ಪಾಸ್‍ಪೋರ್ಟಿನಲ್ಲಿ ಸರ್ ನೇಮ್ ಇಲ್ಲದೆ ಸಿಂಗಲ್ ನೇಮ್ ಮಾತ್ರ ಇದ್ದರೆ ವೀಸಾ ನೀಡಲಾಗುವುದಿಲ್ಲ : ಯುಎಇ - Karavali Times ಪಾಸ್‍ಪೋರ್ಟಿನಲ್ಲಿ ಸರ್ ನೇಮ್ ಇಲ್ಲದೆ ಸಿಂಗಲ್ ನೇಮ್ ಮಾತ್ರ ಇದ್ದರೆ ವೀಸಾ ನೀಡಲಾಗುವುದಿಲ್ಲ : ಯುಎಇ - Karavali Times

728x90

24 November 2022

ಪಾಸ್‍ಪೋರ್ಟಿನಲ್ಲಿ ಸರ್ ನೇಮ್ ಇಲ್ಲದೆ ಸಿಂಗಲ್ ನೇಮ್ ಮಾತ್ರ ಇದ್ದರೆ ವೀಸಾ ನೀಡಲಾಗುವುದಿಲ್ಲ : ಯುಎಇ

ನವದೆಹಲಿ, ನವೆಂಬರ್ 24, 2022 (ಕರಾವಳಿ ಟೈಮ್ಸ್) : ಪಾಸ್‍ಪೋರ್ಟಿನಲ್ಲಿ ಉಪನಾಮೆ (ಸರ ನೇಮ್) ಇಲ್ಲದೆ ಕೇವಲ ಏಕನಾಮ (ಸಿಂಗಲ್ ನೇಮ್) ಹೊಂದಿದ್ದರೆ ಅಂತಹ ಪ್ರಯಾಣಿಕರಿಗೆ ವೀಸಾ ನೀಡುವುದಿಲ್ಲ ಎಂದು ಯುಎಇ ಹೇಳಿದೆ.



2022ರ ನವೆಂಬರ್ 21 ರಿಂದ ಈ ನಿಯಮ ಜಾರಿಗೆ ಬರಲಿದೆ. ವಿದೇಶ ಪ್ರವಾಸ ಅಥವಾ ಯಾವುದೇ ರೀತಿಯ ಪ್ರವಾಸಕ್ಕೆ ತೆರಳುವವರು ಪಾಸ್‍ಪೋರ್ಟಿನಲ್ಲಿ ಏಕನಾಮ ಹೊಂದಿದ್ದರೆ, ಅವರಿಗೆ ಯುಎಇಗೆ ಅಥವಾ ಯುಎಇನಿಂದ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‍ಪ್ರೆಸ್ ಹಾಗೂ ಇಂಡಿಗೋ ವಿಮಾನಯಾನ ಸಂಸ್ಥೆಗಳು ಸುತ್ತೋಲೆ ಹೊರಡಿಸಿವೆ. 

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈ ನಿಯಮ ಅನ್ವಯವಾಗುತ್ತದೆ. ಈ ನಿಯಮವು ವಿಸಿಟಿಂಗ್ ವೀಸಾ, ವೀಸಾ ಆನ್ ಅರೈವಲ್, ಉದ್ಯೋಗ ವೀಸಾ ಮತ್ತು ತಾತ್ಕಾಲಿಕ ವೀಸಾ ಹೊಂದಿರುವವರಿಗೆ ಅನ್ವಯವಾಗುತ್ತದೆ. ಯುಎಇ ರೆಸಿಡೆಂಟ್ ಕಾರ್ಡ್ ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಯುಎಇ ಸ್ಪಷ್ಟಪಡಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪಾಸ್‍ಪೋರ್ಟಿನಲ್ಲಿ ಸರ್ ನೇಮ್ ಇಲ್ಲದೆ ಸಿಂಗಲ್ ನೇಮ್ ಮಾತ್ರ ಇದ್ದರೆ ವೀಸಾ ನೀಡಲಾಗುವುದಿಲ್ಲ : ಯುಎಇ Rating: 5 Reviewed By: karavali Times
Scroll to Top