ಕೊರೋನಾ ನಿಯಂತ್ರಣಕ್ಕೆ ಕಾಂಗ್ರೆಸ್ ಪೂರ್ಣ ಸಹಕಾರ : ಜಿಲ್ಲಾಧಿಕಾರಿ ಜೊತೆ ಕೈ ನಾಯಕರ ಮಾತುಕತೆ - Karavali Times ಕೊರೋನಾ ನಿಯಂತ್ರಣಕ್ಕೆ ಕಾಂಗ್ರೆಸ್ ಪೂರ್ಣ ಸಹಕಾರ : ಜಿಲ್ಲಾಧಿಕಾರಿ ಜೊತೆ ಕೈ ನಾಯಕರ ಮಾತುಕತೆ - Karavali Times

728x90

26 March 2020

ಕೊರೋನಾ ನಿಯಂತ್ರಣಕ್ಕೆ ಕಾಂಗ್ರೆಸ್ ಪೂರ್ಣ ಸಹಕಾರ : ಜಿಲ್ಲಾಧಿಕಾರಿ ಜೊತೆ ಕೈ ನಾಯಕರ ಮಾತುಕತೆ


ಮಂಗಳೂರು (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಗುರುವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಕೊರೊನಾ ವೈರಸ್ ನಿಯಂತ್ರಣ ಬಗ್ಗೆ ಮಾತುಕತೆ ನಡೆಸಿದರು.

ಲಾಕ್ ಡೌನ್ ಹಿನ್ನಲೆಯಲ್ಲಿ ಜನರಿಗೆ ದೈನಂದಿನ ಅಗತ್ಯ ಸೇವೆಗಳ ಪೂರೈಕೆಗೆ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವಂತೆ ಕೋರಿದ ಕೈ ನಾಯಕರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ಶಾಸಕರಾದ ಯು.ಟಿ. ಖಾದರ್, ಐವನ್ ಡಿ’ಸೋಜಾ, ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಮೊಯ್ದೀನ್ ಬಾವ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸಹಿತ ಹಲವು ಮುಖಂಡರು ಇದ್ದರು. 
  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ನಿಯಂತ್ರಣಕ್ಕೆ ಕಾಂಗ್ರೆಸ್ ಪೂರ್ಣ ಸಹಕಾರ : ಜಿಲ್ಲಾಧಿಕಾರಿ ಜೊತೆ ಕೈ ನಾಯಕರ ಮಾತುಕತೆ Rating: 5 Reviewed By: karavali Times
Scroll to Top