ಲಾಕ್‍ಡೌನ್ ಸಂಕಷ್ಟದಲ್ಲಿರುವ ಅನಿವಾಸಿಗಳನ್ನು ಕರೆತರಲು ಏರ್‍ಲಿಫ್ಟ್ ವಿಸ್ತರಣೆಗೆ ನಿರ್ಧಾರ! - Karavali Times ಲಾಕ್‍ಡೌನ್ ಸಂಕಷ್ಟದಲ್ಲಿರುವ ಅನಿವಾಸಿಗಳನ್ನು ಕರೆತರಲು ಏರ್‍ಲಿಫ್ಟ್ ವಿಸ್ತರಣೆಗೆ ನಿರ್ಧಾರ! - Karavali Times

728x90

29 May 2020

ಲಾಕ್‍ಡೌನ್ ಸಂಕಷ್ಟದಲ್ಲಿರುವ ಅನಿವಾಸಿಗಳನ್ನು ಕರೆತರಲು ಏರ್‍ಲಿಫ್ಟ್ ವಿಸ್ತರಣೆಗೆ ನಿರ್ಧಾರ!ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ಲಾಕ್‍ಡೌನ್‍ನಿಂದಾಗಿ ವಿದೇಶದಲ್ಲಿ ಸಂಕಷ್ಟಕ್ಕೀಡಾಗಿರುವ ಅನಿವಾಸಿಗಳನ್ನು  ಕರೆತರಲು ಕೇಂದ್ರ ಸರಕಾರ ಏರ್‍ಲಿಫ್ಟ್ ಕಾರ್ಯಾಚರಣೆ ಮುಂದುವರಿಸಲು ಯೋಚಿಸಿದ್ದು, ಈಗಾಗಲೇ ಹಮ್ಮಿಕೊಳ್ಳಲಾಗಿರುವ ವಂದೇ ಭಾರತ್ ಮಿಷನ್ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. 2ನೇ ಹಂತದಲ್ಲಿ 1 ಲಕ್ಷಕ್ಕೂ ಅಧಿಕ ಅನಿವಾಸಿಗಳನ್ನು ಕರೆತರುವ ಗುರಿ ಹೊಂದಲಾಗಿದೆ.

ಮೊದಲ ಹಂತದ ಯೋಜನೆಯಲ್ಲಿ ಈಗಾಗಲೇ 45 ಸಾವಿರಕ್ಕೂ ಅಧಿಕ ಭಾರತೀಯರನ್ನು ವಿದೇಶದಿಂದ  ಕರೆತರಲಾಗಿತ್ತು. ಇದೀಗ 2ನೇ ಹಂತದಲ್ಲಿ 1 ಲಕ್ಷಕ್ಕೂ ಅಧಿಕ ಅನಿವಾಸಿಗಳನ್ನು ದೇಶಕ್ಕೆ ಕರೆತರುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಈ ಬಗ್ಗೆ  ಮಾಹಿತಿ ನೀಡಿರುವ ಕೇಂದ್ರ ವಿದೇಶಾಂಗ ಸಚಿವಾಲಯ ಜೂನ್ 13ರವರೆಗೆ 1 ಲಕ್ಷಕ್ಕೂ ಅಧಿಕ ಜರನ್ನು ಭಾರತಕ್ಕೆ ಕರೆತರಲಾಗುವುದು ಎಂದು ಹೇಳಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಮಾಹಿತಿ ನೀಡಿ, ‘ಲ್ಯಾಟಿನ್ ಅಮೆರಿಕ, ಕೆರಿಬಿಯನ್, ಆಫ್ರಿಕಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಉಳಿದುಕೊಂಡಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರಕಾರ ಮುಂದಾಗಿದೆ. ಭಾರತಕ್ಕೆ  ಹಾರಾಟ ನಡೆಸುತ್ತಿರುವ ವಿದೇಶಿ ವಿಮಾನಗಳ ಸಹಾಯ ಪಡೆದುಕೊಳ್ಳುವ ಮೂಲಕ ಈ ಕಾರ್ಯವನ್ನು ಮಾಡಲಾಗುತ್ತಿದೆ. ಗುರುವಾರ ಮಧ್ಯಾಹ್ನದವರೆಗೆ ಒಟ್ಟು 45,216 ಭಾರತೀಯರನ್ನು ಮರಳಿ ಕರೆತರಲಾಯಿತು. ಅವರಲ್ಲಿ 8,069 ವಲಸೆ ಕಾರ್ಮಿಕರು, 7,656 ವಿದ್ಯಾರ್ಥಿಗಳು ಮತ್ತು  5,107 ವೃತ್ತಿಪರರು ಸೇರಿದ್ದಾರೆ. ಸುಮಾರು 5,000 ಭಾರತೀಯರು ನೇಪಾಳ ಮತ್ತು ಬಾಂಗ್ಲಾದೇಶದಿಂದ ಭೂ ಗಡಿಯ ಮೂಲಕ ಮರಳಿದ್ದಾರೆ ಎಂದವರು ಹೇಳಿದ್ದಾರೆ. ಮೇ 7ರಂದು ವಂದೇ ಭಾರತ್ ಮಿಷನ್ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. 
  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್ ಸಂಕಷ್ಟದಲ್ಲಿರುವ ಅನಿವಾಸಿಗಳನ್ನು ಕರೆತರಲು ಏರ್‍ಲಿಫ್ಟ್ ವಿಸ್ತರಣೆಗೆ ನಿರ್ಧಾರ! Rating: 5 Reviewed By: karavali Times
Scroll to Top