ಹಿಂದೂ ಮಗುವಿನ ರಕ್ಷಣೆಗೆ ಉಪವಾಸ ತೊರೆದು ರಕ್ತದಾನ ಮಾಡಿದ ಮುಸ್ಲಿಂ ವ್ಯಕ್ತಿ - Karavali Times ಹಿಂದೂ ಮಗುವಿನ ರಕ್ಷಣೆಗೆ ಉಪವಾಸ ತೊರೆದು ರಕ್ತದಾನ ಮಾಡಿದ ಮುಸ್ಲಿಂ ವ್ಯಕ್ತಿ - Karavali Times

728x90

6 May 2020

ಹಿಂದೂ ಮಗುವಿನ ರಕ್ಷಣೆಗೆ ಉಪವಾಸ ತೊರೆದು ರಕ್ತದಾನ ಮಾಡಿದ ಮುಸ್ಲಿಂ ವ್ಯಕ್ತಿಲಾಕ್‍ಡೌನ್ ನಡುವೆ ಪ್ರಯಾಸಪಟ್ಟು ಆಸ್ಪತ್ರೆಗೆ ತೆರಳಿ ರಕ್ತದಾನ


ರಾಂಚಿ (ಕರಾವಳಿ ಟೈಮ್ಸ್) : ದೇಶದಲ್ಲಿ ಕೊರೊನಾ ವೈರಸ್ ವ್ಯಾಪಿಸಿದ್ದು, ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಇಂತಹ ಸಂಧಿಗ್ಧತೆಯಲ್ಲಿ ಅಲ್ಲಲ್ಲಿ ಜಾತಿ, ಧರ್ಮಗಳ ಎಲ್ಲೆ ಮೀರಿ ಹಲವು ಮಾನವೀಯ ಕಾರ್ಯಗಳು ಸುದ್ದಿಯಾಗುತ್ತಲೇ ಇದೆ. ಜಾತಿ-ಧರ್ಮಕ್ಕೂ ಮುಂಚೆ ಮಾನವೀಯತೆ ಬೇಕಾಗಿದೆ ಎಂಬ ನಿಟ್ಟಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಮಗುವಿನ ಪ್ರಾಣ ರಕ್ಷಣೆಗೆಗಾಗಿ ಯಾರೂ ಮುಂದೆ ಬಾರದೆ ಇದ್ದ ಸಂದರ್ಭ ರಂಝಾನ್ ಉಪವಾಸ ವೃತ ತೊರೆದು ರಕ್ತದಾನ ಮಾಡುವ ಮೂಲಕ ಮಾದರಿ ಮಾನವೀಯತೆ ಮೆರೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.

8 ವರ್ಷದ ನಿಖಿಲ್ ಎಂಬ ಬಾಲಕ ನ್ಯುಮೋನಿಯಾದಿಂದ ಬಳಲುತ್ತಿದ್ದು, ರಕ್ತಕ್ಕಾಗಿ ಪೋಷಕರು ಪರದಾಡುತ್ತಿದ್ದರು. ಇವರ ಪರದಾಟವನ್ನು ಗಮನಿಸಿದ ಸಲೀಂ ಅನ್ಸಾರ್ ಎಂಬ ಮುಸ್ಲಿಂ ವ್ಯಕ್ತಿ ಸಹಾಯ ಮಾಡುವ ಮೂಲಕ ನಿಖಿಲ್ ಪಾಲಿಗೆ ದೇವರ ಸಮಾನವಾಗಿ ಕೆಲಸ ನಿರ್ವಹಿಸಿದ್ದಾರೆ.

ಅನ್ಸಾರ್ ಅವರು ನಿಖಿಲ್ ರಕ್ಷಣೆಗಾಗಿ ನಿಂತಿದ್ದು, ಬಾಲಕನಿಗೆ ರಕ್ತದಾನ ಮಾಡಿದ್ದಾರೆ. ರಂಝಾನ್ ಪ್ರಯುಕ್ತ 1 ತಿಂಗಳ ಕಾಲ ಅನ್ಸಾರಿ ಅವರು ಉಪವಾಸ ಕೈಗೊಂಡಿದ್ದರು. ಆದರೆ ಇದೀಗ ಬಾಲಕನ ರಕ್ಷಣೆಗಾಗಿ ವೈದ್ಯರ ಸಲಹೆ ಮೇರೆಗೆ ಉಪವಾಸವನ್ನೇ ತೊರೆದಿದ್ದಾರೆ.

ಜಾರ್ಖಂಡ್ ಜಿಲ್ಲೆಯ ಹಜರಿಬಾಘ್‍ನಲ್ಲಿರುವ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಈತನ ಸ್ಥಿತಿ ಚಿಂತಾಜನಕವಾಗಿದ್ದು, ಎ ಪಾಸಿಟಿವ್ ರಕ್ತದ ಅವಶ್ಯತೆ ಇದೆ. ಆದರೆ ಸುತ್ತಮುತ್ತ ಸದ್ಯ ಯಾರೂ ರಕ್ತ ಕೊಡಲು ಮುಂದೆ ಬರದಿದ್ದರಿಂದ ನಿಖಿಲ್ ಪೋಷಕರು ಚಿಂತಾಕ್ರಾಂತರಾಗಿದ್ದರು. ಇದರಿಂದ ನೊಂದ ಪೋಷಕರು ಗ್ರಾಮದ ಜನರಿಗೆ ರಕ್ತದಾನದ ಅವಶ್ಯಕತೆ ಇರೋ ಬಗ್ಗೆ ಒಂದು ಸಂದೇಶವನ್ನು ಕಳುಹಿಸಿದ್ದಾರೆ. ಈ ವೇಳೆ ಗಿರಿಧ್ ಜಿಲ್ಲೆಯ ಬಗೋದರ್ ಬ್ಲಾಕ್ ನಿವಾಸಿ ಅನ್ಸಾರ್ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ.

ದುರಂತ ಅಂದರೆ ಕೊರೊನಾ ವೈರಸ್ ಹರಡುವ ಭೀತಿಯಿಂದ ಲಾಕ್‍ಡೌನ್ ಮಾಡಲಾಗಿದ್ದರ ಪರಿಣಾಮ ಅನ್ಸಾರ್ ಅವರಿಗೆ ರಕ್ತದಾನ ಮಾಡಲು ಹೊರಬರಲು ಸಾಧ್ಯವಾಗಲಿಲ್ಲ. ಕೊನೆಗೆ ವೈದ್ಯರ ಸಹಕಾರದಿಂದ ಹೇಗೋ ಹೊರ ಬಂದರೂ, ಪೋಲೀಸರು ಬಿಡದೆ ಕಾಡಿ-ಬೇಡಿ ಕೊನೆಗೂ ಆಸ್ಪತ್ರೆ ತಲುಪಿದ್ದಾರೆ.

ಕೊನೆಗೂ ಆಸ್ಪತ್ರೆ ತಲುಪಿದ ಅನ್ಸಾರ್ ಅವರಿಗೆ ವೈದ್ಯರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ನೀವು ರಕ್ತದಾನ ಮಾಡಲು ತಯಾರಿದ್ದರೆ ನಿಮ್ಮ ಉಪವಾಸವನ್ನು ಕೈಬಿಡಬೇಕು ಎಂದಿದ್ದಾರೆ. ಯಾಕಂದರೆ ರಕ್ತದಾನ ಮಾಡಿದ ಬಳಿಕ ಏನಾದರೂ ಸ್ಪಲ್ಪ ತಿನ್ನಲೇಬೇಕಾಗುತ್ತದೆ. ಉಪವಾಸ ಇದ್ದರೆ ಇದು ಕಷ್ಟ ಸಾಧ್ಯ ಎಂದು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆಯಂತೆ ಅನ್ಸಾರ್ ಅವರು ಉಪವಾಸ ಕೈಬಿಟ್ಟು ಬಾಲಕನಿಗಾಗಿ ಮಾನವೀಯತೆ ಮೆರೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಯಿಸಿರುವ ಅನ್ಸಾರ್ ನಾನು ಕುಸಮ್ರಝಾ ಗ್ರೂಪ್‍ನ ಉಪಾಧ್ಯಕ್ಷನಾಗಿದ್ದು, ಯಾರಿಗೆ ರಕ್ತದ ಅವಶ್ಯಕತೆ ಇದೆಯೋ ಅವರಿಗೆ ದಾನ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಹಿಂದೂ ಮಗುವಿನ ರಕ್ಷಣೆಗೆ ಉಪವಾಸ ತೊರೆದು ರಕ್ತದಾನ ಮಾಡಿದ ಮುಸ್ಲಿಂ ವ್ಯಕ್ತಿ Rating: 5 Reviewed By: karavali Times
Scroll to Top