಡಿದರು. ಖಾಕಿ ಬಣ್ಣದ ಆವಿಷ್ಕಾರದೊಂದಿಗೆ ನೇಯ್ಗೆ ಉದ್ಯಮವು ಅನೇಕ ಜನರಿಗೆ ಉದ್ಯೋಗವನ್ನು ನೀಡುವಲ್ಲಿ ಯಶಸ್ಪಿಯಾಯಿತು. ಬ್ರಿಟಿಷ್ ಇಂಡಿಯನ್ ಆರ್ಮಿ ಕಮಾಂಡರ್ ಇನ್ ಚೀಫ್ ಲಾರ್ಡ್ ರಾಬರ್ಟ್ಸ್ ನೇಯ್ಗೆ ಕಾರ್ಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಖಾಕಿ ಬಣ್ಣದಿಂದ ಸಂತಸಗೊಂಡರು. ಅವರು ಇದನ್ನು ಪ್ರಪಂಚದಾದ್ಯಂತ ಬ್ರಿಟಿಷ್ ಸೈನ್ಯದ ಸಮವಸ್ತ್ರವೆಂದು ಪರಿಚಯಿಸಿದರು. ಹೀಗೆ ಮಂಗಳೂರಿನಲ್ಲಿ ನಡೆದ ಈ ವಿಶಿಷ್ಟ ಆವಿಷ್ಕಾರವು ಈ ವಿಶೇಷ ಅಂಚೆ ಲಕೋಟೆಯ ಮೂಲಕ ಸ್ಮರಿಸಲ್ಪಡುತ್ತಿದೆ. ಈ ಎರಡೂ ಅಂಚೆ ಲಕೋಟೆಗಳನ್ನು ಕರ್ನಾಟಕ ವೃತ್ತದ ಮುಖ್ಯ ಪೆÇೀಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿದರು. 

ಈ ಎರಡೂ ಅಂಚೆ ಲಕೋಟೆಗಳ ಬಿಡುಗಡೆ ನಡೆಯುತ್ತಿರುವುದು ಚಾರಿತ್ರಿಕವಾದ ಮಹತ್ವವಿರುವ ದಿನ, ಅಕ್ಟೋಬರ್ 30 ರಂದು. ಮಂಗಳೂರು ಹಂಚುಗಳು ಹಾಗೂ ಖಾಕಿ ಬಣ್ಣ ಮಂಗಳೂರಿನಲ್ಲಿ ಮೊದಲಾಗಿ ಅನ್ವೇಷಣೆಗೊಳ್ಳಲು ಪ್ರಮುಖ ಪಾತ್ರ ವಹಿಸಿದ ಬಾಸೆಲ್ ಮಿಷನ್ ನ ಮೊದಲ ಮೂರು ಮಿಷನರಿಗಳು ಮಂಗಳೂರಿಗೆ ಬಂದಿಳಿದ ದಿನ 1834 ರ ಅಕ್ಟೋಬರ್ 30. 

ಇದಲ್ಲದೆ ಈ ದಿನ, ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿ ಕನ್ನಡ ನಾಡನ್ನು  ಶ್ರೀಮಂತಗೊಳಿಸಿದ 10 ಮಂದಿ ಜಿನ ರತ್ನ ಭೂಷಣರಾದ ಚಾವುಂಡರಾಯ, ಅತ್ತಿಮಬ್ಬೆ, ಚೆನ್ನ ಭೈರಾದೇವಿ, ಜನ್ನ, ರತ್ನಾಕರವರ್ಣಿ, ಶಾಂತಲಾ, ಪೆÇನ್ನ, ರಾಣಿ ಅಬ್ಬಕ್ಕ, ಪಂಪ, ರನ್ನ ಮುಂತಾದವರ  ಪಿಚ್ಚರ್ ಪೆÇೀಸ್ಟ್ ಕಾರ್ಡ್ ಗಳ ಬಿಡುಗಡೆಯನ್ನು ಭಾರತೀಯ ಅಂಚೆ ಇಲಾಖೆ ಮಾಡಿದೆ. 

67ನೇ ಕನ್ನಡ ರಾಜ್ಯೋತ್ಸವದ ಆಚರಣೆಯ ಈ ಸಂದರ್ಭದಲ್ಲಿ ಈ ಪಿಚ್ಚರ್ ಪೆÇೀಸ್ಟ್ ಕಾರ್ಡ್ ಗಳ ಬಿಡುಗಡೆ ಮಹತ್ವದ್ದಾಗಿದೆ. ಇವುಗಳನ್ನು ಕೂಡ ಮುಖ್ಯ ಪೆÇೀಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್  ಬಿಡುಗಡೆಗೊಳಿಸಿದರು. ಇವುಗಳ ವಿಶೇಷತೆಯೆಂದರೆ ಪ್ರತಿ ಪಿಚ್ಚರ್ ಪೆÇೀಸ್ಟ್ ಕಾರ್ಡ್ ಕೂಡ ಅನನ್ಯವಾದ ಕ್ಯೂಆರ್ ಕೋಡ್ ಹೊಂದಿದ್ದು, ಇದನ್ನು ಸ್ಕ್ಯಾನ್ ಮಾಡಿದಾಗ ಆ ಪಿಚ್ಚರ್ ಪೆÇೀಸ್ಟ್ ಕಾರ್ಡ್ ಪ್ರತಿನಿಧಿಸುವ ವ್ಯಕ್ತಿಗಳ ಸಾಧನೆ ತಿಳಿಸುವ ಅಂತರ್ಜಾಲ ತಾಣದ ವೆಬ್ ಲಿಂಕ್ ತೆರೆದುಕೊಳ್ಳುವುದು. 

ಕಾರ್ಯಕ್ರಮದಲ್ಲಿ ಪುತ್ತೂರು ಸುದಾನ ಸಂಸ್ಥೆಯ ರೆ ವಿಜಯ್ ಹಾರ್ವಿನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ ಪೀಟರ್ ವಿಲ್ಸನ್ ಪ್ರಭಾಕರ್ ಅವರು ಮಂಗಳೂರು ಹಂಚು ಹಾಗೂ ಮಂಗಳೂರಿನಲ್ಲಿ ಖಾಕಿ ಬಣ್ಣದ ಉಗಮದ ಬಗೆಗಿನ ಇತಿಹಾಸದ ಬಗ್ಗೆ ವಿವರಿಸಿದರು. ಪ್ರೊ ಎಸ್ ಪಿ ಅಜಿತ್ ಪ್ರಸಾದ್ ಅವರು ಜಿನ ರತ್ನ ಭೂಷಣರ ಬಗ್ಗೆ ಮಾತನಾಡಿದರು. 

ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಸ್ಪಾಗತಿಸಿ, ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಎನ್ ಬಿ ವಂದಿಸಿದರು. ಈ ಸಂದರ್ಭ ನಿವೃತ್ತ ಸದಸ್ಯ ಡಾ ಚಾರ್ಲ್ ಲೋಬೊ, ಮಂಡೋವಿ ಮೋಟಾರ್ಸ್ ಅಸೋಸಿಯೇಟ್ಟ ಉಪಾಧ್ಯಕ್ಷ ನೆರೆನ್ಕಿ ಪಾರ್ಶ್ವನಾಥ, ಮಂಗಳೂರು ಪ್ರಧಾನ ಅಂಚೆ ಕಚೇರಿಯ ಹಿರಿಯ ಅಂಚೆ ಪಾಲಕಿ ಶ್ರೀಮತಿ ಸೀತಮ್ಮ, ಮೊದಲಾದವರು ಭಾಗವಹಿಸಿದ್ದರು. ಶ್ರೀಮತಿ ಅಕ್ಷತಾ ಮಲ್ಯ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಲಕೋಟೆ ಹಾಗೂ ಪಿಚ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ Rating: 5 Reviewed By: karavali Times
Scroll to Top