ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ಉಡುಪಿ ಆಸ್ಪತ್ರೆಯಲ್ಲಿ ಸಾವು - Karavali Times ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ಉಡುಪಿ ಆಸ್ಪತ್ರೆಯಲ್ಲಿ ಸಾವು - Karavali Times

728x90

16 May 2020

ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ಉಡುಪಿ ಆಸ್ಪತ್ರೆಯಲ್ಲಿ ಸಾವುಗಂಟಲ ದ್ರವ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ


ಉಡುಪಿ (ಕರಾವಳಿ ಟೈಮ್ಸ್) : ಮಹಾರಾಷ್ಟ್ರದಿಂದ ಮೇ ಮೊದಲ ವಾರದಲ್ಲಿ ಬಂದಿದ್ದ ಜಿಲ್ಲೆಯ ಕುಂದಾಪುರ ತಾಲೂಕಿನ ವ್ಯಕ್ತಿ ಅನಾರೋಗ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದವರು ಅಲ್ಲಿ ಮೃತಪಟ್ಟಿದ್ದಾರೆ. ಸಂಶಯಾಸ್ಪದವಾಗಿ ವ್ಯಕ್ತಿ ಮೃತಪಟ್ಟಿರುವುದು ಇದೀಗ ಉಡುಪಿ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ಇವರು ಮಹಾರಾಷ್ಟ್ರದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದರು. ಮೇ ಮೊದಲ ವಾರದಲ್ಲಿ ಅವರು ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಮನೆಯಲ್ಲೇ ಕ್ವಾರಂಟೈನ್‍ನಲ್ಲಿದ್ದ ಸಂದರ್ಭ ಅವರಿಗೆ ಅನಾರೋಗ್ಯ ಬಾಧಿಸಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಎರಡು ದಿನದ ಹಿಂದೆ ವ್ಯಕ್ತಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಮೃತ ವ್ಯಕ್ತಿಯ ಗಂಟಲ ದ್ರವವನ್ನು ತಪಾಸಣೆಗೆ ಮಂಗಳೂರಿಗೆ ಕಳುಹಿಸಲಾಗಿದೆ. ಅವರ ವರದಿ ಕೈ ಸೇರುವವರೆಗೆ ಆತಂಕ ಮುಂದುವರಿದಿದೆ.

ಕೊರೊನಾ ಪಾಸಿಟಿವ್ ಯಾವುದೇ ಲಕ್ಷಣಗಳು ವ್ಯಕ್ತಿಗೆ ಆರಂಭದ ಹಂತದಲ್ಲಿ ಇರಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮೃತ ವೃದ್ಧನ ಗಂಟಲ ದ್ರವ ತಪಾಸಣೆ ವರದಿಗಾಗಿ ಉಡುಪಿ ಜಿಲ್ಲಾಡಳಿತ ಕಾಯುತ್ತಿದೆ. ಚಿಕಿತ್ಸೆ ಕೊಟ್ಟ ಮಣಿಪಾಲ ಕೆಎಂಸಿ ಸಿಬ್ಬಂದಿಯನ್ನು ಗುರುತಿಸುವ ಕೆಲಸ ನಡೆಯುತ್ತಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ಉಡುಪಿ ಆಸ್ಪತ್ರೆಯಲ್ಲಿ ಸಾವು Rating: 5 Reviewed By: karavali Times
Scroll to Top