ಲಾಕ್‍ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್‍ಗಳ ಪೂರ್ಣ ಹಣ ಮರುಪಾವತಿ - Karavali Times ಲಾಕ್‍ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್‍ಗಳ ಪೂರ್ಣ ಹಣ ಮರುಪಾವತಿ - Karavali Times

728x90

16 April 2020

ಲಾಕ್‍ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್‍ಗಳ ಪೂರ್ಣ ಹಣ ಮರುಪಾವತಿನವದೆಹಲಿ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್‍ಗಳ ಹಣವನ್ನು ಪೂರ್ತಿಯಾಗಿ ಮರುಪಾವತಿ ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.

ಮೊದಲ ಹಂತದ ಲಾಕ್‍ಡೌನ್‍ನಿಂದ ಮೇ. 3ವರೆಗೆ ಕಾಯ್ದಿರಿಸಲಾದ ಟಿಕೆಟ್‍ಗಳಿಗೆ ಪ್ರಯಾಣಿಕರು ಕೇಳಿದಲ್ಲಿ, ರದ್ದತಿ ಶುಲ್ಕವಿಲ್ಲದೇ ಪೂರ್ಣ ಹಣವನ್ನು ವಾಪಸ್ ನೀಡಲಾಗುತ್ತದೆ. ಮಾ. 25 ರಿಂದ ಎ. 14ರ ಅವಧಿಗೆ ಟಿಕೆಟ್ ಬುಕ್ ಮಾಡಿದ್ದರೆ ಏರ್ಲೈನ್ಸ್‍ನಿಂದ ಪೂರ್ತಿ ಹಣವನ್ನು ವಾಪಸ್ ನೀಡಲಾಗುತ್ತದೆ. ಟಿಕೆಟ್ ರದ್ದುಗೊಳಿಸಲು ಮನವಿ ಮಾಡಿದ ಮೂರು ವಾರಗಳಲ್ಲಿ ಮರುಪಾವತಿ ಖಾತೆಗೆ ಸೇರಲಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶಿಯ ವಿಮಾನಯಾನ ಸಂಸ್ಥೆಗಳು ಮರುಪಾವತಿ ಮಾಡಲು ಒಪ್ಪದೇ ಮುಂದಿನ ಬಾರಿಯ ವಿಮಾನ ಪ್ರಯಾಣದ ವೇಳೆ ಇದನ್ನು ಬಳಕೆ ಮಾಡಿಕೊಳ್ಳಬೇಕೆಂದು ಹೇಳುತ್ತಿವೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಮಾನಯಾನ ಸಚಿವಾಲಯ ಸ್ಪಷ್ಟನೆ ನೀಡಿದೆ.
  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್‍ಗಳ ಪೂರ್ಣ ಹಣ ಮರುಪಾವತಿ Rating: 5 Reviewed By: karavali Times
Scroll to Top