ಲಾಕ್‍ಡೌನ್ ಅವಧಿಯ ಜನರ ಸ್ಪಂದನೆಗೆ ತಕ್ಕ ಸರಕಾರದ ಸಾಧನೆ ಇಲ್ಲ : ಯು.ಟಿ. ಖಾದರ್ ಕಿಡಿ - Karavali Times ಲಾಕ್‍ಡೌನ್ ಅವಧಿಯ ಜನರ ಸ್ಪಂದನೆಗೆ ತಕ್ಕ ಸರಕಾರದ ಸಾಧನೆ ಇಲ್ಲ : ಯು.ಟಿ. ಖಾದರ್ ಕಿಡಿ - Karavali Times

728x90

11 May 2020

ಲಾಕ್‍ಡೌನ್ ಅವಧಿಯ ಜನರ ಸ್ಪಂದನೆಗೆ ತಕ್ಕ ಸರಕಾರದ ಸಾಧನೆ ಇಲ್ಲ : ಯು.ಟಿ. ಖಾದರ್ ಕಿಡಿಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ವಿಚಾರದಲ್ಲಿ ರಾಜ್ಯದ ಜನತೆ ಕಳೆದ 45 ದಿನಗಳಿಂದಲೂ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಾ ಬಂದಿದ್ದಾರೆ. ಆದರೆ ಈ 45 ದಿನಗಳಲ್ಲಿ ಸರಕಾರದ ಸಾಧನೆ ಮಾತ್ರ ಶೂನ್ಯ ಎಂದು ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ. ಖಾದರ್ ಕಿಡಿ ಕಾರಿದ್ದಾರೆ.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈವರೆಗೂ ರಾಜ್ಯ ಸರಕಾರಕ್ಕೆ ವರದಿ ಕೊಟ್ಟಿಲ್ಲ. ಈ ವಿಚಾರವಾಗಿ ರಾಜ್ಯದ ಅಧಿಕಾರಿಗಳು ಐಸಿಎಂಆರ್‍ಗೆ ಪತ್ರ ಕೂಡ ಬರೆದಿದ್ದಾರೆ. ಈ ವಿಚಾರದಲ್ಲಿ ಐಸಿಎಂಆರ್ ವರದಿ ಬಹಿರಂಗ ಪಡಿಸದಿದ್ದಲ್ಲಿ, ನಾವು ಮಾಹಿತಿ ಪಡೆಯಲು ಕೋರ್ಟ್ ಮೆಟ್ಟಿಲೇರಬೇಕಾಗುತ್ತೆ ಎಂದವರು ಎಚ್ಚರಿಕೆ ನೀಡಿದ್ದಾರೆ.

ಐಸಿಎಂಆರ್ ವರದಿ ಕೊಟ್ಟರಷ್ಟೆ ರಾಜ್ಯದಲ್ಲಿ ಕೊರೊನಾ ಯಾವ ಹಂತದಲ್ಲಿದೆ, ಕಮ್ಯುನಿಟಿ ಸ್ಪ್ರೆಡ್ ಆಗಿದೆಯಾ?, ಯಾವ ವಯಸ್ಸಿನವರು ಹೆಚ್ಚು ಸೋಂಕಿತರಾಗುವ ಆಪಾಯವಿದೆ? ಮುಂದಿನ 3 ತಿಂಗಳಲ್ಲಿ ಏನಾಗಬಹುದು? ಹೀಗೆ ಎಲ್ಲವು ನಮಗೆ ಮಾಹಿತಿ ಸಿಗುತ್ತದೆ. ಆದ್ದರಿಂದ ರಾಜ್ಯ ಸರಕಾರ ಐಸಿಎಂಆರ್ ರಿಪೆÇೀರ್ಟ್ ತರಿಸಿಕೊಳ್ಳಬೇಕು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಸಿಎಂಆರ್‍ಗೆ ಪತ್ರ ಬರೆದರೆ ಇನ್ನೂ ವರದಿ ಬಂದಿಲ್ಲ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.

ಲಾಕ್‍ಡೌನ್ ಸಡಿಲಿಕೆ ಸೇರಿದಂತೆ ಎಲ್ಲಾ ವಿಚಾರದಲ್ಲಿ ಸರಕಾರದಲ್ಲಿ ಇನ್ನೂ ಗೊಂದಲ ಮುಂದುವರಿದಿದ್ದು, ಕಾರ್ಮಿಕರ ಸಮಸ್ಯೆಯೂ ಮುಂದುವರಿದಿದೆ. ಪಾಸ್ ಪಡೆಯುವುದೇ ಹರ ಸಾಹಸ ಆಗಿದೆ. ಕ್ವಾರೈಂಟೈನ್ ಮಾಡುವ ವಿಚಾರವೂ ಸಮರ್ಪಕವಾಗಿಲ್ಲ. ಕನ್ನಡಿಗರನ್ನು ವೈರಿಗಳ ರೀತಿಯಲ್ಲಿ ನೋಡಲಾಗ್ತಿದೆ. ಅನ್ಯ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಬಸ್ಸಿನಲ್ಲಿ ಕರೆತರುವ ಕೆಲಸ ಆಗಬೇಕು ಎಂದರು.

ವಿದೇಶದಿಂದ ಕರೆತರುವ ಕೆಲಸ ಆಗ್ತಿದೆ. ಕರಾವಳಿ ಭಾಗದ ಜನರೂ ವಿದೇಶದಲ್ಲಿ ಇದ್ದಾರೆ. ಬೆಂಗಳೂರು ಹಾಗೂ ಮಂಗಳೂರಿಗೆ ವಿಮಾನದ ಮೂಲಕ ಕರೆತರುವ ವ್ಯವಸ್ಥೆ ಮಾಡಬೇಕು. ಈವರೆಗೆ ಎಷ್ಟು ಜನರನ್ನು ಕ್ವಾರೈಂಟೈನ್ ಮಾಡಿರುವುದಾಗಿ ಪಟ್ಟಿ ಕೊಟ್ಟಿಲ್ಲ. ಲಾಕ್‍ಡೌನ್ ವಿಚಾರದಲ್ಲಿ ಸರಕಾರ ಸೂಕ್ತ ಯೋಜನೆ ಮಾಡಿಲ್ಲ. ಆಕ್ಷನ್ ಪ್ಲಾನ್ ಮಾಡುವಲ್ಲಿ ಸರಕಾರ ಎಡವಿದೆ ಎಂದು ಗಂಭೀರ ಆರೋಪ ಮಾಡಿದ ಖಾದರ್, ಈ ಕೂಡಲೇ ಐಸಿಎಂಆರ್ ವರದಿ ತರಿಸಿ, ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್ ಅವಧಿಯ ಜನರ ಸ್ಪಂದನೆಗೆ ತಕ್ಕ ಸರಕಾರದ ಸಾಧನೆ ಇಲ್ಲ : ಯು.ಟಿ. ಖಾದರ್ ಕಿಡಿ Rating: 5 Reviewed By: karavali Times
Scroll to Top