ಕ್ವಾರಂಟೈನ್ ಅವ್ಯವಸ್ಥೆ ಬಗ್ಗೆ ದೂರು ನೀಡಲು ಬಂದಿದ್ದ ವ್ಯಕ್ತಿಯಿಂದ ವಿಟ್ಲ ಠಾಣಾ ಪೇದೆಗೆ ಕೊರೊನಾ ಸೋಂಕು - Karavali Times ಕ್ವಾರಂಟೈನ್ ಅವ್ಯವಸ್ಥೆ ಬಗ್ಗೆ ದೂರು ನೀಡಲು ಬಂದಿದ್ದ ವ್ಯಕ್ತಿಯಿಂದ ವಿಟ್ಲ ಠಾಣಾ ಪೇದೆಗೆ ಕೊರೊನಾ ಸೋಂಕು - Karavali Times

728x90

24 May 2020

ಕ್ವಾರಂಟೈನ್ ಅವ್ಯವಸ್ಥೆ ಬಗ್ಗೆ ದೂರು ನೀಡಲು ಬಂದಿದ್ದ ವ್ಯಕ್ತಿಯಿಂದ ವಿಟ್ಲ ಠಾಣಾ ಪೇದೆಗೆ ಕೊರೊನಾ ಸೋಂಕುಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯ ಪೇದೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮೇ 14ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಕ್ವಾರಂಟೈನ್ ಬಗ್ಗೆ ಸಂಬಂಧಪಟ್ಟವರು ಸರಿಯಾದ ಮಾಹಿತಿ ನೀಡದ ಕಾರಣ ದೂರು ನೀಡಲು ಸೋಂಕಿತ ವ್ಯಕ್ತಿ ವಿಟ್ಲ ಪೊಲೀಸ್ ಠಾಣೆಗೆ ಹೋಗಿದ್ದ. ಆತನ ದ್ವಿತೀಯ ಸಂಪರ್ಕಕ್ಕೆ ಬಂದ ಠಾಣೆಯ  42 ವರ್ಷದ ಹೆಡ್ ಕಾನ್‍ಸ್ಟೇಬಲ್ ಅವರಿಗೆ ಭಾನುವಾರ ಪಾಸಿಟಿವ್ ದೃಢಪಟ್ಟಿದೆ.

    ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್‍ನಲ್ಲಿದ್ದು ಮೇ 18 ರಂದು ಪಾಸಿಟಿವ್ ಬಂದಿತ್ತು. ಕ್ವಾರಂಟೈನ್ ಆಗುವುದಕ್ಕೆ ಮೊದಲು ಠಾಣೆಗೆ ಹೋಗಿದ್ದರಿಂದ ಸೋಂಕು ಬಂದಿದೆ. ಮುಂಬೈ ವ್ಯಕ್ತಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನ ಸಂಪರ್ಕಕ್ಕೆ ಬಂದಿದ್ದರಿಂದ ಮೂರು ಮಂದಿ ಪೇದೆಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಓರ್ವ ಪೇದೆಗೆ ಸೋಂಕು ಇರುವುದು ದೃಢಪಟ್ಟಿದೆ.

    ಸೋಂಕಿತ ಪೇದೆ ಮುಂಬೈ ವ್ಯಕ್ತಿಯ ಜೊತೆ ನೇರ ಸಂಪರ್ಕ ಹೊಂದಿರಲಿಲ್ಲ. ಮುಂಬೈಯಿಂದ ಮೇ 14 ರಂದು ಬಂದ ವ್ಯಕ್ತಿಯನ್ನು ಅಂಬ್ಯುಲೆನ್ಸ್ ಚಾಲಕ ಕ್ವಾರೆಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗದೇ ಮಾರ್ಗ ಮಧ್ಯೆ ಇಳಿಸಿ ಹೋಗಿದ್ದ. ಇದರಿಂದ ಆಕ್ರೋಶಗೊಂಡ ವ್ಯಕ್ತಿ ಅಂಬ್ಯುಲೆನ್ಸ್ ಚಾಲಕನ ವಿರುದ್ಧ ದೂರು ನೀಡಲು  ವಿಟ್ಲ ಪೆÇಲೀಸ್ ಠಾಣೆಗೆ ತೆರಳಿದ್ದರು. ಆಗ ಅಲ್ಲಿನ ಓರ್ವ ಪೇದೆಗೆ ತನ್ನ ಆಧಾರ್ ಕಾರ್ಡ್ ಕೊಟ್ಟಿದ್ದ. ಅದನ್ನು ಪರಿಶೀಲನೆ ಮಾಡಿದ ಪೇದೆ ವಾಪಸ್ ನೀಡಿದ್ದರು. ಆದರೆ ಕೈಯನ್ನು ಸ್ವಚ್ಛಗೊಳಿಸದೇ ಯಾವುದೋ ಬೇರೆ ವಿಚಾರ ಮಾತನಾಡಲು ಪೇದೆ ತನ್ನ ಬಳಕೆಯ ಮೊಬೈಲ್ ಅನ್ನು ಠಾಣೆಯ ಮುಖ್ಯ ಪೇದೆಗೆ ಕೊಟ್ಟಿದ್ದರು.

    ದೂರು ನೀಡಿದ ಬಳಿಕ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದ್ದ ವ್ಯಕ್ತಿಗೆ ನಾಲ್ಕು ದಿನದ ಬಳಿಕ ಅಂದರೆ ಮೇ 18 ರಂದು ಸೋಂಕು ದೃಢಪಟ್ಟಿತ್ತು. ಆತನ ಟ್ರಾವೆಲ್ ಹಿಸ್ಟರಿಯಲ್ಲಿ ಇದ್ದ ವಿಟ್ಲ ಠಾಣೆಯ ಪೆÇಲೀಸರನ್ನು ಕ್ವಾರಂಟೈನ್‍ಗೆ ಒಳಪಡಿಸಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿತ್ತು. ಇಂದು ವರದಿ ಬಂದಿದ್ದು ಪೇದೆಯಿಂದ ಮೊಬೈಲ್ ಪಡೆದು ಬಳಸಿದ್ದ ಸೋಂಕಿತನ ಸೆಕೆಂಡರಿ ಸಂಪರ್ಕದಲ್ಲಿದ್ದ ಪೇದೆಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕಿತನ ನೇರ ಸಂಪರ್ಕ ಹೊಂದಿದ್ದ ಆಧಾರ್ ಕಾರ್ಡ್ ಪಡೆದ ಪೇದೆಯ ಕೊರೊನಾ ರಿಪೆÇೀರ್ಟ್ ವರದಿ ನೆಗೆಟಿವ್ ಬಂದಿದೆ.

    ಪೇದೆಗೆ ಸೋಂಕು ಬಂದ ಹಿನ್ನೆಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನೇತೃತ್ವದಲ್ಲಿ ವಿಟ್ಲ ಪೆÇಲೀಸ್ ಠಾಣೆಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಭಾನುವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಬುಲೆಟಿನ್‍ನಲ್ಲಿ ಒಂದು ಪ್ರಕರಣ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 58ಕ್ಕೇರಿಕೆಯಾಗಿದೆ. ಒಟ್ಟು 15 ಮಂದಿ ಬಿಡುಗಡೆಯಾಗಿದ್ದು, 37 ಸಕ್ರಿಯ ಪ್ರಕರಣಗಳಿವೆ. 6 ಮಂದಿ ಮೃತಪಟ್ಟಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕ್ವಾರಂಟೈನ್ ಅವ್ಯವಸ್ಥೆ ಬಗ್ಗೆ ದೂರು ನೀಡಲು ಬಂದಿದ್ದ ವ್ಯಕ್ತಿಯಿಂದ ವಿಟ್ಲ ಠಾಣಾ ಪೇದೆಗೆ ಕೊರೊನಾ ಸೋಂಕು Rating: 5 Reviewed By: karavali Times
Scroll to Top