ಇಂದು ರಾತ್ರಿ 8 ಗಂಟೆಗೆ ಲಾಕ್‍ಡೌನ್ ಬಗ್ಗೆ ಪ್ರಧಾನಿ ಮೋದಿ 5ನೇ ಬಾರಿಗೆ ಭಾಷಣ - Karavali Times ಇಂದು ರಾತ್ರಿ 8 ಗಂಟೆಗೆ ಲಾಕ್‍ಡೌನ್ ಬಗ್ಗೆ ಪ್ರಧಾನಿ ಮೋದಿ 5ನೇ ಬಾರಿಗೆ ಭಾಷಣ - Karavali Times

728x90

12 May 2020

ಇಂದು ರಾತ್ರಿ 8 ಗಂಟೆಗೆ ಲಾಕ್‍ಡೌನ್ ಬಗ್ಗೆ ಪ್ರಧಾನಿ ಮೋದಿ 5ನೇ ಬಾರಿಗೆ ಭಾಷಣನವದೆಹಲಿ (ಕರಾವಳಿ ಟೈಮ್ಸ್) : ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಐದನೇ ಬಾರಿಗೆ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ ಮೂಲಕ ತಿಳಿಸಿದೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಹೇರಲಾಗಿದ್ದ ಲಾಕ್‍ಡೌನ್ ಬಗ್ಗೆ ಮೋದಿ ಈ ಹಿಂದೆ ನಾಲ್ಕು ಬಾರಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದು, ಇದೀಗ ಐದನೇ ಬಾರಿ ಯಾವ ಘೋಷಣೆ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ನಿನ್ನೆಯಷ್ಟೇ ಮೋದಿಯವರು ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದೀರ್ಘ ಸಂವಾದ ನಡೆಸಿದ್ದರು. ಸಂವಾದದಲ್ಲಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಇಚ್ಚೆ ಹೊಂದಿಲ್ಲದೆ ಇರುವುದು ಪ್ರಧಾನಿಯವರ ಮಾತುಗಳಿಂದ ಕಂಡು ಬಂದಿತ್ತು.

ಇಂದಿನ ಭಾಷಣದಲ್ಲಿ ದೇಶವ್ಯಾಪಿ ಲಾಕ್‍ಡೌನ್ ಮತ್ತೆ ವಿಸ್ತರಿಸುತ್ತಾರಾ ಅಥವಾ ವಿಸ್ತರಿಸದೇ ಮತ್ತಷ್ಟು ವಿನಾಯಿತಿ ಪ್ರಕಟಿಸುತ್ತಾರಾ ಎಂಬುದು ಸದ್ಯದ ಕುತೂಹಲ. ಈ ಹಿಂದೆ ಮಾರ್ಚ್ 19 ರಂದು ದೇಶವನ್ನು ಉದ್ದೇಶಿಸಿ ಮಾ. 21 ರಂದು ಜನತಾ ಕರ್ಫ್ಯೂ ಮಾಡಬೇಕೆಂದು ಕೇಳಿಕೊಂಡಿದ್ದರು. ಇದಾದ ಬಳಿಕ ಮಾ. 24 ರಂದು 21 ದಿನಗಳ ಲಾಕ್‍ಡೌನ್ ಘೋಷಣೆ ಮಾಡಿದ್ದರು. ಬಳಿಕ ಎ. 5 ರಂದು ಕೊರೊನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸಲು ರಾತ್ರಿ 9 ಗಂಟೆಗೆ ವಿದ್ಯುತ್ ದೀಪ ಆಫ್ ಮಾಡಿ ದೀಪ/ ಕ್ಯಾಂಡಲ್ ಲೈಟ್/ ಮೊಬೈಲ್ ಟಾರ್ಚ್ ಬೆಳಗಿ ಎಂದು ಮನವಿ ಮಾಡಿದ್ದರು. ಇದಾದ ಬಳಿಕ ಏಪ್ರಿಲ್ 14 ರಂದು ಭಾಷಣ ಮಾಡಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಇಂದು ರಾತ್ರಿ 8 ಗಂಟೆಗೆ ಲಾಕ್‍ಡೌನ್ ಬಗ್ಗೆ ಪ್ರಧಾನಿ ಮೋದಿ 5ನೇ ಬಾರಿಗೆ ಭಾಷಣ Rating: 5 Reviewed By: karavali Times
Scroll to Top