ಕೊರೋನಾ ವೈರಾಣು ಮನುಷ್ಯ ಸೃಷ್ಟಿ ವೈರಸ್ : ನೊಬೆಲ್ ಪ್ರಶಸ್ತಿ ವಿಜೇತ ವೈರಾಲಜಿಸ್ಟ್ ಆರೋಪ - Karavali Times ಕೊರೋನಾ ವೈರಾಣು ಮನುಷ್ಯ ಸೃಷ್ಟಿ ವೈರಸ್ : ನೊಬೆಲ್ ಪ್ರಶಸ್ತಿ ವಿಜೇತ ವೈರಾಲಜಿಸ್ಟ್ ಆರೋಪ - Karavali Times

728x90

19 April 2020

ಕೊರೋನಾ ವೈರಾಣು ಮನುಷ್ಯ ಸೃಷ್ಟಿ ವೈರಸ್ : ನೊಬೆಲ್ ಪ್ರಶಸ್ತಿ ವಿಜೇತ ವೈರಾಲಜಿಸ್ಟ್ ಆರೋಪ



ಪ್ಯಾರಿಸ್ (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಮನುಷ್ಯನ ಸೃಷ್ಟಿ ಎಂದು ಫ್ರೆಂಚ್ ವೈರಾಲಜಿಸ್ಟ್ ಲುಕ್ ಮೊಂಟಾಗ್ನಿಯರ್ ಆರೋಪಿಸಿದ್ದಾರೆ. ಏಡ್ಸ್ ವೈರಸ್‍ಗೆ ಸಂಬಂಧಿಸಿದಂತೆ ನಡೆದ ಸಂಶೋಧನೆಯಲ್ಲಿ ಸಹ-ಸಂಶೋಧಕರಾಗಿದ್ದ ಪ್ರೆಂಚ್ ವೈರಾಲಜಿಸ್ಟ್ ಲುಕ್ ಮೊಂಟಾಗ್ನಿಯರ್ 2008ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಕೊರೋನಾ ವೈರಸ್ ಬಗ್ಗೆ ಮಾತನಾಡಿರುವ ಮೊಂಟಾಗ್ನಿಯರ್, ಚೀನಾದ ಪ್ರಯೋಗಾಲಯದಲ್ಲಿ ಏಡ್ಸ್ ವೈರಸ್‍ಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿ ಈ ವೈರಸ್‍ನ್ನು ಮನುಷ್ಯನೇ ಸೃಷ್ಟಿಸಿದ್ದಾನೆ. ಇದು ನೈಸರ್ಗಿಕವಾಗಿ ಉತ್ಪತ್ತಿಯಾಗಿರುವ ವೈರಸ್ ಅಲ್ಲ. ಮಾನವ ಸೃಷ್ಟಿ ವೈರಸ್ ಎಂದು ಹೇಳಿದ್ದಾರೆ.

ಪ್ರೆಂಚ್ ಸುದ್ದಿವಾಹಿನಿಯೊಂದು ನಡೆಸಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಲ್ಯೂಕ್ ಮೊಂಟಾಗ್ನಿಯರ್, ಕೊರೋನಾ ವೈರಸ್‍ನ ಜೀನೋಮ್ (ಜೀವಕೋಶಗಳ ಗುಚ್ಛ)ದಲ್ಲಿ ಹೆಚ್‍ಐವಿ ಅಂಶಗಳು, ಮಲೇರಿಯಾ ವೈರಾಣು ಇರುವುದು ಪತ್ತೆಯಾಗಿದೆ. ಇದು ಸ್ವಾಭಾವಿಕವಾಗಿ ಕಾಣಲು ಸಾಧ್ಯವಿಲ್ಲ. ಆದ್ದರಿಂದ ಕೊರೋನಾ ವೈರಸ್‍ನ ಜೀನೋಮ್ ಅತ್ಯಂತ ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ. 

2000 ರಿಂದಲೂ ಚೀನಾದ ವುಹಾನ್ ರಾಷ್ಟ್ರೀಯ ಬಯೋ ಸೇಫ್ಟಿ ಲ್ಯಾಬೊರೇಟರಿಯಲ್ಲಿ ಇಂತಹ ಕೊರೋನ ವೈರಸ್‍ಗಳಲ್ಲಿ ಪರಿಣತಿ ಪಡೆದಿದೆ. ಇಲ್ಲಿಂದಲೇ ಆಕಸ್ಮಿಕವಾಗಿ ಬಂದಿರಬೇಕು ಎಂದು ಮೊಂಟಾಗ್ನಿಯರ್ ಹೇಳಿದ್ದಾರೆ. ಕೊರೋನಾ ವೈರಸ್ ಸೋರಿಕೆಯಾಗಿರುವುದು ಹೇಗೆ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಮೆರಿಕ ಹೇಳಿಕೆ ನೀಡಿರುವ ಸಂದರ್ಭಲ್ಲೇ ಫ್ರೆಂಚ್ ವೈರಾಲಜಿಸ್ಟ್ ಈ ಹೇಳಿಕೆ ನೀಡಿರುವುದು ಗಮನಾಗರ್ಹವಾಗಿದೆ.

ಏಡ್ಸ್ ಹಾಗೂ ಪಾರ್ಕಿನ್ಸನ್ ಸಮಸ್ಯೆಗಳಿಗೆ ಪಪಾಯದಿಂದ ಉಂಟಾಗುವ ಉಪಯೋಗಗಳು, ಡಿಎನ್‍ಎಯಿಂದ ವಿದ್ಯುತ್ಕಾಂತೀಯ ಅಲೆಗಳು ಹೊರಹೊಮ್ಮುವುದು ಹೀಗೆ ಲ್ಯೂಕ್ ಮೊಂಟಾಗ್ನಿಯರ್ ಅವರ ಹಲವು ಸಂಶೋಧನಾ ಕೃತಿಗಳು ವಿವಾದಗಳಿಗೆ ಗುರಿಯಾಗಿತ್ತು. ವೈಜ್ಞಾನಿಕ ಸಮುದಾಯವೂ ಈ ಬಗ್ಗೆ ಟೀಕಿಸಿತ್ತು. ಫ್ರೆಂಚ್ ವೈರಾಲಜಿಸ್ಟ್ ಎಟಿಯೆನ್ ಸೈಮನ್-ಲೋರಿಯೆರ್ ಮೊಂಟಾಗ್ನಿಯರ್ ಅವರ ಹೇಳಿಕೆಗಳನ್ನು ಅಲ್ಲಗಳೆದಿದ್ದು, ಕೊರೋನಾ ವೈರಸ್‍ನ ಸಮುದಾಯದ ಬೇರೆ ವೈರಾಣುಗಳಲ್ಲಿಯೂ ಮೊಂಟಾಗ್ನಿಯರ್ ಅವರು ಹೇಳಿರುವ ಅಂಶಗಳಿರುತ್ತವೆ ಎಂದು ಹೇಳಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ವೈರಾಣು ಮನುಷ್ಯ ಸೃಷ್ಟಿ ವೈರಸ್ : ನೊಬೆಲ್ ಪ್ರಶಸ್ತಿ ವಿಜೇತ ವೈರಾಲಜಿಸ್ಟ್ ಆರೋಪ Rating: 5 Reviewed By: karavali Times
Scroll to Top