ನಂದಿನಿ ಹಾಲು, ಮೊಸರಿನ ದರ ಲೀಟರಿಗೆ 2 ರೂಪಾಯಿ ಹೆಚ್ಚಿಸಿ ಕೆಎಂಎಫ್ ಆದೇಶ, ತಕ್ಷಣದಿಂದಲೇ ನೂತನ ದರ ಜಾರಿ - Karavali Times ನಂದಿನಿ ಹಾಲು, ಮೊಸರಿನ ದರ ಲೀಟರಿಗೆ 2 ರೂಪಾಯಿ ಹೆಚ್ಚಿಸಿ ಕೆಎಂಎಫ್ ಆದೇಶ, ತಕ್ಷಣದಿಂದಲೇ ನೂತನ ದರ ಜಾರಿ - Karavali Times

728x90

23 November 2022

ನಂದಿನಿ ಹಾಲು, ಮೊಸರಿನ ದರ ಲೀಟರಿಗೆ 2 ರೂಪಾಯಿ ಹೆಚ್ಚಿಸಿ ಕೆಎಂಎಫ್ ಆದೇಶ, ತಕ್ಷಣದಿಂದಲೇ ನೂತನ ದರ ಜಾರಿ

ಬೆಂಗಳೂರು, ನವೆಂಬರ್ 24, 2022 (ಕರಾವಳಿ ಟೈಮ್ಸ್) : ನಂದಿನಿ ಹಾಲು ಮತ್ತು ಮೊಸರಿನ ದರ ಲೀಟರಿಗೆ 2 ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್ ಆದೇಶ ಹೊರಡಿಸಿದೆ. ಹಾಲು, ಮೊಸರಿನ ಪರಿಷ್ಕೃತ ದರ ಬುಧವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬರಲಿದೆ. 



ಟೋನ್ಡ್ ಹಾಲಿನ ದರ 37 ರಿಂದ 39 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಸ್ಪೆಷಲ್ ಹಾಲಿನ ದರ 43 ರಿಂದ 45 ರೂಪಾಯಿಗೆ, ಸಮೃದ್ಧಿ ಹಾಲಿನ ದರ 48 ರಿಂದ 50 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಹೋಮೋಜಿನೈಸ್ಡ್ ಹಾಲು 38 ರೂಪಾಯಿಯಿಂದ 40 ರೂಪಾಯಿಗೆ ಏರಿಕೆ. ಹೊಮೊಜಿನೈಸ್ಡ್ ಹಸುವಿನ ಹಾಲು 42 ರೂಪಾಯಿಯಿಂದ 44 ರೂಪಾಯಿಗೆ ಏರಿಕೆ. ಶುಭಂ ಹಾಲು 43 ರೂಪಾಯಿಯಿಂದ 45 ರೂಪಾಯಿಗೆ ಏರಿಕೆ. ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರೂಪಾಯಿಯಿಂದ 46 ರೂಪಾಯಿಗೆ ಏರಿಕೆ. ಸಂತೃಪ್ತಿ ಹಾಲು 50 ರೂಪಾಯಿಯಿಂದ 52 ರೂಪಾಯಿಗೆ ಏರಿಕೆ. ಡಬಲ್ ಟೋನ್ಡ್ ಹಾಲು 36 ರೂಪಾಯಿಯಿಂದ 38 ರೂಪಾಯಿಗೆ ಏರಿಕೆ ಮಾಡಲಾಗಿದೆ.  ಮೊಸರಿನ ದರವನ್ನು ಲೀಟರಿಗೆ 45 ರೂಪಾಯಿಯಿಂದ 47 ರೂಪಾಯಿಗೆ ಏರಿಕೆ ಮಾಡಲಾಗಿದೆ. 

ರೈತರಿಗೆ ಪೆÇ್ರೀತ್ಸಾಹಧನ ನೀಡುವ ಸಲುವಾಗಿ ದರ ಏರಿಕೆ ಮಾಡುತ್ತಿರುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನಂದಿನಿ ಹಾಲು, ಮೊಸರಿನ ದರ ಲೀಟರಿಗೆ 2 ರೂಪಾಯಿ ಹೆಚ್ಚಿಸಿ ಕೆಎಂಎಫ್ ಆದೇಶ, ತಕ್ಷಣದಿಂದಲೇ ನೂತನ ದರ ಜಾರಿ Rating: 5 Reviewed By: karavali Times
Scroll to Top