ಬಂಟ್ವಾಳ (ಕರಾವಳಿ ಟೈಮ್ಸ್) : ಭೂಯಾ ಗೈಸ್ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ನಡೆಸಲ್ಪಡುವ ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಸೀಮಿತಗೊಂಡು ಸ್ಥಳೀಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಒಳಗೊಂಡ ನಿಗದಿತ ಆರು ತಂಡಗಳ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 4ನೇ ಆವೃತ್ತಿಯ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಟೂರ್ನಮೆಂಟ್‍ಗೆ ಭಾನುವಾರ ಬೆಳಿಗ್ಗೆ ಆಲಡ್ಕ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಉದ್ಯಮಿಗಳಾದ ಅಬ್ದುಲ್ ಹಕೀಂ ಉಲ್ಲಾಸ್ ಕೂಟವನ್ನು ಉದ್ಘಾಟಿಸಿದರು. ಅಬ್ದುಲ್ ರಹಿಮಾನ್ ಮೋನು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಎಸ್‍ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಉದ್ಯಮಿ ಹನೀಫ್ ಹಾಸ್ಕೋ, ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಭೂಯಾ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಶರೀಫ್ ಭೂಯಾ, ಇಬ್ರಾಹಿಂ ಕೈಫ್, ಕಾಸಿಂ ಗೂಡಿನಬಳಿ, ಹನೀಫ್ ಬಂಗ್ಲೆಗುಡ್ಡೆ ಮೊದಲಾದ ಗಣ್ಯರು ಭಾಗವಹಿಸಿದ್ದರು.
ಕೂಟದ ಪ್ರಥಮ ಪಂದ್ಯಾಟ ರಶೀದ್ ಮಾಲಕತ್ವದ ಕತಾರ್ ವಾರಿಯರ್ಸ್ ಹಾಗೂ ರಿಝ್ವಾನ್ ಪಿ.ಜೆ. ಮಾಲಕತ್ವದ ಪಿ.ಜೆ. ಸ್ಟಾರ್ಸ್ ತಂಡಗಳ ನಡುವೆ ಸಾಗಿದ್ದು, ಪಿ.ಜೆ. ಸ್ಟಾರ್ಸ್ ತಂಡ ಜಯೇಭರಿ ಭಾರಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಉಳಿದಂತೆ ತನ್ವೀರ್ ಮಾಲಕತ್ವದ ಲ್ಯಾನ್ಸರ್ ಲೀಫ್ಸ್, ಖಲಂದರ್ ಮಾಲಕತ್ವದ ಎ ಟು ಝಡ್ ವಾರಿಯರ್ಸ್, ಫಾರೂಕ್ ಮತ್ತು ಎನ್.ಬಿ. ಗ್ರೂಪ್ ಮಾಲಕತ್ವದ ಬೀಯಿಂಗ್ ಭೂಯಾ ಹಾಗೂ ಜುನೈದ್ ಮಾಲಕತ್ವದ ಇಖ್‍ಲಾಸ್ ಸ್ಟ್ರೈಕರ್ಸ್ ತಂಡಗಳು ಕೂಟದಲ್ಲಿ ಭಾಗವಹಿಸಲಿವೆ. ಶ್ರವಣ್ ಬಂಟ್ವಾಳ ಹಾಗೂ ಸಚಿನ್ ಬಂಟ್ವಾಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರೆ, ಹನೀಫ್ ಯು. ಸ್ಕೋರರ್ ಆಗಿ ಸಹಕರಿಸಿದರು.
0 comments:
Post a Comment