ಮಂಗಳೂರು ಉತ್ತರ ಕ್ಷೇತ್ರಕ್ಕೆ ಬಾವಾ ಸೈ ಎಂದ ‘ಕೈ’ ಕಮಾಂಡ್? : ಟಿಕೆಟ್ ಆಕಾಂಕ್ಷಿಗಳ ನಡುವೆ ಒಪ್ಪಂದವೇರ್ಪಡಿಸಿ ಜಂಜಾಟಕ್ಕೆ ಪರಿಹಾರ ಕಂಡುಕೊಂಡ ನಾಯಕರು - Karavali Times ಮಂಗಳೂರು ಉತ್ತರ ಕ್ಷೇತ್ರಕ್ಕೆ ಬಾವಾ ಸೈ ಎಂದ ‘ಕೈ’ ಕಮಾಂಡ್? : ಟಿಕೆಟ್ ಆಕಾಂಕ್ಷಿಗಳ ನಡುವೆ ಒಪ್ಪಂದವೇರ್ಪಡಿಸಿ ಜಂಜಾಟಕ್ಕೆ ಪರಿಹಾರ ಕಂಡುಕೊಂಡ ನಾಯಕರು - Karavali Times

728x90

3 March 2023

ಮಂಗಳೂರು ಉತ್ತರ ಕ್ಷೇತ್ರಕ್ಕೆ ಬಾವಾ ಸೈ ಎಂದ ‘ಕೈ’ ಕಮಾಂಡ್? : ಟಿಕೆಟ್ ಆಕಾಂಕ್ಷಿಗಳ ನಡುವೆ ಒಪ್ಪಂದವೇರ್ಪಡಿಸಿ ಜಂಜಾಟಕ್ಕೆ ಪರಿಹಾರ ಕಂಡುಕೊಂಡ ನಾಯಕರು

ಮಂಗಳೂರು, ಮಾರ್ಚ್ 03, 2023 (ಕರಾವಳಿ ಟೈಮ್ಸ್) : ಮುಂಬರುವ ರಾಜ್ಯ ವಿಧಾನಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಟಿಕೆಟಿಗಾಗಿ ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದು, ಈ ಮಧ್ಯೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಅಲ್ಪಸಂಖ್ಯಾತ ಮುಖಂಡರ ಮಧ್ಯೆ ಫೈಟ್ ಏರ್ಪಟ್ಟು ಭಾರಿ ಗೊಂದಲ, ಜಂಜಾಟ ಉಂಟಾಗಿತ್ತು. ಮಾಜಿ ಶಾಸಕ ಬಿ ಎ ಮೊೈದಿನಾ ಬಾವಾ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಇಬ್ಬರ ಹೆಸರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಚಲಾವಣೆಯಲ್ಲಿದ್ದು, ಇಬ್ಬರೂ ನಾಯಕರೂ ಕೂಡಾ ಕ್ಷೇತ್ರ ಪರ್ಯಟನೆಯಲ್ಲಿ ಸ್ಪರ್ಧಾತ್ಮಕವಾಗಿ ತೊಡಗಿಸಿಕೊಂಡಿದ್ದರು. 

ಹೇಗಾದರು ಮಾಡಿ ಟಿಕೆಟ್ ದಕ್ಕಿಸಿಯೇ ಸಿದ್ದ ಎಂದು ಇಬ್ಬರೂ ನಾಯಕರು ಕೂಡಾ ಕಾಂಗ್ರೆಸ್ ಹೈಕಮಾಂಡಿನಲ್ಲಿ ಪ್ರಬಾವ ಹೊಂದಿದ್ದ ಬೇರೆ ಬೇರೆ ನಾಯಕರನ್ನು ನೆಚ್ಚಿಕೊಂಡು ಟಿಕೆಟಿಗಾಗಿ ತಮ್ಮ ಪ್ರಯತ್ನ ಚಾಲ್ತಿಯಲ್ಲಿಟ್ಟಿದ್ದರು. ಈ ಮಧ್ಯೆ ಇಬ್ಬರು ನಾಯಕರ ಹೋರಾಟ ತಾರರಕ್ಕೇರುತ್ತಿದ್ದಂತೆ ಒಂದು ಹಂತದಲ್ಲಿ ಅಲ್ಪಸಂಖ್ಯಾತ ನಡುವಿನ ಸ್ಪರ್ಧೆಯ ಲಾಭ ಇತರ ಸಮುದಾಯದವರು ಪಡೆದುಕೊಂಡು ಅಲ್ಪಸಂಖ್ಯಾತ ಸಮುದಾಯದ ಕೈಯಲ್ಲಿದ್ದ ಟಿಕೆಟ್ ಇನ್ನೇನು ಕೈ ತಪ್ಪಲಿದೆಯೋ ಎನ್ನುವ ಆತಂಕ ಕೂಡಾ ಕಾಡಲು ಆರಂಭಿಸಿತ್ತು. 

ಇದೀಗ ಟಿಕೆಟ್ ಆಕಾಂಕ್ಷಿಗಳಾದ ಇಬ್ಬರು ನಾಯಕರು ಕೂಡಾ ಮುಸ್ಲಿಂ ಸಮುದಾಯದ ಪ್ರಮುಖರ ಮನವೊಲಿಕೆಗೆ ಬೆಲೆ ಕಲ್ಪಿಸಿ ಒಂದು ಹಂತದ ಸಂಧಾನಕ್ಕೆ ಬಂದಿದ್ದಾರೆ ಎನ್ನಲಾಗಿದ್ದು, ಇದೀಗ ಕ್ಷೇತ್ರ ವ್ಯಾಪ್ತಿಯ ಎಲ್ಲ ಕಾರ್ಯಕ್ರಮಗಳಲ್ಲೂ ಒಂದೇ ವೇದಿಕೆಯಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡು ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಪಕ್ಷಕ್ಕಾಗಿ, ಕ್ಷೇತ್ರದ ಅಭಿವೃದ್ದಿಗಾಗಿ ಒಟ್ಟಾಗಿ ದುಡಿಯುವುದಾಗಿ ಹೇಳಿಕೊಳ್ಳುತ್ತಿರುವ ಸನ್ನಿವೇಶ ಕಂಡು ಬರುತ್ತಿದೆ. 

ಮೊಯಿದಿನ್ ಬಾವಾ ಅವರು ಮಾಜಿ ಶಾಸಕರಾಗಿ ಬಹಳಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದಾರಲ್ಲದೆ, ಕ್ಷೇತ್ರದ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿಕೊಳ್ಳುವಲ್ಲಿಯೂ ಸಫಲರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲುಂಡರೂ ಕ್ಷೇತ್ರದ ಜನರ ಮಧ್ಯೆ ಇರುವ ಒಡನಾಟವನ್ನು ಕೊನೆಗಾಣಿಸಿಲ್ಲ. ಶಾಸಕರಲ್ಲದಿದ್ದರೂ ಶಾಸಕನಾಗಿದ್ದವ ಎಂಬ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಲ್ಲೂ ಕ್ಷೇತ್ರ ವ್ಯಾಪ್ತಿಯ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮಾತ್ರವಲ್ಲ ಕ್ಷೇತ್ರ ವ್ಯಾಪ್ತಿಯ ಎಲ್ಲ ವರ್ಗದ ಜನರ ಕಷ್ಟ-ಸುಖಗಳಲ್ಲೂ ಪಾಲುದಾರರೆನಿಸಿಕೊಳ್ಳುವ ಮೂಲಕ ಜನರ ಮನಸ್ಸಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರ ಜನರ ವಿಶ್ವಾಸ ಗಳಿಸಿಕೊಂಡ ವ್ಯಕ್ತಿ ಎಂಬ ನೆಲೆಯಲ್ಲಿ ಪಕ್ಷದ ಹೈ ಕಮಾಂಡ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರುಗಳೇ ಸ್ವತಃ ಆಖಾಡಕ್ಕಿಳಿದು ಈ ಬಾರಿ ಮೊಯಿದಿನ್ ಬಾವಾ ಅವರೇ ಸ್ಪರ್ಧೆಗೆ ಸೂಕ್ತ ಆಯ್ಕೆ ಎಂಬ ಸಂದೇಶವನ್ನು ಈಗಾಗಲೇ ನೀಡಿದ್ದಾರೆ ಎನ್ನಲಾಗುತ್ತಿದೆ. 

ಈ ನಡುವೆ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದುಕೊಂಡು ಪಕ್ಷ ಸಂಘಟನೆ ಹಾಗೂ ಕ್ಷೇತ್ರದ ಜನರ ಬೇಕು-ಬೇಡಗಳಿಗೆ ಸ್ಪಂದಿಸುತ್ತಿರುವ ಟಿಕೆಟ್ ಆಕಾಂಕ್ಷಿ ಇನಾಯತ್ ಆಲಿ ಅವರನ್ನೂ ಕೂಡಾ ವಿಶ್ವಾಸಕ್ಕೆ ತೆಗೆದುಕೊಂಡಿರುವ ಪಕ್ಷದ ಹಿರಿಯ ನಾಯಕರು ಟಿಕೆಟಿಗಾಗಿ ಹಠ ಹಿಡಿದು ಪಕ್ಷಕ್ಕೆ ಯಾವುದೇ ರೀತಿಯ ಹಾನಿಯಾಗುವಂತೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆಯೂ ಮುಂದಿನ ದಿನಗಳಲ್ಲಿ ಪಕ್ಷದ ಹಾಗೂ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಲ್ಲಿ ಸರಕಾರಿ ಮಟ್ಟದಲ್ಲೂ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟು ಜನಸೇವೆ ಹಾಗೂ ಪಕ್ಷ ಸಂಘಟನೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. 

ಈ ಎಲ್ಲಾ ನಿಟ್ಟಿನಲ್ಲಿ ಟಿಕೆಟ್ ಅಧಿಕೃತ ಘೋಷಣೆ ಬಾಕಿ ಇದ್ದರೂ ಕೂಡಾ ಮಾಜಿ ಶಾಸಕ ಮೊಯಿದಿನ್ ಬಾವಾ ಅವರನ್ನು ಈಗಲೇ ಚುನಾವಣಾ ಸಿದ್ದತೆಯಲ್ಲಿ ತೊಡಗಿಸಿಕೊಳ್ಳುವಂತೆ ಪಕ್ಷದ ಮುಖಂಡರು ಸೂಚಿಸಿದ್ದಾರೆ ಎನ್ನಲಾಗಿದ್ದು, ಒಟ್ಟಿನಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಖಂಡರ ನಡುವೆ ಏರ್ಪಟ್ಟಿದ್ದ ಸ್ಪರ್ಧಾತ್ಮಕ ಗೊಂದಲ ಹಾಗೂ ಜಂಜಾಟಕ್ಕೆ ಪಕ್ಷದ ಮುಖಂಡರು ಸಲೀಸಾಗಿ ಪರಿಹಾರ ಕಂಡುಕೊಂಡು ಕ್ಷೇತ್ರದಲ್ಲಿ ಮತ್ತೆ ಅಲ್ಪಸಂಖ್ಯಾತ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಎಲ್ಲ ತಯಾರಿ ನಡೆದಿದ್ದು, ಗೊಂದಲ ಪರಿಹಾರವಾಗಿದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹಾಗೂ ಮಂಗಳೂರು ಕ್ಷೇತ್ರಗಳಿಗೆ ಮಾಜಿ ಸಚಿವರಾದ ಬಿ ರಮಾನಾಥ ರೈ ಹಾಗೂ ಯು ಟಿ ಖಾದರ್ ಸ್ಪರ್ಧೆ ಈಗಾಗಲೇ ಖಚಿತಗೊಂಡಿದ್ದು, ಇನ್ನುಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮ ಆಯ್ಕೆ ಕಸರತ್ತು ಮುಂದುವರಿದಿದೆ. ಮುಂದಿನ ವಾರದೊ

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಉತ್ತರ ಕ್ಷೇತ್ರಕ್ಕೆ ಬಾವಾ ಸೈ ಎಂದ ‘ಕೈ’ ಕಮಾಂಡ್? : ಟಿಕೆಟ್ ಆಕಾಂಕ್ಷಿಗಳ ನಡುವೆ ಒಪ್ಪಂದವೇರ್ಪಡಿಸಿ ಜಂಜಾಟಕ್ಕೆ ಪರಿಹಾರ ಕಂಡುಕೊಂಡ ನಾಯಕರು Rating: 5 Reviewed By: karavali Times
Scroll to Top