ಕೊರೊನಾ ಬಗ್ಗೆ ವಾಟ್ಸಪ್ ಸುಳ್ಳು ಸಂದೇಶ : ಶಿವಮೊಗ್ಗದಲ್ಲಿ ವ್ಯಕ್ತಿಯ ಬಂಧನ - Karavali Times ಕೊರೊನಾ ಬಗ್ಗೆ ವಾಟ್ಸಪ್ ಸುಳ್ಳು ಸಂದೇಶ : ಶಿವಮೊಗ್ಗದಲ್ಲಿ ವ್ಯಕ್ತಿಯ ಬಂಧನ - Karavali Times

728x90

23 March 2020

ಕೊರೊನಾ ಬಗ್ಗೆ ವಾಟ್ಸಪ್ ಸುಳ್ಳು ಸಂದೇಶ : ಶಿವಮೊಗ್ಗದಲ್ಲಿ ವ್ಯಕ್ತಿಯ ಬಂಧನಶಿವಮೊಗ್ಗ (ಕರಾವಳಿ ಟೈಮ್ಸ್) :  ಕೊವಿದ್ -19 ಸೋಂಕಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಹರಡಿದ್ದ ವ್ಯಕ್ತಿಯ ವಿರುದ್ಧ ಶಿವಮೊಗ್ಗ ನಗರ ಪೆÇಲೀಸರು ಸೋಮವಾರ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

    ಕೊವಿದ್-19 ಸೋಂಕಿತ ಇಬ್ಬರು ವ್ಯಕ್ತಿಗಳು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ಸೋಂಕಿತ ಇಬ್ಬರು ವ್ಯಕ್ತಿಗಳನ್ನು ಪತ್ತೆ ಮಾಡುವವರೆಗೆ ಜನರು ತಮ್ಮ ಮನೆಗಳಿಂದ ಹೊರಬರಬಾರದು ಎಂದು ಇಲ್ಲಿಗೆ ಸಮೀಪದ ನಾರಾಯಣಪುರ ಗ್ರಾಮದ ನಿವಾಸಿ ನಾಗರಾಜ ನಾಯಕ್ ವಾಟ್ಸಾಪ್ ಸಂದೇಶ ರವಾನಿಸಿದ್ದ. ಆದರೆ ಈತ ರವಾನಿಸಿದ ಸಂದೇಶದಲ್ಲಿನ ಮಾಹಿತಿ ಸುಳ್ಳಾಗಿತ್ತು. ಜನರಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದ ಈ ಸುದ್ದಿ ಹಬ್ಬಿಸಲಾಗಿತ್ತು ಎಂದು ಆರೋಪಿಸಿ ಈತನ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್ 505(1) (ಬಿ) ರಂತೆ ಪ್ರಕರಣ ದಾಖಲಿಸಿ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕೊರೊನಾ ಬಗ್ಗೆ ವಾಟ್ಸಪ್ ಸುಳ್ಳು ಸಂದೇಶ : ಶಿವಮೊಗ್ಗದಲ್ಲಿ ವ್ಯಕ್ತಿಯ ಬಂಧನ Rating: 5 Reviewed By: karavali Times
Scroll to Top