ಬಂಟ್ವಾಳ : ಡಾ. ಅಮ್ಮೆಂಬಳ ಬಾಳಪ್ಪ 98ನೇ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ - Karavali Times ಬಂಟ್ವಾಳ : ಡಾ. ಅಮ್ಮೆಂಬಳ ಬಾಳಪ್ಪ 98ನೇ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ - Karavali Times

728x90

23 February 2020

ಬಂಟ್ವಾಳ : ಡಾ. ಅಮ್ಮೆಂಬಳ ಬಾಳಪ್ಪ 98ನೇ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣೆಬಂಟ್ವಾಳ (ಕರಾವಳಿ ಟೈಮ್ಸ್) : ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ 98ನೇ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಫೆ 23 ರಂದು ಭಾನುವಾರ ಬಿ.ಸಿ.ರೋಡಿನ ಪೆÇಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.

    ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ಹಾಗೂ ಬಾಳಪ್ಪರ ಸಹೋದರಿ ಮನೋಹರಿ ದೀಪ ಪ್ರಜ್ವಲಿಸಿದರು.
ಮುಖ್ಯ ಅತಿಥಿಯಾಗಿದ್ದ ಮಹೇಂದ್ರನಾಥ ಸಾಲೆತ್ತೂರು ಮಾತನಾಡಿ ಡಾ. ಅಮ್ಮೆಂಬಳ ಬಾಳಪ್ಪನವರು ಸೌಮ್ಯ ನಿಷ್ಟುರವಾದಿಯಾಗಿದ್ದರು. ತುಳುನಾಡು ದೇಶದ ಸ್ವಾತಂತ್ಯದ ಹೋರಾಟಕ್ಕೆ ಅನೇಕ ಹೋರಾಟಗಾರರನ್ನು ನೀಡಿದೆ.  ಆ ಪೈಕಿ ಅಮ್ಮೆಂಬಳ ಬಾಳಪ್ಪರು ಅಗ್ರಗಣ್ಯರು ಎಂದರು. 

    ಜನಸಾಮಾನ್ಯರ ಮಧ್ಯೆ ಹುಟ್ಟಿ ಶಕ್ತಿಯಾಗಿ ಬೆಳೆದ ಡಾ. ಬಾಳಪ್ಪನವರು ಸಮಾಜವಾದ, ಗಾಂಧಿತತ್ವವನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜ ಸೇವೆ ಮಾಡಿದವರು ಎಂದರು.  ಮಂಗಳೂರಿನ ನ್ಯಾಯವಾದಿ ರಾಮ್ ಪ್ರಸಾದ್, ಪ್ರಮುಖರಾದ ಎ.ಎನ್. ರಾಮ್ ದಾಸ್, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷೆ ಜಯಂತಿ, ದಯಾನಂದ ಬೆಳ್ಳೂರು, ಆನಂದ ಚೇಂಡ್ಲಾ, ಟ್ರಸ್ಟಿನ ಕಾರ್ಯದರ್ಶಿ ಉಮೇಶ್ ಪಿ.ಕೆ. ಉಪಸ್ಥಿತರಿದ್ದರು.

ಡಿ.ಎಂ. ಕುಲಾಲ್ ಸ್ವಾಗತಿಸಿ, ದಾಮೋದರ ಬಿ.ಎಂ. ವಂದಿಸಿದರು. ಶಿಕ್ಷಕ ದಾಮೋದರ್ ಏರ್ಯ ಕಾರ್ಯಕ್ರಮ ನಿರೂಪಿಸಿದರು.
    ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಬಂಟ್ವಾಳ, ಕುಲಾಲ ಎಜ್ಯುಕೇಷನ್ ಟ್ರಸ್ಟ್ ಬಂಟ್ವಾಳ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಕಾರ್ಯಕ್ರಮವನ್ನು ಸಂಘಟಿಸಿತು. ಇದೇ ವೇಳೆ ಉನ್ನತ ಶಿಕ್ಷಣ ಪಡೆಯುತ್ತಿರುವ 62 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಡಾ. ಅಮ್ಮೆಂಬಳ ಬಾಳಪ್ಪ 98ನೇ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ Rating: 5 Reviewed By: lk
Scroll to Top