ಮೈಸೂರು : ಜನವರಿ 29 ರಂದು ಅಜ್ಮೀರ್ ಖ್ವಾಜಾ ಅನುಸ್ಮರಣೆ ‘ಖ್ವಾಜಾ ಕೀ ಛಟ್ಟಿ’ - Karavali Times ಮೈಸೂರು : ಜನವರಿ 29 ರಂದು ಅಜ್ಮೀರ್ ಖ್ವಾಜಾ ಅನುಸ್ಮರಣೆ ‘ಖ್ವಾಜಾ ಕೀ ಛಟ್ಟಿ’ - Karavali Times

728x90

27 January 2023

ಮೈಸೂರು : ಜನವರಿ 29 ರಂದು ಅಜ್ಮೀರ್ ಖ್ವಾಜಾ ಅನುಸ್ಮರಣೆ ‘ಖ್ವಾಜಾ ಕೀ ಛಟ್ಟಿ’

ಮೈಸೂರು, ಜನವರಿ 27, 2023 (ಕರಾವಳಿ ಟೈಮ್ಸ್) : ಅತಾಯೆ ರಸೂಲ್ ಮೂಮೆಂಟ್ ಮೈಸೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುವ ಹಝ್ರತ್ ಖ್ವಾಜಾ ಮುಯೀನುದ್ದೀನ್ ಚಿಸ್ತಿಯ್ಯಿಲ್ ಅಜ್ಮೀರಿ (ರ) ಅವರ ಅನುಸ್ಮರಣೆ “ಖ್ವಾಜಾ ಕೀ ಛಟ್ಟಿ” ಕಾರ್ಯಕ್ರಮವು ಜನವರಿ 29 ರಂದು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಇಲ್ಲಿನ ಗೌಸಿಯಾ ನಗರದ ಎ ಬ್ಲಾಕ್, ಟಿ ಸಿ ಗಲ್ಲಿಯ ಆಸ್ತಾನೆ ಖ್ವಾಜಾ ಇಲ್ಲಿ ನಡೆಯಲಿದೆ. 


ಖ್ವಾಜಾ ಅಝೀಂ ಅಲಿ ಶಾ ಚಿಶ್ತೀ ಮೈಸೂರು ಅವರು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಮೈಸೂರು ಶ್ರೀ ಬಸವಧ್ಯಾನ ಮಂದಿರದ ಬಸವಲಿಂಗ ಮೂರ್ತಿ ಸ್ವಾಮೀಜಿ, ಸಾಮಾಜಿಕ ಕಾರ್ಯಕರ್ತ ಅಲಿ ಜನಾಬ್ ಅಝೀಝುಲ್ಲಾ (ಅಜ್ಜು) ಮೈಸೂರು, ಮೈಸೂರು ತಂಝೀಮ್ ಅಹ್ಲೆಸ್ಸುನ್ನತುಲ್ ಜಮಾಅತ್ ಕಾರ್ಯದರ್ಶಿ ಅಲಿ ಜನಾಬ್ ಜಮೀಲ್ ಅಹ್ಮದ್ ಅಶ್ರಫಿ, ಹಝ್ರತ್ ಅಝೀಝುಲ್ಲಾ ಶಾ ಚಿಶ್ತಿ, ಹಝ್ರತ್ ಸಯ್ಯಿದ್ ಬುರ್‍ಹಾನ್ ಶಾ ಖಾದ್ರಿ, ಹಝ್ರತ್ ಮುಹಮ್ಮದ್ ರೂಹುಲ್ಲಾ ಶಾ ಶಿತಾರ್, ಹಝ್ರತ್ ಸಯ್ಯದ್  ಗೌಸ್ ಪೀರ್ ಶಾ ಖಾದ್ರಿ ಶಿತಾರಿ, ಹಝ್ರತ್ ಐಜಾಝ್ ಮಸ್ತಾನ್ ಶಾ ಹಾಫೀಝ್ ಖಾದ್ರಿ, ಹಝ್ರತ್ ಶೈಖ್ ಝುಬೈರ್ ಷಾ ಚಿಶ್ತಿ ಉಲ್ ಖಾದ್ರಿ, ಹಝ್ರತ್ ಸಯ್ಯದ್ ನವೀಸ್ ಷಾ ಖಾದ್ರಿ, ಹಝ್ರತ್ ನಸ್ರುಲ್ಲಾ ಷಾ ಖಾದ್ರಿ, ಹಝ್ರತ್ ಮಹಬೂಬ್ ಶಾ ಚಿಶ್ತಿ, ಹಝ್ರತ್ ಮುನವ್ವರ್ ವಲಿಯುಲ್ಲಾ ಷಾ ಜುನೈದಿ ಸಹಿತ ಸೂಫಿ ಸಂತರು, ಉಲಮಾಗಳು, ಶರಣ ಸಂತರು, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. 


ಬೆಳಿಗ್ಗೆ 10.30 ಕ್ಕೆ ಧ್ವಜಾರೋಹಣ, 11 ಗಂಟೆಗೆ ಗರೀಬ್ ನವಾಝ್ ಸಮ್ಮೇಳನ, ಮಧ್ಯಾಹ್ನ 1 ಗಂಟೆಗೆ ಫತೇಹಾ ಲಂಗರ್ (ಭೋಜನ), ರಾತ್ರಿ 10.30ಕ್ಕೆ ಮೆಹ್ಫಿಲ್-ಎ-ಸಮಾ ಕಾರ್ಯಕ್ರಮ ನಡೆಯಲಿದೆ ಎಂದು ಅತಾಯೆ ರಸೂಲ್ ಮೂಮೆಂಟ್ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮೈಸೂರು : ಜನವರಿ 29 ರಂದು ಅಜ್ಮೀರ್ ಖ್ವಾಜಾ ಅನುಸ್ಮರಣೆ ‘ಖ್ವಾಜಾ ಕೀ ಛಟ್ಟಿ’ Rating: 5 Reviewed By: karavali Times
Scroll to Top