ಬಂಟ್ವಾಳ (ಕರಾವಳಿ ಟೈಮ್ಸ್) : ಭೂಯಾ ಗೈಸ್ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ನಡೆಸಲ್ಪಡುವ ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಸೀಮಿತಗೊಂಡು ಸ್ಥಳೀಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಒಳಗೊಂಡ ನಿಗದಿತ ಆರು ತಂಡಗಳ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 4ನೇ ಆವೃತ್ತಿಯ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಟೂರ್ನಮೆಂಟ್ ನಾಳೆಯಿಂದ (ಫೆಬ್ರವರಿ 23, 2020) ನಿರಂತರ ಮೂರು ಭಾನುವಾರ ಆಲಡ್ಕ ಮೈದಾನದಲ್ಲಿ ಸಾಗಿಬರಲಿದೆ.
ಉದ್ಯಮಿಗಳಾದ ಅಬ್ದುಲ್ ಹಕೀಂ ಉಲ್ಲಾಸ್ ಕೂಟವನ್ನು ಉದ್ಘಾಟಿಸಲಿದ್ದು, ಅಬ್ದುಲ್ ರಹಿಮಾನ್ ಮೋನು ಅಧ್ಯಕ್ಷತೆ ವಹಿಸಲಿದ್ದಾರೆ. ಹಲವಾರು ರಾಜಕೀಯ, ಸಾಮಾಜಿಕ, ಉದ್ಯಮ ಹಾಗೂ ಕ್ರೀಡಾ ಕ್ಷೇತ್ರದ ಗಣ್ಯರು ಭಾಗವಹಿಸಿದ್ದು, ಮಾರ್ಚ್ 8 ರಂದು ಕೂಟದ ಫೈನಲ್ ಪಂದ್ಯಾಟ ನಡೆಯಲಿದೆ. ಟೂರ್ನಮೆಂಟಿನಲ್ಲಿ ರಶೀದ್ ಮಾಲಕತ್ವದ ಕತಾರ್ ವಾರಿಯರ್ಸ್, ರಿಝ್ವಾನ್ ಪಿ.ಜೆ. ಮಾಲಕತ್ವದ ಪಿ.ಜೆ. ಸ್ಟಾರ್ಸ್, ತನ್ವೀರ್ ಮಾಲಕತ್ವದ ಲ್ಯಾನ್ಸರ್ ಲೀಫ್ಸ್, ಖಲಂದರ್ ಮಾಲಕತ್ವದ ಎ ಟು ಝಡ್ ವಾರಿಯರ್ಸ್, ಫಾರೂಕ್ ಮತ್ತು ಎನ್.ಬಿ. ಗ್ರೂಪ್ ಮಾಲಕತ್ವದ ಬೀಯಿಂಗ್ ಭೂಯಾ ಹಾಗೂ ಜುನೈದ್ ಮಾಲಕತ್ವದ ಇಖ್‍ಲಾಸ್ ಸ್ಟ್ರೈಕರ್ಸ್ ಈ ಆರು ತಂಡಗಳಲ್ಲಿ ಸ್ಥಳೀಯ ಉದಯೋನ್ಮುಖ ಕ್ರಿಕೆಟ್ ಪಟುಗಳು ತಮ್ಮ ಕ್ರಿಕೆಟ್ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದು ಭೂಯಾ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಶರೀಫ್ ಬೋಗೋಡಿ ತಿಳಿಸಿದ್ದಾರೆ.
ಜಾಹೀರಾತುಗಳು
0 comments:
Post a Comment