ಸುಧಾ ಮೂರ್ತಿಯಿಂದ ಮಂಗಳೂರಿಗೆ 28 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿ : ಪೊಲೀಸ್ ಕಮಿಷನರ್ ಡಾ. ಹರ್ಷ ಧನ್ಯವಾದ - Karavali Times ಸುಧಾ ಮೂರ್ತಿಯಿಂದ ಮಂಗಳೂರಿಗೆ 28 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿ : ಪೊಲೀಸ್ ಕಮಿಷನರ್ ಡಾ. ಹರ್ಷ ಧನ್ಯವಾದ - Karavali Times

728x90

28 March 2020

ಸುಧಾ ಮೂರ್ತಿಯಿಂದ ಮಂಗಳೂರಿಗೆ 28 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿ : ಪೊಲೀಸ್ ಕಮಿಷನರ್ ಡಾ. ಹರ್ಷ ಧನ್ಯವಾದ



ಮಂಗಳೂರು (ಕರಾವಳಿ ಟೈಮ್ಸ್) : ಇನ್ಫೋಸಿಸ್ ಫೌಂಡೇಶನ್ ಇದರ ಸುಧಾ ಮೂರ್ತಿ ಅವರು ಕಳುಹಿಸಿಕೊಟ್ಟ ವೈದ್ಯಕೀಯ ಸಾಮಗ್ರಿಗಳು ಮಂಗಳೂರಿಗೆ ತಲುಪಿವೆ. ನಿಮಗೆ ಧನ್ಯವಾದ ಎಂದು ಮಂಗಳೂರು ನಗರ ಪೆÇಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಟ್ವೀಟ್ ಮಾಡಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾಡಳಿತದ ಪರವಾಗಿ ಮಂಗಳೂರು ಪೆÇಲೀಸರ ಕರೆಗೆ ಸುಧಾ ಮೂರ್ತಿ ಅವರು ಸ್ಪಂದಿಸಿದ್ದಾರೆ. ನಾವು ಮನವಿ ಸಲ್ಲಿಸಿದ 36 ಗಂಟೆಗಳಲ್ಲಿ 28 ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅವರು ಕಳುಹಿಸಿದ ವೈದ್ಯಕೀಯ ಸಾಮಗ್ರಿಗಳು ಮಂಗಳೂರಿಗೆ ತಲುಪಿವೆ. ಮೇಡಂ ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್‍ನ ರಾಮದಾಸ್ ಕಾಮತ್ ಹಾಗೂ ಅವರ ತಂಡಕ್ಕೆ ಧನ್ಯವಾದಗಳು ಎಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸುಧಾ ಮೂರ್ತಿ ಅವರು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಅವರು ಸದ್ಯ ಮಂಗಳೂರಿಗೆ 28 ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ಸಾಮಾಗ್ರಿ ಕಳುಹಿಸಿದ್ದಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಧನ್ಯವಾದ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ತಿಂಗಳ ಹೆಣ್ಣು ಮಗುವು ಸೇರಿದಂತೆ ಒಟ್ಟು 7 ಜನರಿಗೆ ಕೊರೊನಾ ಸೋಂಕು ತಗುಲಿದೆ. ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಲೇ ಇದೆ. ಕೇರಳದಲ್ಲಿ ಶುಕ್ರವಾರ ಒಂದೇ ದಿನದಲ್ಲಿ 39 ಹೊರ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 176ಕ್ಕೆ ಏರಿಕೆಯಾಗಿದೆ.

ಕೇರಳದಲ್ಲಿ 39 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸಂಖ್ಯೆ 164ಕ್ಕೆ ಏರಿಕೆಯಾಗಿದೆ. 39ರ ಪೈಕಿ 34 ಪ್ರಕರಣಗಳು ಕಾಸರಗೋಡಿನಲ್ಲೇ ದಾಖಲಾಗಿದೆ. ಕೊರೋನಾ ವೈರಸ್ ಸೋಂಕಿತರು ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಂಪ್ಲೀಟ್ ಲಾಕ್‍ಡೌನ್‍ಗೆ ಪೆÇಲೀಸ್ ಆಯುಕ್ತ ಡಾ ಪಿ ಎಸ್ ಹರ್ಷ ಆದೇಶಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ, ಶಾಸಕರೂ, ಸಂಸದರೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಫ್ ದೇಶ ಮತ್ತು ದುಬೈನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇಳಿದ ಪರಿಣಾಮ ಕಾಸರಗೋಡಿನಲ್ಲೂ ಸೋಂಕಿತರ ಸಂಖ್ಯೆ ಅತಿವೇಗದಲ್ಲಿ ಏರಿಕೆಯಾಗುತ್ತಿದೆ.
  • Blogger Comments
  • Facebook Comments

0 comments:

Post a Comment

Item Reviewed: ಸುಧಾ ಮೂರ್ತಿಯಿಂದ ಮಂಗಳೂರಿಗೆ 28 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿ : ಪೊಲೀಸ್ ಕಮಿಷನರ್ ಡಾ. ಹರ್ಷ ಧನ್ಯವಾದ Rating: 5 Reviewed By: karavali Times
Scroll to Top