ವಿಮಾನ ಟಿಕೆಟ್ ಬುಕ್ಕಿಂಗ್ ಆರಂಭಿಸಿದ ಏರ್ ಇಂಡಿಯಾ : ಮೇ 4ರಿಂದ ದೇಶೀಯ ಹಾಗೂ ಜೂನ್ 1ರಿಂದ ಅಂತರಾಷ್ಟ್ರೀಯ ವಿಮಾನಗಳ ಸೇವೆ ಆರಂಭ - Karavali Times ವಿಮಾನ ಟಿಕೆಟ್ ಬುಕ್ಕಿಂಗ್ ಆರಂಭಿಸಿದ ಏರ್ ಇಂಡಿಯಾ : ಮೇ 4ರಿಂದ ದೇಶೀಯ ಹಾಗೂ ಜೂನ್ 1ರಿಂದ ಅಂತರಾಷ್ಟ್ರೀಯ ವಿಮಾನಗಳ ಸೇವೆ ಆರಂಭ - Karavali Times

728x90

18 April 2020

ವಿಮಾನ ಟಿಕೆಟ್ ಬುಕ್ಕಿಂಗ್ ಆರಂಭಿಸಿದ ಏರ್ ಇಂಡಿಯಾ : ಮೇ 4ರಿಂದ ದೇಶೀಯ ಹಾಗೂ ಜೂನ್ 1ರಿಂದ ಅಂತರಾಷ್ಟ್ರೀಯ ವಿಮಾನಗಳ ಸೇವೆ ಆರಂಭನವದೆಹಲಿ (ಕರಾವಳಿ ಟೈಮ್ಸ್) : ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮೇ 4 ರಿಂದ ದೇಶೀಯ ವಿಮಾನಗಳ ಮತ್ತು ಜೂನ್ 1 ರಿಂದ ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಿಸುತ್ತಿದ್ದು, ಪ್ರಯಾಣಿಕರಿಗೆ ಟಿಕೆಟ್ ನೀಡಲು ಆರಂಭಿಸಿದೆ.

ಎರಡನೇ ಹಂತದ ಲಾಕ್‍ಡೌನ್ ಮುಗಿದ ನಂತರ ಮೇ 4 ರಿಂದ ಆಯ್ದ ಮಾರ್ಗಗಳಲ್ಲಿ ದೇಶೀಯ ವಿಮಾನಯಾನಗಳನ್ನು ಆರಂಭಿಸಲಿದೆ ಎಂದು ಕಂಪನಿ ತಿಳಿಸಿದೆ. ಜೂನ್ 1 ರಿಂದ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳು ಪ್ರಾರಂಭವಾಗಲಿವೆ. ಖಾಸಗಿ ವಿಮಾನಯಾನ ಕಂಪನಿಗಳು ಈಗಾಗಲೇ ಮೇ 4 ರಿಂದ ಬುಕಿಂಗ್ ಪ್ರಾರಂಭಿಸಿವೆ.

ಮಾರ್ಚ್ 24 ರಿಂದ ಸರ್ಕಾರವು ದೇಶಾದ್ಯಂತ ಲಾಕ್‍ಡೌನ್ ಜಾರಿಗೆ ತಂದಿರುವುದು ಗಮನಾರ್ಹ. ಇದನ್ನು ಮೊದಲು ಏಪ್ರಿಲ್ 14 ರವರೆಗೆ ಜಾರಿಗೆ ತರಲಾಗಿತ್ತು. ಈಗ ಲಾಕ್‍ಡೌನ್ ಅನ್ನು ಮೇ 3 ಕ್ಕೆ ವಿಸ್ತರಿಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ವಿಮಾನ ಟಿಕೆಟ್ ಬುಕ್ಕಿಂಗ್ ಆರಂಭಿಸಿದ ಏರ್ ಇಂಡಿಯಾ : ಮೇ 4ರಿಂದ ದೇಶೀಯ ಹಾಗೂ ಜೂನ್ 1ರಿಂದ ಅಂತರಾಷ್ಟ್ರೀಯ ವಿಮಾನಗಳ ಸೇವೆ ಆರಂಭ Rating: 5 Reviewed By: karavali Times
Scroll to Top