![]() |
ಬಿ. ದೇವದಾಸ ಶೆಟ್ಟಿ |
ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಮಾಜಿ ಪುರಸಭಾ ಸದಸ್ಯ, ಬಂಟ್ವಾಳ ನಿವಾಸಿ ಬಿ. ದೇವದಾಸ ಶೆಟ್ಟಿ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬಂಟ್ವಾಳ ಪುರಸಭೆಯ ಸದಸ್ಯರಾಗಿ, ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ದೇವದಾಸ ಶೆಟ್ಟಿ ಪಕ್ಷದ ಹಲವು ಹುದ್ದೆಗಳನ್ನು ನಿಭಾಯಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರ ಶಿಫಾರಸ್ಸಿನಂತೆ ಬುಡಾ ಅಧ್ಯಕ್ಷರಾಗಿ ಸರಕಾರದ ನಗರಾಭಿವೃದ್ದಿ ಪ್ರಾಧಿಕಾರದಿಂದ ನೇಮಕಗೊಂಡಿದ್ದು, ಉಳಿದಂತೆ ಸದಸ್ಯರುಗಳಾಗಿ ಭಾಸ್ಕರ ಕುಲಾಲ್ ಕಾಮಾಜೆ, ಸಚಿನ್ ಮೆಲ್ಕಾರ್, ಎ. ರಾಮಪ್ರಸಾದ್ ಪ್ರಭು ತ್ಯಾಗರಾಜ ರಸ್ತೆ-ಬಂಟ್ವಾಳ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
0 comments:
Post a Comment