ಜಾನುವಾರು ಕಳವು ಪ್ರಕರಣ ಬೇಧಿಸಿದ ವಿಟ್ಲ ಪೊಲೀಸ್ : ಸಾಲೆತ್ತೂರಿನಲ್ಲಿ ಅಕ್ರಮ ವಧಾಗೃಹ ಪತ್ತೆ - Karavali Times ಜಾನುವಾರು ಕಳವು ಪ್ರಕರಣ ಬೇಧಿಸಿದ ವಿಟ್ಲ ಪೊಲೀಸ್ : ಸಾಲೆತ್ತೂರಿನಲ್ಲಿ ಅಕ್ರಮ ವಧಾಗೃಹ ಪತ್ತೆ - Karavali Times

728x90

21 May 2020

ಜಾನುವಾರು ಕಳವು ಪ್ರಕರಣ ಬೇಧಿಸಿದ ವಿಟ್ಲ ಪೊಲೀಸ್ : ಸಾಲೆತ್ತೂರಿನಲ್ಲಿ ಅಕ್ರಮ ವಧಾಗೃಹ ಪತ್ತೆವಿಟ್ಲ (ಕರಾವಳಿ ಟೈಮ್ಸ್) : ವಿಟ್ಲ ಪೆÇಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಕಸಬಾ ಗ್ರಾಮದ ಮಹಿಳೆಗೆ ಸೇರಿದ ಹಸುವೊಂದು ಕಳ್ಳತನವಾದ ಬಗ್ಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾದ ವಿಟ್ಲ ಪೊಲೀಸರು ಗುರುವಾರ ಸಾಲೆತ್ತೂರು ಎಂಬಲ್ಲಿ ಆರೋಪಿತ ವ್ಯಕ್ತಿ ಹಾರಿಸ್ ಎಂಬಾತನನ್ನು ವಶಕ್ಕೆ ಪಡೆದು ಕಳವುಗೈದ ಹಸು, ಒಂದು ಪಿಕ್‍ಅಪ್ ವಾಹನ, ಚಾಕು, ಹಗ್ಗಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

    ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ ವೇಳೆ ಆತ ನೀಡಿದ ಮಾಹಿತಿಯಂತೆ  ಸಾಲೆತ್ತೂರು ಗ್ರಾಮದ ಐತಕುಮೇರ್ ನಿವಾಸಿ ಮೊಯ್ದು ಕುಂಞÂ ಎಂಬವರ ತೋಟದ ಶೆಡ್‍ಗೆ ದಾಳಿ ನಡೆಸಿದ್ದು, ಸ್ಥಳದಿಂದ ಕಡಿಯಲಾಗಿದ್ದ ದನ, ಸುಮಾರು 200 ರಷ್ಟು ದನದ ಚರ್ಮಗಳನ್ನು ಮತ್ತು ದನ ಕಡಿಯಲು ಬಳಸಿದ ವಸ್ತುಗಳು ಹಾಗೂ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಸ್ಥಳದಲ್ಲಿ ವಧಾ ಮಾಡಲು ಕಟ್ಟಿ ಹಾಕಿದ್ದ 7 ಹಸುಗಳನ್ನು ಪೊಲೀಸರು ರಕ್ಷಿಸಿ ಸ್ವಾಧೀನ ಪಡಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಜಾನುವಾರು ಕಳವು ಪ್ರಕರಣ ಬೇಧಿಸಿದ ವಿಟ್ಲ ಪೊಲೀಸ್ : ಸಾಲೆತ್ತೂರಿನಲ್ಲಿ ಅಕ್ರಮ ವಧಾಗೃಹ ಪತ್ತೆ Rating: 5 Reviewed By: karavali Times
Scroll to Top