ವೃತ್ತಿನಿರತ ಪತ್ರಕರ್ತರು ಕೋವಿಡ್-19 ವಿಮಾ ವ್ಯಾಪ್ತಿಗೆ : ಸಿ.ಎಂ. ಭರವಸೆ - Karavali Times ವೃತ್ತಿನಿರತ ಪತ್ರಕರ್ತರು ಕೋವಿಡ್-19 ವಿಮಾ ವ್ಯಾಪ್ತಿಗೆ : ಸಿ.ಎಂ. ಭರವಸೆ - Karavali Times

728x90

6 May 2020

ವೃತ್ತಿನಿರತ ಪತ್ರಕರ್ತರು ಕೋವಿಡ್-19 ವಿಮಾ ವ್ಯಾಪ್ತಿಗೆ : ಸಿ.ಎಂ. ಭರವಸೆಬೆಂಗಳೂರು (ಕರಾವಳಿ ಟೈಮ್ಸ್) : ಕೋವಿಡ್ ಸಂದರ್ಭದಲ್ಲಿ ವೃತ್ತಿ ನಿರತ ಪತ್ರಕರ್ತರನ್ನು ವಿಮಾ ವ್ಯಾಪ್ತಿಗೆ ತರಲಾಗುವುದು ಎಂಬ ಭರವಸೆಯನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್ ತಿಳಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕೋವಿಡ್ ವಿರುದ್ಧ ಹೋರಾಡುತ್ತಿರುವ ಸರಕಾರೊಂದಿಗೆ ಕೈಜೋಡಿಸಿ ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಮಾಧ್ಯಮದವರನ್ನು ಕೂಡ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ ಅವರನ್ನೂ ಆರೋಗ್ಯ ವಿಮೆ ಸೌಲಭ್ಯ ವ್ಯಾಪ್ತಿಗೆ ತರಬೇಕು ಎಂದು ಇತ್ತೀಚೆಗೆ ಪತ್ರಕರ್ತರ  ಸಂಘ ಮುಖ್ಯಮಂತ್ರಿಯವರಿಗೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.

ಲಾಕ್‍ಡೌನ್‍ನಿಂದಾಗಿ ತೊಂದರೆ ಎದುರಿಸುತ್ತಿರುವ ಎಲ್ಲ ವರ್ಗದ ಜನರಿಗೆ ನೆರವಾಗಲು 1,610 ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್ ಮುಖ್ಯಮಂತ್ರಿಯವರು ಘೋಷಿಸಿದ್ದಾರೆ. ನೇಕಾರರ ಸಮ್ಮಾನ್ ಯೋಜನೆ, ಚಾಲಕರಿಗೆ, ಕಟ್ಟಡ ಕಾರ್ಮಿಕರಿಗೆ ಸಹಾಯಧನ, ಉದ್ದಿಮೆಗಳ ಉತ್ತೇಜನ ಸೇರಿದಂತೆ ಹಲವು ಮಹತ್ವಪೂರ್ಣ, ಜನಪರ ಘೋಷಣೆಗಳನ್ನು ಮಾಡಿದ್ದಾರೆ ಎಂದು ಸಚಿವರು ಟ್ವೀಟಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ವೃತ್ತಿನಿರತ ಪತ್ರಕರ್ತರು ಕೋವಿಡ್-19 ವಿಮಾ ವ್ಯಾಪ್ತಿಗೆ : ಸಿ.ಎಂ. ಭರವಸೆ Rating: 5 Reviewed By: karavali Times
Scroll to Top