ಪುತ್ತೂರು (ಕರಾವಳಿ ಟೈಮ್ಸ್) : ಶಂಸುಲ್ ಉಲಮಾ ಅರೇಬಿಕ್ ಕಾಲೇಜು ತೊಡರ್ ಇದರ 10 ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಬುರ್ದಾ ಸ್ಪರ್ಧೆಯಲ್ಲಿ ಆತೂರಿನ ತದ್‍ಬಿರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಿಜೇತ ತಂಡದಲ್ಲಿ ವಿದ್ಯಾರ್ಥಿಗಳಾದ ಮುಝಮ್ಮಿಲ್, ಮುಹಮ್ಮದ್ ಜಲೀಲ್, ಇಮಾಮುದ್ದೀನ್, ಆಶಿಕ್, ಸಿನಾನ್, ತುಫೈಲ್ ಹಾಗೂ ಸಫ್‍ವಾನ್ ಭಾಗವಹಿಸಿದ್ದರು. ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್, ಕೆ.ಎಂ. ಸಿದ್ದಿಕ್ ಫೈಝಿ, ಹಂಝ ಸಖಾಫಿ, ಅಬ್ದುಲ್ ಸಮದ್ ಅನ್ಸಾರಿ, ದಾರಿಮಿ ಉಸ್ತಾದ್ ಮತ್ತು ಬಶೀರ್ ಮುಸ್ಲಿಯಾರ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
0 comments:
Post a Comment