ಕೊರೊನಾ ತುರ್ತು ಅವಶ್ಯಕತೆಗಳ ಕುರಿತು ಬಂಟ್ವಾಳದಲ್ಲಿ ಅಧಿಕಾರಿಗಳ ವಿಶೇಷ ಸಭೆ - Karavali Times ಕೊರೊನಾ ತುರ್ತು ಅವಶ್ಯಕತೆಗಳ ಕುರಿತು ಬಂಟ್ವಾಳದಲ್ಲಿ ಅಧಿಕಾರಿಗಳ ವಿಶೇಷ ಸಭೆ - Karavali Times

728x90

25 March 2020

ಕೊರೊನಾ ತುರ್ತು ಅವಶ್ಯಕತೆಗಳ ಕುರಿತು ಬಂಟ್ವಾಳದಲ್ಲಿ ಅಧಿಕಾರಿಗಳ ವಿಶೇಷ ಸಭೆ

ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ಹಾಗೂ ತುರ್ತು ಅವಶ್ಯಕತೆಗಳ ಕುರಿತು ಗಮನ ಹರಿಸುವ ನಿಟ್ಟಿನಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರ ನೇತೃತ್ವದಲ್ಲಿ ಬಿ ಸಿ ರೋಡು ಮಿನಿ ವಿಧಾನಸೌಧ ಕಛೇರಿಯಲ್ಲಿ ಬುಧವಾರ ಅಧಿಕಾರಿಗಳ ಮಟ್ಟದ ವಿಶೇಷ ಸಭೆ ನಡೆಯಿತು.

ಸಭೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಅಧಿಕಾರಿಗಳಿಗೆ ಗ್ರಾಮಗಳ ವಿಂಗಡನೆ ಮಾಡಿ ಅಲ್ಲಿನ ಜವಬ್ದಾರಿ ವಹಿಸಿಕೊಡಲಾಯಿತು. ತುರ್ತು ಸಂದರ್ಭದಲ್ಲಿ ಹಾಜರಿರುವುದು ಮತ್ತು ಸ್ಪಂದನೆ ನೀಡುವುದು ಹಾಗೂ ಸರಕಾರದ ಸೂಚನೆಗಳನ್ನು ಪಾಲಿಸಲು ಕ್ರಮಕೈಗೊಳ್ಳುವುದು ಮತ್ತು ಅವಶ್ಯ ವಸ್ತುಗಳ ಅಂಗಡಿಗಳನ್ನು ಜಿಲ್ಲಾಡಳಿತ ನೀಡಿದ ಸಮಯಕ್ಕೆ ಸರಿಯಾಗಿ ಬಂದ್ ಮಾಡುವುದು, ವಿನಾಕಾರಣ ಮನೆಯಿಂದ ಯಾರೂ ಕೂಡಾ ಹೊರಬರದಂತೆ ಎಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು. ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 
  • Blogger Comments
  • Facebook Comments

1 comments:

  1. Adikaarigalu hatthira hatthira kulithu kolla bavde..

    ReplyDelete

Item Reviewed: ಕೊರೊನಾ ತುರ್ತು ಅವಶ್ಯಕತೆಗಳ ಕುರಿತು ಬಂಟ್ವಾಳದಲ್ಲಿ ಅಧಿಕಾರಿಗಳ ವಿಶೇಷ ಸಭೆ Rating: 5 Reviewed By: karavali Times
Scroll to Top