ಮುಂಬೈ (ಕರಾವಳಿ ಟೈಮ್ಸ್) : ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಬಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 34 ವರ್ಷದ ನಟ ತಾನೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಸುಶಾಂತ್ ಆತ್ಮಹತ್ಯೆ ಸುದ್ದಿ ಬಗ್ಗೆ ಟ್ವಿಟರ್‍ನಲ್ಲಿ ದಿಗ್ರ್ಬಮೆ ವ್ಯಕ್ತಪಡಿಸಿರುವ ಅನುರಾಗ್ ಕಶ್ಯಪ್, ಇದು ನಂಬಲಿಕೆ ಆಗುತ್ತಿಲ್ಲ ಎಂದಿದ್ದಾರೆ. ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.
2014ರಲ್ಲಿ ಮೊದಲ ಬಾರಿಗೆ ‘ಕಾಯ್ ಪೆÇಚೆ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಸುಶಾಂತ್ ಸಿಂಗ್, ಎಂ.ಎಸ್. ಧೋನಿ ದಿ ಅನ್ ಟೋಲ್ಡ್ ಸ್ಟೋರಿ ಸೇರಿದಂತೆ ಸುಮಾರು 11 ಚಿತ್ರಗಳಲ್ಲಿ ನಾಯಕ ನಟನಾಗಿ ಮಿಂಚಿದ್ದರು.
ಸುಶಾಂತ್ ನಿವಾಸಕ್ಕೆ ಪೆÇಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಲಾಕ್‍ಡೌನ್ ವೇಳೆ ಸುಶಾಂತ್ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು ಎನ್ನಲಾಗಿದೆ.
0 comments:
Post a Comment