ಎನ್.ಆರ್.ಸಿ. ವಿರೋಧಿ ಹೋರಾಟ ಫಲ ನೀಡಿದೆ : ರಮಾನಾಥ ರೈ - Karavali Times ಎನ್.ಆರ್.ಸಿ. ವಿರೋಧಿ ಹೋರಾಟ ಫಲ ನೀಡಿದೆ : ರಮಾನಾಥ ರೈ - Karavali Times

728x90

16 February 2020

ಎನ್.ಆರ್.ಸಿ. ವಿರೋಧಿ ಹೋರಾಟ ಫಲ ನೀಡಿದೆ : ರಮಾನಾಥ ರೈಬಂಟ್ವಾಳ (ಕರಾವಳಿ ಟೈಮ್ಸ್) : ಜಗತ್ತಿನ ಅತ್ಯಂತ ದೊಡ್ಡ ಜಾತ್ಯಾತೀತ ರಾಷ್ಟ್ರ ಭಾರತ. ಈ ಕಾರಣಕ್ಕಾಗಿ ಭಾರತಕ್ಕೆ ವಿಶ್ವದಲ್ಲೇ ವಿಶಿಷ್ಟ ಸ್ಥಾನಮಾನವಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
    ಸಾಲೆತ್ತೂರಿನಲ್ಲಿ ನಡೆದ ಎನ್ ಆರ್ ಸಿ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ವ್ಯಕ್ತಿಯ ಜಾತ್ಯಾತೀತತೆ ಭಾಷಣದಿಂದ ಸರ್ಟಿಫಿಕೇಟ್ ಪಡೆಯುವಂತದ್ದಲ್ಲ. ಅದು ಆತನ ವ್ಯಕ್ತಿತ್ವ, ಕಾರ್ಯಚಟುವಟಕೆಗಳಿಂದ ಜನ ಗುರುತಿಸುವಂತಾಗಬೇಕು. ಸಮಾಜದಲ್ಲಿ ಸಾಮಾಜಿಕ ಸೌಹಾರ್ದತೆ ನೆಲೆಗೊಳ್ಳುವಂತಹ ವರ್ತನೆ ವ್ಯಕ್ತಿಯಲ್ಲಿರಬೇಕೇ ಹೊರತು ದ್ವೇಷವನ್ನು ಹುಟ್ಟಿಸುವಂತಹ ವರ್ತನೆ ಎಂದಿಗೂ ಉಂಟಾಗಬಾರದು ಎಂದರು.
    ದೇಶದ ನಾಯಕರು ವಿದೇಶಕ್ಕೆ ಹೋದರೆ ಗಾಂಧೀಜಿ, ಬುದ್ದ, ಜವಾಹರ್‍ಲಾಲ್ ನೆಹರು, ಅಂಬೇಡ್ಕರ್ ಬಗ್ಗೆ ಅಭಿಮಾನದ ಮಾತುಗಳನ್ನಾಡುತ್ತಾರೆ. ಆದರೆ ಅದೇ ದೇಶದ ಒಳಗೆ ಬಂದಾಗ ಗಾಂಧೀಜಿಯನ್ನೇ ಕೊಂದ ಗೋಡ್ಸೆಯಂತಹ ದೇಶದ್ರೋಹಿಗಳನ್ನು ವೈಭವೀಕರಿಸುವ ಹಿಪಾಕ್ರಸಿ ಬೆಳೆದು ಬರುತ್ತಿದೆ. ಇದು ಅತ್ಯಂತ ಅಪಾಯಕಾರಿ ಎಂದು ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.
    ನೋಟ್ ಬ್ಯಾನ್, ಜಿ ಎಸ್ ಟಿ ಮೊದಲಾದ ಜನವಿರೋಧಿ ನೀತಿಗಳಿಂದ ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿ ಜನ ಕಂಗಾಲಾಗಿ ಹೋಗಿದ್ದಾರೆ. ಈ ವೈಫಲ್ಯಗಳನ್ನು ಮುಚ್ಚಿ ಹಾಕಲು ಸರಕಾರ ಎನ್ ಆರ್ ಸಿ, ಸಿಎಎ ಯಂತಹ ಕಾನೂನುಗಳನ್ನು ಜಾರಿಗೆ ತಂದು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ ರಮಾನಾಥ ರೈ ಇದೀಗ ದೇಶಾದ್ಯಂತ ನಡೆಯುತ್ತಿರುವ ಎನ್ ಆರ್ ಸಿ ವಿರೋಧಿ ಹೋರಾಟ ನಿರೀಕ್ಷಿತ ಫಲ ತಂದುಕೊಟ್ಟಿದೆ. ಜನರ ಹೋರಾಟದ ಫಲವೇ ಇಂದು ದೆಹಲಿ ಚುನಾವಣಾ ಫಲಿತಾಂಶ ನಮ್ಮ ಕಣ್ಣ ಮುಂದಿದೆ. ಶತಾಯಗತಾಯ ಹತಾಶ ಪ್ರಯತ್ನ ನಡೆಸಿದ ಹೊರತಾಗಿಯೂ ಜನ ತಮ್ಮ ಬದ್ದತೆಯನ್ನು ದೆಹಲಿ ಫಲಿತಾಂಶದ ಮೂಲಕ ಪ್ರದರ್ಶಿಸಿದ್ದಾರೆ. ಹೋರಾಟ ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ದೇಶದ ದಿಕ್ಕನ್ನೇ ಬದಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಎನ್.ಆರ್.ಸಿ. ವಿರೋಧಿ ಹೋರಾಟ ಫಲ ನೀಡಿದೆ : ರಮಾನಾಥ ರೈ Rating: 5 Reviewed By: lk
Scroll to Top