ಸೈಕಲ್‍ಗಾಗಿ ಸಂಗ್ರಹ ಮಾಡಿಟ್ಟಿದ್ದ ಹಣವನ್ನು ಕೊರೋನಾ ಪರಿಹಾರ ನಿಧಿಗೆ ಅರ್ಪಿಸಿ ಮಾದರಿಯಾದ ಆಂಧ್ರದ 4 ರ ಬಾಲಕ - Karavali Times ಸೈಕಲ್‍ಗಾಗಿ ಸಂಗ್ರಹ ಮಾಡಿಟ್ಟಿದ್ದ ಹಣವನ್ನು ಕೊರೋನಾ ಪರಿಹಾರ ನಿಧಿಗೆ ಅರ್ಪಿಸಿ ಮಾದರಿಯಾದ ಆಂಧ್ರದ 4 ರ ಬಾಲಕ - Karavali Times

728x90

19 April 2020

ಸೈಕಲ್‍ಗಾಗಿ ಸಂಗ್ರಹ ಮಾಡಿಟ್ಟಿದ್ದ ಹಣವನ್ನು ಕೊರೋನಾ ಪರಿಹಾರ ನಿಧಿಗೆ ಅರ್ಪಿಸಿ ಮಾದರಿಯಾದ ಆಂಧ್ರದ 4 ರ ಬಾಲಕಸಹೃದಯತೆ ಮೆರೆದ ಬಾಲಕಗೆ ಸೈಕಲ್ ಗಿಫ್ಟ್ ಭರವಸೆ ನೀಡಿದ ಸಚಿವರು


ಹೈದರಾಬಾದ್ (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಾಕ್‍ಡೌನ್ ಮಧ್ಯೆ ತೀವ್ರ ಸಂಕಷ್ಟ ಎದುರಾದರೂ ಶ್ರೀಮಂತ-ಬಡವ ಎಂಬ ಬೇಧವಿಲ್ಲದೆ ಬಹುತೇಕ ಪರಿಹಾರ ನಿಧಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮರೆಯುತ್ತಿದ್ದಾರೆ. ಈ ಮಧ್ಯೆ ಆಂಧ್ರಪ್ರದೇಶದ 4 ವರ್ಷದ ಬಾಲಕನೋರ್ವ ತಾನು ಸೈಕಲ್ ಕೊಳ್ಳಲು ಸಂಗ್ರಹಿಸಿಟ್ಟಿದ್ದ 971 ರೂಪಾಯಿ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಧಾರೆಯೆರೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ.

ಆಂಧ್ರಪ್ರದೇಶದ ವಿಜಯವಾಡ ನಿವಾಸಿ 4 ರ ಹರೆಯದ ಬಾಲಕ ಹೇಮಂತ್ ತಾನು ಕೂಡಿಟ್ಟ 971 ರೂಪಾಯಿಗಳನ್ನು ಎ. 7 ರಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾನೆ. ತಾಡೆಪಲ್ಲಿಯ ವೈಎಸ್‍ಆರ್ ಕಾಂಗ್ರೆಸ್ ಕಚೇರಿಯಲ್ಲಿ ಆಂಧ್ರಪ್ರದೇಶದ ಸಾರಿಗೆ ಸಚಿವ ಪೆರ್ನಿ ವೆಂಕಟರಾಮಯ್ಯ ಅವರನ್ನು ಭೇಟಿ ಮಾಡಿ ಈ ಹಣ ನೀಡಿದ್ದಾನೆ. ಬಾಲಕನ ಸಹಾಯದ ಗುಣವನ್ನು ಕಂಡು ಸಚಿವ ವೆಂಕಟರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಶೀಘ್ರದಲ್ಲೇ ಸಹೃದಯಿ ಬಾಲಕನಿಗೆ ಸೈಕಲ್ ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸೈಕಲ್‍ಗಾಗಿ ಸಂಗ್ರಹ ಮಾಡಿಟ್ಟಿದ್ದ ಹಣವನ್ನು ಕೊರೋನಾ ಪರಿಹಾರ ನಿಧಿಗೆ ಅರ್ಪಿಸಿ ಮಾದರಿಯಾದ ಆಂಧ್ರದ 4 ರ ಬಾಲಕ Rating: 5 Reviewed By: karavali Times
Scroll to Top