ಪುತ್ತೂರು ಪೊಲೀಸರ ಕಾರ್ಯಾಚರಣೆ : ಚಿನ್ನಾಭರಣ ಸಹಿತ ಕಳವು ಆರೋಪಿಯ ದಸ್ತಗಿರಿ - Karavali Times ಪುತ್ತೂರು ಪೊಲೀಸರ ಕಾರ್ಯಾಚರಣೆ : ಚಿನ್ನಾಭರಣ ಸಹಿತ ಕಳವು ಆರೋಪಿಯ ದಸ್ತಗಿರಿ - Karavali Times

728x90

13 March 2020

ಪುತ್ತೂರು ಪೊಲೀಸರ ಕಾರ್ಯಾಚರಣೆ : ಚಿನ್ನಾಭರಣ ಸಹಿತ ಕಳವು ಆರೋಪಿಯ ದಸ್ತಗಿರಿಪುತ್ತೂರು (ಕರಾವಳಿ ಟೈಮ್ಸ್) : ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ನೇತೃತ್ವದ ಅಪರಾಧ ಪತ್ತೆ ದಳ ಮತ್ತು ಉಪ್ಪಿನಂಗಡಿ ಪೆÇಲೀಸ್ ಠಾಣಾ ಪೆÇಲೀಸ್ ಉಪನಿರೀಕ್ಷಕರ ಅಪರಾಧ ಪತ್ತೆ ದಳ ಉಪ್ಪಿನಂಗಡಿ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ನಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ಕುಖ್ಯಾತ ಕಳ್ಳ ಚಿಕ್ಕಮಗಳೂರು ಶಂಕರಪುರ ನಿವಾಸಿ, ಪ್ರಸ್ತುತ ಬಂಟ್ವಾಳ ತಾಲೂಕು, ಮಾಣಿ ಗ್ರಾಮದ ಹಳೀರಾ ಕೇರಾಫ್ ಮಮ್ಮು ಬ್ಯಾರಿ ಎಂಬವರ ಮನೆಯಲ್ಲಿ ವಾಸವಾಗಿರುವ ಶೌಕತ್ ಅಲಿ ಅಲಿಯಾಸ್ ಶೌಕತ್ (56) ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ.

ಆರೋಪಿಯು ಉಪ್ಪಿನಂಗಡಿ ಪೆÇಲೀಸ್ ಠಾಣಾ ವ್ಯಾಪ್ತಿಯ, ಆದÀರ್ಶನಗರ, ನೆಕ್ಕಿಲಾಡಿ, ಕಲ್ಲೇರಿ, ಕೆಂಪಿ ಮಜಲು, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಅಜೇಯ ನಗರ, ಮುರ, ಬನ್ನೂರು ಹಾರಾಡಿ, ಕೋಡಿಂಬಾಡಿ, ಅರ್ ಟಿ ಓ ಬಳಿಯ ಜೈನರಗುರಿ, ಸಾಲ್ಮರ, ದಾರಂದಕುಕ್ಕು, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಕಲ್ಲಡ ಮೊದಲಾದ ಕಡೆಗಳಲ್ಲಿ ಮನೆ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿರುತ್ತಾನೆ. ಬಂಧಿತನಿಂದ 13 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸುಮಾರು 18 ಲಕ್ಷ ರೂಪಾಯಿ ಮೌಲ್ಯದ  ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ಪೊಲೀಸರ ಕಾರ್ಯಾಚರಣೆ : ಚಿನ್ನಾಭರಣ ಸಹಿತ ಕಳವು ಆರೋಪಿಯ ದಸ್ತಗಿರಿ Rating: 5 Reviewed By: karavali Times
Scroll to Top