ಚೆನ್ನಾವರ : ಎಸ್ಸೆಸ್ಸೆಫ್, ಎಸ್‍ವೈಎಸ್ ವತಿಯಿಂದ ರಂಝಾನ್ ಹಾಗೂ ಈದ್ ಕಿಟ್ ವಿತರಣೆ - Karavali Times ಚೆನ್ನಾವರ : ಎಸ್ಸೆಸ್ಸೆಫ್, ಎಸ್‍ವೈಎಸ್ ವತಿಯಿಂದ ರಂಝಾನ್ ಹಾಗೂ ಈದ್ ಕಿಟ್ ವಿತರಣೆ - Karavali Times

728x90

23 May 2020

ಚೆನ್ನಾವರ : ಎಸ್ಸೆಸ್ಸೆಫ್, ಎಸ್‍ವೈಎಸ್ ವತಿಯಿಂದ ರಂಝಾನ್ ಹಾಗೂ ಈದ್ ಕಿಟ್ ವಿತರಣೆ
ಚೆನ್ನಾವರ (ಕರಾವಳಿ ಟೈಮ್ಸ್) : ಇಲ್ಲಿನ ಎಸ್‍ವೈಎಸ್ ಹಾಗೂ ಎಸ್ಸೆಸ್ಸೆಫ್ ಶಾಖಾ ವತಿಯಿಂದ ಕೊರೋನ ಲಾಕ್‍ಡೌನ್ ವೇಳೆಯಲ್ಲಿ ಮೂರು ಹಂತದ ಕಿಟ್ ವಿತರಿಸಲಾಯ್ತು. ರಂಝಾನ್ ಪ್ರಾರಂಭದಲ್ಲಿ ಅಕ್ಕಿ ಸಕ್ಕರೆ, ಮೆಣಸು, ಎಣ್ಣೆ, ಬೇಳೆ ಕಾಳುಗಳನ್ನೊಳಗೊಂಡ ಆಯ್ದ ಸುಮಾರು 30 ರಷ್ಟು ಕುಟುಂಬಗಳಿಗೆ ಮೊದಲನೇ ಹಂತದ ಕಿಟ್ ವಿತರಿಸಲಾಯಿತು. ಬದ್ರ್ ಅನುಸ್ಮರಣೆಯ ಪ್ರಯುಕ್ತ ಸುಮಾರು 80 ರಷ್ಟು ಮನೆಗಳಿಗೆ ಹಣ್ಣು-ಹಂಪಲುಗಳಿರುವ ಎರಡನೇ ಹಂತದ ಕಿಟ್ ವಿತರಿಸಲಾಯಿತು. ಹಾಗೂ ಈದ್ ಆಚರಿಸಲು ಬೇಕಾದ ಮಾಂಸ, ತುಪ್ಪಕ್ಕಿ, ತುಪ್ಪ , ಪಾನೀಯ ಪದಾರ್ಥ, ಮಸಾಲ ಪದಾರ್ಥಗಳನ್ನೊಳಗೊಂಡ ಮೂರನೇ ಹಂತದ ಕಿಟ್ ವಿತರಿಸಲಾಯಿತು.

ಪ್ರಸ್ತುತ ಕಿಟ್ ವಿತರಣೆಗೆ ಸಂಘಟನೆಯ ಪ್ರವಾಸಿ ಹಾಗೂ ಊರಿನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ನೀಡಿರುತ್ತಾರೆ. ಸುಮಾರು 75 ಸಾವಿರ ರೂಪಾಯಿ ಮೊತ್ತದ ಕಿಟ್ ಈ ವರ್ಷ ವಿತರಿಸಲಾಗಿದೆ. ಪ್ರತೀ ವರ್ಷ ಏಕ ಹಂತದ ಕಿಟ್ ಕೊಡಲಾಗುತ್ತಿತ್ತು. ಆದರೆ ಈ ಬಾರಿಯ ಸಂಕಷ್ಟ ಪರಿಸ್ಥಿತಿಗೆ ಸ್ಪಂದಿಸುವ ಉದ್ದೇಶದಿಂದ ಭಿನ್ನ ರೀತಿಯಲ್ಲಿ ಕಿಟ್ ವಿತರಿಸಲಾಯಿತು ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.

ಜಮಾಅತ್ ಅಧ್ಯಕ್ಷ ಕರೀಂ ಹಾಜಿ, ಯೂಸುಫ್ ಹಾಜಿ, ಎಸ್‍ವೈಎಸ್ ಅಧ್ಯಕ್ಷ ಇಸ್ಮಾಈಲ್ ಸಅದಿ, ಎಸ್ಸೆಸ್ಸೆಫ್ ಅಧ್ಯಕ್ಷ ಇಸ್ಮಾಯಿಲ್ ಹನೀಫಿ, ಸಿ.ಪಿ. ಅಬೂಬಕರ್ ಮದನಿ, ಅಲ್-ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ, ಅಬ್ದುಲ್ ರಹ್ಮಾನ್ ಬಿ., ಸಿ.ಪಿ. ಮುಹಮ್ಮದ್ ಹಾಜಿ, ಅಬ್ದುಲ್ ರಝಾಕ್ ಹಾಜಿ, ಪುತ್ತುಞÂ ಹಾಜಿ ಬಾಯಂಬಾಡಿ, ಅಬ್ದುಲ್ ಅಝೀಝ್, ಅಮೀನ್ ಝುಹ್ರಿ, ಇಕ್ಬಾಲ್ ಮದನಿ, ಹನೀಫ್ ಇಂದ್ರಾಜೆ, ಮುತ್ತಲಿಬ್ ಹಾಜಿ,  ನಸೀರ್ ನಿಝಾಮಿ, ನಿಝಾರ್ ಮುಸ್ಲಿಯಾರ್, ಇಕ್ಬಾಲ್ ಸಿ., ಆಸಿಫ್ ಪಿ.ಎಂ., ಜಬ್ಬಾರ್ ಮುಕ್ಕೂರ್, ಉಮರ್ ಕೆ., ಮುನಾಝ್, ಅಬ್ದುಲ್ ಬಾಸಿತ್ ಮೊದಲಾದವರು ಈ ಸಂದರ್ಭ ಉಪಸ್ಥಿರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಚೆನ್ನಾವರ : ಎಸ್ಸೆಸ್ಸೆಫ್, ಎಸ್‍ವೈಎಸ್ ವತಿಯಿಂದ ರಂಝಾನ್ ಹಾಗೂ ಈದ್ ಕಿಟ್ ವಿತರಣೆ Rating: 5 Reviewed By: karavali Times
Scroll to Top