ಕಡಬ (ಕರಾವಳಿ ಟೈಮ್ಸ್) : ಜೀವಕಾರುಣ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ರಿ) ಮಂಗಳೂರು (ಡಿ.ಕೆ.ಎಸ್.ಸಿ) ಇದರ ಬೆಳ್ಳಿಹಬ್ಬದ ಪ್ರಯುಕ್ತ ಸಿಲ್ವರ್ ಜ್ಯುಬಿಲಿ ಕೋರ್ ಕಮಿಟಿ (ಜಿಸಿಸಿ) ವತಿಯಿಂದ ಕೋವೀಡ್-19 ಲಾಕ್‍ಡೌನ್ ಸಂಕಷ್ಟಗೊಳಾದ ಜನರಿಗೆ ಸಾಂತ್ವನ ನೀಡುವ ಸಲುವಾಗಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ಸುಮಾರು 50 ಲಕ್ಷ ರೂಪಾಯಿಗೂ ಮಿಕ್ಕಿದ ವೆಚ್ಚದಲ್ಲಿ, ಸುಮಾರು 2,500ಕ್ಕೂ ಅಧಿಕ ಕುಟುಂಬಗಳಿಗೆ ವಿತರಿಸುವ ಭಾಗವಾಗಿ ಕಡಬ ತಾಲೂಕಿನ ಕಡಬ, ಕೋಡಿಂಬಾಳ, ಸುಂಕದಕಟ್ಟೆ, ಮರ್ಧಾಳ, ಕಳಾರ, ಹೊಸಮಠ, ಕುಂತೂರು, ಕುಂಡಾಜೆ, ಹಳೇನೇರೆಂಕಿ, ಗಂಡಿಬಾಗಿಲು ಮತ್ತು ಆತೂರು ಜಮಾಅತ್‍ಗಳ ಸುಮಾರು 130ಕ್ಕೂ ಅಧಿಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಾಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.
ಎ.ಕೆ. ಸಿರಾಜ್ ಕುಂತೂರು, ಅಬೂಬಕ್ಕರ್ ಕಡಬ, ಕೆ.ಎ. ಯಹ್ಯಾ ಆತೂರು, ಕೆ. ಮಹಮ್ಮದ್ ಆತೂರು, ನಿಝಾಂ ಕುಂತೂರು, ಶಾಕಿರ್ ಆತೂರು ಮೊದಲಾದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
0 comments:
Post a Comment