ಮಂಗಳೂರು (ಕರಾವಳಿ ಟೈಮ್ಸ್) : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬಿಡುಗಡೆಗೊಳಿಸಿದ್ದ ವೀಡಿಯೋ ಸಂದೇಶದಲ್ಲಿ ಕ್ಯಾಂಡಲ್ ಹಚ್ಚುವಂತೆ ಸಲಹೆ ನೀಡಿರುವ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ. ಖಾದರ್ ಪ್ರಧಾನಿ ನಿರ್ಧಾರದ ಬಗ್ಗೆ ಟೀಕಿಸಿದ್ದಾರೆ.
ಚಪ್ಪಾಳೆ ತಟ್ಟಿಯಾಯ್ತು, ಪಾತ್ರೆ ಬಡಿದಾಯ್ತು, ಇನ್ನು ಕ್ಯಾಂಡಲ್ ಹಚ್ಚಬೇಕೇ? ಪ್ರಧಾನಿಗಳೇ ಇದು ಯಾಕೋ ಸ್ವಲ್ಪ ಜಾಸ್ತಿಯಾಯಿತು ಅನಿಸ್ತಾ ಇಲ್ವಾ? ಇದರ ಬದಲು ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ಜನ ಸಾಮಾನ್ಯರ ಹಸಿದ ಹೊಟ್ಟೆಗೆ ಅನ್ನ ನೀಡಿ. ಆ ಮೂಲಕ ಜನರ ಸಹಭಾಗಿತ್ವದಲ್ಲಿ ಕೊರೋನಾ ವಿರುದ್ದ ಹೋರಾಟ ಮುಂದುವರಿಸೋಣ. ಜನರಿಗೆ ಮೌಢ್ಯ ತುಂಬಿದ ನಿರ್ಧಾರಗಳನ್ನು ಹೇರುವ ಮೂಲಕ ಮೂರ್ಖರಾಗಿಸುವುದು ಬೇಡ ಎಂದು ಯು ಟಿ ಖಾದರ್ ಸಲಹೆ ನೀಡಿದ್ದಾರೆ.
0 comments:
Post a Comment