ವಿದ್ಯಾರ್ಥಿಗಳು ಸಂವಿಧಾನವನ್ನು ಕಲಿತು ತಿಳಿದುಕೊಳ್ಳಬೇಕು : ಎಎಸ್ಪಿ ರಂಜಿತ್ - Karavali Times ವಿದ್ಯಾರ್ಥಿಗಳು ಸಂವಿಧಾನವನ್ನು ಕಲಿತು ತಿಳಿದುಕೊಳ್ಳಬೇಕು : ಎಎಸ್ಪಿ ರಂಜಿತ್ - Karavali Times

728x90

2 March 2020

ವಿದ್ಯಾರ್ಥಿಗಳು ಸಂವಿಧಾನವನ್ನು ಕಲಿತು ತಿಳಿದುಕೊಳ್ಳಬೇಕು : ಎಎಸ್ಪಿ ರಂಜಿತ್ಬಂಟ್ವಾಳ (ಕರಾವಳಿ ಟೈಮ್ಸ್) : ಸಂವಿಧಾನವೆಂದರೆ ದೇಶದ ನಿಯಮ ಸಂಹಿತೆಯಾಗಿದೆ. ನಮ್ಮ ಭಾರತದ ಸಂವಿಧಾನ ರಚನೆಗಾಗಿ ಅದರ ಶಿಲ್ಪಿ ಡಾ.  ಬಿ.ಆರ್. ಅಂಬೇಡ್ಕರ್ ಅವರು ಜಾಗತಿಕ ಮಟ್ಟದಲ್ಲಿ ಬೇರೆ ಬೇರೆ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಒಂದು ಸುಧೀರ್ಘವಾದ ಅತ್ಯುತ್ತಮ ಸಂವಿಧಾನವನ್ನು ಕೊಡುಗೆಯನ್ನಾಗಿ ಕೊಟ್ಟಿರುವರು. ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಹಕ್ಕು, ಕರ್ತವ್ಯ ಇತ್ಯಾದಿಗಳ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಲಾಗಿರುವ ಸಂವಿಧಾನದ ಅಡಿಯಲ್ಲೇ ದೇಶದ ಜನತೆ ನಡೆಯಬೇಕಾಗಿರುವುದರಿಂದ ಪ್ರತಿಯೊಬ್ಬರೂ ಅದನ್ನು ಅರಿತುಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳಂತೂ ಸಂವಿಧಾನವನ್ನು ಕಲಿತು ತಿಳಿದು ಕೊಳ್ಳುವುದರೊಂದಿಗೆ ದಿನನಿತ್ಯ ಪತ್ರಿಕೆಗಳ ಓದು-ಹಕ್ಕು ಜವಾಬ್ದಾರಿಗಳನ್ನು ಅರಿತು ಮುನ್ನಡೆಯಬೇಕು ಎಂದು ಬಂಟ್ವಾಳ ವಿಭಾಗದ ಎಎಸ್ಪಿ ರಂಜಿತ್ ಕುಮಾರ್ ಹೇಳಿದರು.

ದ.ಕ. ಜಿಲ್ಲಾ ಪೊಲೀಸ್ ಇಲಾಖೆ ಮತ್ತು ತುಂಬೆ ಪದವಿಪೂರ್ವ ಕಾಲೇಜು ಜಂಟಿಯಗಿ ಏರ್ಪಡಿಸಿದ್ದ ಸಂವಿಧಾನ ದಿನ ಜಾಗೃತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ವೇಳೆ ಸಂವಿಧಾನ ಕತೃ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುಸ್ತಕ ನೀಡುವ ಮೂಲಕ ಎಎಸ್ಪಿ ರಂಜಿತ್ ಕುಮಾರ್ ಅವರನ್ನು ಗೌರವಿಸಲಾಯಿತು.

ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಕಛೇರಿ ಅಧೀಕ್ಷಕ ಅಬ್ದುಲ್ ಕಬೀರ್ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪನ್ಯಾಸಕರಾದ ಅಬ್ದುಲ್ ರಹಿಮಾನ್ ಡಿ.ಬಿ. ವಂದಿಸಿ, ಕವಿತಾ ಕೆ. ಕಾರ್ಯಕ್ರಮ ನಿರೂಪಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ವಿದ್ಯಾರ್ಥಿಗಳು ಸಂವಿಧಾನವನ್ನು ಕಲಿತು ತಿಳಿದುಕೊಳ್ಳಬೇಕು : ಎಎಸ್ಪಿ ರಂಜಿತ್ Rating: 5 Reviewed By: karavali Times
Scroll to Top