ಕಡಲತಡಿ ಮಂಗಳೂರಲ್ಲೂ ಕೊರೋನಾ ವೈರಸ್ ದೃಢ : ದುಬೈಯಿಂದ‌ ಬಂದ ಭಟ್ಕಳ ಮೂಲದ‌ ವ್ಯಕ್ತಿಯಲ್ಲಿ ಸೋಂಕು ಪತ್ತೆ - Karavali Times ಕಡಲತಡಿ ಮಂಗಳೂರಲ್ಲೂ ಕೊರೋನಾ ವೈರಸ್ ದೃಢ : ದುಬೈಯಿಂದ‌ ಬಂದ ಭಟ್ಕಳ ಮೂಲದ‌ ವ್ಯಕ್ತಿಯಲ್ಲಿ ಸೋಂಕು ಪತ್ತೆ - Karavali Times

728x90

22 March 2020

ಕಡಲತಡಿ ಮಂಗಳೂರಲ್ಲೂ ಕೊರೋನಾ ವೈರಸ್ ದೃಢ : ದುಬೈಯಿಂದ‌ ಬಂದ ಭಟ್ಕಳ ಮೂಲದ‌ ವ್ಯಕ್ತಿಯಲ್ಲಿ ಸೋಂಕು ಪತ್ತೆಮಂಗಳೂರು (ಕರಾವಳಿ ಟೈಮ್ಸ್) :ಕಡಲತಡಿ ಮಂಗಳೂರಿಗೆ ಕೊರೋನಾ ವೈರಸ್ ವ್ಯಾಪಿಸಿದೆ.ದುಬೈನಿಂದ ನಗರಕ್ಕೆ ಬಂದಿದ್ದ ಭಟ್ಕಳದ ವ್ಯಕ್ತಿಯೊಬ್ಬರಿಗೆ  ಸೋಂಕು ತಗುಲಿರುವುದು ಪತ್ತೆಯಾಗಿದೆ.

ಸೋಂಕಿತ ವ್ಯಕ್ತಿಯ ಗಂಟಲು ದ್ರವದ ಮಾದರಿ ವರದಿ ಬಂದಿದ್ದು, ಕೋವಿಡ್ -19 ದೃಢಪಟ್ಟಿದೆ. ಆ ವ್ಯಕ್ತಿಗೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ  ಮುಂದುವರೆಸಲಾಗಿದೆ.

 ಇದೇ 19ರಂದು ಮಂಗಳೂರಿಗೆ ಬಂದಿದ್ದ ಆ ವ್ಯಕ್ತಿಯನ್ನು ವಿಮಾನ ನಿಲ್ದಾಣದಿಂದ ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಕೊರೋನಾ ಸೋಂಕು ಶಂಕೆಯ ಮೇರೆಗೆ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ , ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಜಿಲ್ಲಾದಿಕಾರಿ ಸಿಂಧೂ. ಬಿ. ರೂಪೇಶ್ ತಿಳಿಸಿದ್ದಾರೆ.
ದುಬೈನಿಂದ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ ಈ ವ್ಯಕ್ತಿ ಪಯಣಿಸಿದ್ದು, ಅದರಲ್ಲಿ 165 ಜನ ಪ್ರಯಾಣಿಕರಿದ್ದರು. ಅವರೆಲ್ಲರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕಡಲತಡಿ ಮಂಗಳೂರಲ್ಲೂ ಕೊರೋನಾ ವೈರಸ್ ದೃಢ : ದುಬೈಯಿಂದ‌ ಬಂದ ಭಟ್ಕಳ ಮೂಲದ‌ ವ್ಯಕ್ತಿಯಲ್ಲಿ ಸೋಂಕು ಪತ್ತೆ Rating: 5 Reviewed By: karavali Times
Scroll to Top