ಎಪಿಎಲ್ ಸೀಸನ್-4 : ದ್ವಿತೀಯ ದಿನವೂ ಅಗ್ರಸ್ಥಾನದಲ್ಲಿ ಮುಂದುವರಿದ ಎ ಟು ಝಡ್ - Karavali Times ಎಪಿಎಲ್ ಸೀಸನ್-4 : ದ್ವಿತೀಯ ದಿನವೂ ಅಗ್ರಸ್ಥಾನದಲ್ಲಿ ಮುಂದುವರಿದ ಎ ಟು ಝಡ್ - Karavali Times

728x90

2 March 2020

ಎಪಿಎಲ್ ಸೀಸನ್-4 : ದ್ವಿತೀಯ ದಿನವೂ ಅಗ್ರಸ್ಥಾನದಲ್ಲಿ ಮುಂದುವರಿದ ಎ ಟು ಝಡ್

ಕೊನೆಯ ಸ್ಥಾನದಲ್ಲಿದ್ದ ಕತಾರ್ ವಾರಿಯರ್ಸ್ ಎರಡನೇ ಸ್ಥಾನಕ್ಕೆ ನೆಗೆತ


ಬಂಟ್ವಾಳ (ಕರಾವಳಿ ಟೈಮ್ಸ್) : ಭೂಯಾ ಗೈಸ್ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಆಲಡ್ಕ ಮೈದಾನದಲ್ಲಿ ಆಯೋಜಿಸಿರುವ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 4ನೇ ಆವೃತ್ತಿಯ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಟೂರ್ನಮೆಂಟಿನ ದ್ವಿತೀಯ ದಿನದ (ಮಾ 1) ಪಂದ್ಯಾಟದಲ್ಲಿ ಖಲಂದರ್ ರಿಯಾಝ್ ಮಾಲಕತ್ವದ ಎ ಟು ಝಡ್ ತಂಡ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಂಡು 8 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

    ಕಳೆದ ವಾರ ಎರಡೂ ಪಂದ್ಯಗಳನ್ನು ಕಳೆದುಕೊಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ರಶೀದ್ ಮಾಲಕತ್ವದ ಕತಾರ್ ವಾರಿಯರ್ಸ್ ಈ ಬಾರಿ ಉತ್ತಮ ಪ್ರದರ್ಶನ ತೋರಿದ್ದು, ಎರಡು ಪಂದ್ಯಗಳಲ್ಲಿ ಜಯ ಹಾಗೂ ಒಂದು ಟೈ ಮೂಲಕ 5 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆತ ಕಂಡಿದೆ.

ಉಳಿದಂತೆ ಇಖ್‍ಲಾಸ್ ಸ್ಟ್ರೈಕರ್ಸ್ 2 ಜಯ, 2 ಸೋಲಿನೊಂದಿಗೆ 4 ಅಂಕಗಳನ್ನು ಗಿಟ್ಟಿಸಿಕೊಂಡು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಬೀಯಿಂಗ್ ಭೂಯಾ 2 ಸೋಲು, ಒಂದು ಜಯ ಹಾಗೂ ಒಂದು ಟೈ ಯೊಂದಿಗೆ 3 ಅಂಕಗಳು, ಜೆ. ಸ್ಟಾರ್ಸ್ ಒಂದು ಜಯ, 2 ಸೋಲಿನೊಂದಿಗೆ 2 ಅಂಕಗಳು ಹಾಗೂ ಲ್ಯಾನ್ಸರ್ ಲೀಫ್ಸ್ ಮೂರು ಸೋಲು ಹಾಗೂ 1 ಜಯದೊಂದಿಗೆ ಅಂಕಪಟ್ಟಿಯಲ್ಲಿ 2 ಅಂಕಗಳನ್ನು ಗಳಿಸಿ ಕೊನೆ ಸ್ಥಾನದಲ್ಲಿದೆ.

ಮುಂದಿನ ವಾರ (ಮಾ 8) ಟೂರ್ನಿಯ ನಿರ್ಣಾಯಕ ಹಂತದ ಪಂದ್ಯಗಳು ಮುಂದುವರಿಯಲಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಎಪಿಎಲ್ ಸೀಸನ್-4 ಟ್ರೋಫಿಯ ಮೇಲೆ ಪ್ರಭುತ್ವ ಸಾಧಿಸಲು ಹೋರಾಟ ನಡೆಸಲಿದೆ.

    ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಉದ್ಯಮಿಗಳಾದ ಅಬ್ದುಲ್ ಹಕೀಂ ಉಲ್ಲಾಸ್, ಪಿ.ಬಿ. ಹಾಮದ್ ಹಾಜಿ, ಅಬ್ದುಲ್ ರಹಿಮಾನ್ ಮೋನು, ಅಬ್ದುಲ್ ಅಝೀಝ್ ಆಲಡ್ಕ, ಭೂಯಾ ಸ್ಪೋಟ್ರ್ಸ್ ಕ್ಲಬ್ ಪ್ರಮುಖರಾದ ಶರೀಫ್ ಭೂಯಾ, ಫಾರೂಕ್ ಭೂಯಾ, ಹಬೀಬ್ ಬೋಗೋಡಿ, ಪ್ರಮುಖರಾದ ಇಬ್ರಾಹಿಂ ಕೈಫ್, ಕಾಸಿಂ ಗೂಡಿನಬಳಿ ಮೊದಲಾದ ಗಣ್ಯರು ಭಾಗವಹಿಸಿದ್ದರು.

    ಅಥಾವುಲ್ಲಾ ಗೂಡಿನಬಳಿ ಹಾಗೂ ಸಾಬಿತ್ ಗೂಡಿನಬಳಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರೆ, ಹನೀಫ್ ಯು., ಮುಸ್ತಫಾ ಪಿ.ಜೆ. ಸ್ಕೋರರ್ ಆಗಿ ಸಹಕರಿಸಿದರು. ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಹಸೈನಾರ್, ಶಹೀದ್ ಗುಡ್ಡೆಅಂಗಡಿ ವೀಕ್ಷಕ ವಿವರಣೆಗಾರರಾಗಿ ಸಹಕರಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಎಪಿಎಲ್ ಸೀಸನ್-4 : ದ್ವಿತೀಯ ದಿನವೂ ಅಗ್ರಸ್ಥಾನದಲ್ಲಿ ಮುಂದುವರಿದ ಎ ಟು ಝಡ್ Rating: 5 Reviewed By: karavali Times
Scroll to Top