ಬಂಟ್ವಾಳ ಶಾಸಕರಿಂದ ಗುರುಪುರ ಮಠಕ್ಕೆ ಭೇಟಿ : ವಾಮಪದವು ವಿವಿಧ ಫ್ಯಾಕ್ಟರಿಗಳಲ್ಲಿ ಮತಯಾಚನೆ - Karavali Times ಬಂಟ್ವಾಳ ಶಾಸಕರಿಂದ ಗುರುಪುರ ಮಠಕ್ಕೆ ಭೇಟಿ : ವಾಮಪದವು ವಿವಿಧ ಫ್ಯಾಕ್ಟರಿಗಳಲ್ಲಿ ಮತಯಾಚನೆ - Karavali Times

728x90

18 April 2023

ಬಂಟ್ವಾಳ ಶಾಸಕರಿಂದ ಗುರುಪುರ ಮಠಕ್ಕೆ ಭೇಟಿ : ವಾಮಪದವು ವಿವಿಧ ಫ್ಯಾಕ್ಟರಿಗಳಲ್ಲಿ ಮತಯಾಚನೆ

ಬಂಟ್ವಾಳ, ಎಪ್ರಿಲ್ 19, 2023 (ಕರಾವಳಿ ಟೈಮ್ಸ್) : ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿಯವರನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಭೇಟಿಯಾಗಿ ಆಶೀರ್ವಾದ ಪಡೆದರು.

ಬಂಟ್ವಾಳ ತಾಲೂಕಿನ ವಾಮದಪದವು ಭಾಗದಲ್ಲಿ ಕ್ಯಾಶ್ಯೂ ಪ್ಯಾಕ್ಟರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಅವರು ಬೇಟಿ ನೀಡಿ ಮತಯಾಚನೆ ನಡೆಸಿದರು. ವಾಮದಪದವು ವರದರಾಜ್ ಪೈ ಅವರ ಮಾಲಕತ್ವದ ಯಜಮಾನ ಕಂಪನಿ ಹಾಗೂ ವಾಮದಪದವು ಮತ್ತು ಆಲದಪದವು ವಿನಾಯಕ ಪ್ರಭು ಅವರ ಮಾಲಕತ್ವದ ಶ್ರೀನಿವಾಸ ಕ್ಯಾಶ್ಯೂ ಪ್ಯಾಕ್ಟರಿಗಳಿಗೆ ಮತ್ತು ನಯನಾಡು ಹರೀಂದ್ರ ಪೈ ಅವರ ಶಶಾಂಕ್ ಕ್ಯಾಶ್ಯೂ ಪ್ಯಾಕ್ಟರಿಗಳಿಗೆ ರಾಜೇಶ್ ನಾಯ್ಕ್ ಅವರು ಬೇಟಿ ನೀಡಿ ಕಂಪೆನಿಯಲ್ಲಿರುವ ಕೆಲಸಗಾರರ ಜೊತೆ ಮಾತನಾಡಿದರು.

2023ರ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದು, ಮತ್ತೊಮ್ಮೆ ನನ್ನನ್ನು ಗೆಲ್ಲಿಸುವ ಮೂಲಕ ಬಿಜೆಪಿಯನ್ನು ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು. ಕಾರ್ಮಿಕರ ಪರವಾಗಿ ಧ್ವನಿಯಾಗಿ ಸೇವೆ ಮಾಡುವ ಭರವಸೆ ನೀಡಿದ ಅವರು, ನಿಮ್ಮ ಒಂದು ಮತ ಕ್ಷೇತ್ರದ ಬಡಜನರ ಕಲ್ಯಾಣಕ್ಕೆ ಕೊಡುಗೆ ನೀಡುತ್ತದೆ ಎಂದರು. 

ರಾಜ್ಯ ಒಳಚರಂಡಿ ಹಾಗೂ ನೀರು ಸರಬರಾಜು ನಿಗಮದ ನಿರ್ದೇಶಕಿ ಸುಲೋಚನ ಜಿ ಕೆ ಭಟ್, ಪ್ರಮುಖರಾದ ರತ್ನಕುಮಾರ್ ಚೌಟ, ದಿನೇಶ್ ಶೆಟ್ಟಿ ದಂಬೆದಾರ್, ಪುರುಷೋತ್ತಮ ಶೆಟ್ಟಿ ವಾಮದಪದವು, ವಿಜಯ ರೈ, ಚಂದ್ರಶೇಖರ್ ಶೆಟ್ಟಿ, ಶಾರದ ನಾಯ್ಕ್, ಪ್ರಭಾಕರ ಶೆಟ್ಟಿ ಪಾಂಗಲ್ಪಾಡಿ, ರವಿರಾಮ್ ಶೆಟ್ಟಿ ಅಜ್ಜಿಬೆಟ್ಟು, ಮಹಾಬಲ ಶೆಟ್ಟಿ, ಹರೀಶ್ ಪ್ರಭು, ಚಂದ್ರಶೇಖರ್ ಶೆಟ್ಟಿ, ಪ್ರಭಾಕರ ಶೆಟ್ಟಿ ವಾಮದಪದವು, ಮೋನಪ್ಪ ಶೆಟ್ಟಿ, ಹರೀಶ್ ನಯನಾಡು, ಜಯಾನಂದ ಎರ್ಮೆನಾಡು, ರೂಪೇಶ್ ಪೂಜಾರಿ, ಮಿಥುನ್ ಮಲ್ಯ, ಪ್ರಕಾಶ್ ರಾವ್, ರಾಘವ ಆಚಾರ್ಯ, ಸುಂದರ ಪೂಜಾರಿ, ರವಿ, ರಾಜೇಶ್ ಶೆಟ್ಟಿ, ಅಶ್ವಥ್, ಉಮೇಶ್ ತಿಮರಡ್ಡ, ಯತೀನ್ ನಯನಾಡು, ಪುರಂದರ ಶೆಟ್ಟಿ, ಜಗದೀಶ್ ಉಳಗುಡ್ಡೆ, ಶೇಖರ್ ಶೆಟ್ಟಿ ಬದ್ಯಾರು, ಮೊದಲಾದವರು ಈ ಸಂದರ್ಭ ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಶಾಸಕರಿಂದ ಗುರುಪುರ ಮಠಕ್ಕೆ ಭೇಟಿ : ವಾಮಪದವು ವಿವಿಧ ಫ್ಯಾಕ್ಟರಿಗಳಲ್ಲಿ ಮತಯಾಚನೆ Rating: 5 Reviewed By: karavali Times
Scroll to Top