ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಂಜನಪದವು ಬಳಿಯ ಕಲ್ಪನೆ ಎಂಬಲ್ಲಿ ಭಾನುವಾರ ಅಪರಾಹ್ನ ಎರಡು ಬಸ್ಸುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿ ಸಿ ರೋಡು-ಪೆÇಳಲಿ ರಸ್ತೆಯ ಕಲ್ಪನೆ ತಿರುವಿನಲ್ಲಿ ಈ ಭೀಕರ ಅವಘಡ ಸಂಭವಿಸಿದ್ದು, ಇದೇ ಮಾರ್ಗವಾಗಿ ನಿತ್ಯ ಸಂಚರಿಸುವ ಶುಭಲಕ್ಷ್ಮಿ ಖಾಸಗಿ ಬಸ್ಸು ಭಾನುವಾರ ಅಪರಾಹ್ನ ಸುಮಾರು 3.30 ರವೇಳೆಗೆ ಸಂಚರಿಸುತ್ತಿದ್ದ ಸಂದರ್ಭ ಇದೇ ಮಾರ್ಗ ಮೂಲಕ ಧಾವಿಸಿ ಬಂದ ಬಿ ಸಿ ರೋಡಿನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಗೊತ್ತುಪಡಿಸಿದ ಮೌಲಾ ಟ್ರಾವೆಲ್ಸ್ ಎಂಬ ಮತ್ತೊಂದು ಖಾಸಗಿ ಬಸ್ಸು ಜೋಕಟ್ಟೆ ಕಡೆಗೆ ಸಂಚರಿಸುವ ಭರದಲ್ಲಿ ಹಿಂದಿನಿಂದ ಬಂದು ಶುಭಲಕ್ಷ್ಮಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶುಭಲಕ್ಷ್ಮಿ ಬಸ್ಸು ರಸ್ತೆಯಲ್ಲೇ ಎರಡು-ಮೂರು ಪಲ್ಟಿಯಾಗಿ ಮತ್ತೆ ನೇರವಾಗಿ ನಿಂತಿದೆ. ಮತ್ತೊಂದು ಬಸ್ಸು ವಿರುದ್ಧ ದಿಕ್ಕಿನಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ತಿರುವು ಬಳಿ ಇರುವ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದೆ.
ಘಟನೆಯಿಂದ ಎರಡೂ ಬಸ್ಸುಗಳಲ್ಲಿದ್ದ ಸುಮಾರು 52ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಈ ಪೈಕಿ ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಲೇ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾಗಿ ಸಿಕ್ಕಿದ ವಾಹನಗಳಲ್ಲಿ ಗಾಯಾಳುಗಳನ್ನು ತುಂಬಿಸಿ ವಿವಿಧ ಆಸ್ಪತ್ರೆಗಳಿಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.
ಘಟನೆಯಲ್ಲಿ ಪ್ರಯಾಣಿಕ ಮೋಹನ್ ಸಿಂಗ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಉಳಿದಂತೆ 12 ಮಂದಿ ಬಂಟ್ವಾಳ ಸರಕಾರಿ ಆಸ್ಪತ್ರೆ, 7 ಮಂದಿ ಬಿ ಸಿ ರೋಡು ಸೋಮಯಾಜಿ ಅಸ್ಪತ್ರೆ, 19 ಮಂದಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ, 15 ಮಂದಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಂಟ್ವಾಳ ಸಂಚಾರಿ ಪೆÇಲೀಸರು ತಿಳಿಸಿದ್ದಾರೆ.
ಅವಘಡದಲ್ಲಿ ಗುರುಪುರ ಕೈಕಂಬ ನಿವಾಸಿಗಳಾದ ಚಂದ್ರಶೇಖರ, ಕಮಲಾಕ್ಷ, ಪೆರ್ಮುದೆ ನಿವಾಸಿ ಲೀಲಾವತಿ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ತೆಂಕಮಿಜಾರ್ ನಿವಾಸಿ ಸುಧಾ, ಮೊಡಂಕಾಪು ನಿವಾಸಿ ಗರ್ವೀನ್, ಪೇಜಾವರ ನಿವಾಸಿಗಳಾದ ವನಜಾ, ಲಲಿತಾ, ವಸಂತಿ, ವಿಮಲ, ಕಮಲ, ಪೆರ್ಮುದೆ ನಿವಾಸಿ ಲೀಲಾವತಿ, ಅವರ ಮಗಳು ಹಾಶಿಕಾ, ಗುರುಪುರ-ಕೈಕಂಬ ನಿವಾಸಿಗಳಾದ ಚಂದ್ರಶೇಖರ, ಕಮಲಾಕ್ಷ, ಕರಿಯಂಗಳ ನಿವಾಸಿ ಆಶೋಕ, ಗುರುಪುರ-ಕೈಕಂಬ ನಿವಾಸಿ ರಮ್ಯ, ನೆರೆನಗರ ನಿವಾಸಿ ರಾಜೇಶ್, ಕೆಂಜಾರು ನಿವಾಸಿಗಳಾದ ಗುಲಾಬಿ, ಹೇಮಲತಾ, ಚಾಲಕ ಸುರೇಶ್, ಚರಣ್, ಸಾವಿತ್ರಿ, ಸರಿತಾ, ಸುಲೈಮಾನ್, ಜೋಹನ್, ಜೆಯಿನ್, ದಯಾಲತಾ, ಸುಶ್ಮಿತಾ, ಮಹಮ್ಮದ್ ಸಲೀಂ, ಬಲ್ಕೀಶ್, ಹಸನಬ್ಬ, ಮಹಮ್ಮದ್ ರಝಾಕ್ ಎಂಬವರು ಗಾಯಗೊಂಡಿದ್ದು, ಇನ್ನು ಕೆಲವರ ಮಾಹಿತಿ ತಿಳಿದು ಬರಬೇಕಷ್ಟೆ.
ಘಟನಾ ಸ್ಥಳಕ್ಕೆ ಎಡಿಶನಲ್ ಎಸ್ಪಿ ವಿಕ್ರಂ ಅಮ್ಟೆ, ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್, ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ, ನಗರ ಠಾಣಾ ಎಸ್ಸೈ ಅವಿನಾಶ್, ಟ್ರಾಫಿಕ್ ಎಸ್ಸೈ ರಾಮನಾಯ್ಕ್ ಬೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಘಟನೆಗೆ ಕಾರಣ ಏನು ಎಂಬುದು ಪೊಲೀಸ್ ತನಿಖೆಯಿಂದಷ್ಟೆ ತಿಳಿದು ಬರಬೇಕಾಗಿದೆ.
0 comments:
Post a Comment