ತಮಿಳುನಾಡು : ಮತ್ತೋರ್ವ ಶಾಸಕಗೆ ಕೊರೋನಾ ಪಾಸಿಟಿವ್ - Karavali Times ತಮಿಳುನಾಡು : ಮತ್ತೋರ್ವ ಶಾಸಕಗೆ ಕೊರೋನಾ ಪಾಸಿಟಿವ್ - Karavali Times

728x90

13 June 2020

ತಮಿಳುನಾಡು : ಮತ್ತೋರ್ವ ಶಾಸಕಗೆ ಕೊರೋನಾ ಪಾಸಿಟಿವ್ನವದೆಹಲಿ (ಕರಾವಳಿ ಟೈಮ್ಸ್) : ತಮಿಳುನಾಡು ರಾಜ್ಯದ ಎಐಎಡಿಎಂಕೆ ಶಾಸಕ ಕೆ ಪಳನಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈಗಾಗಲೇ ತಮಿಳುನಾಡಿನಲ್ಲಿ ಡಿಎಂಕೆ ಶಾಸಕ ಜೆ ಅನ್ಬಳಗನ್ ಅವರು ಕೋವಿಡ್-19 ಸೋಂಕು ದೃಢಪಟ್ಟ ಬಳಿಕ ಇತ್ತೀಚೆಗೆ ಮೃತಪಟ್ಟಿದ್ದರು. ಇದೀಗ ಮತ್ತೋರ್ವ ಶಾಸಕರಿಗೆ ಕೋವಿಡ್-19 ದೃಢಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ.

ಎಐಎಡಿಎಂಕೆಯ ಶ್ರೀಪೆರಂಬದೂರ್ ಕ್ಷೇತ್ರ ಶಾಸಕ ಕೆ. ಪಳನಿ ಅವರು ಚೆನ್ನೈನ ಹೊರವಲಯದಲ್ಲಿರುವ ನಂದಂಬಕ್ಕಂನ ಎಂಐಒಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆ. ಪಳನಿ ಅವರಿಗೆ ಕೋವಿಡ್-19 ಸೋಂಕು ತಗುಲಿರುವ ಮೂಲ ಯಾವುದು ಎಂಬುದು ಇನ್ನೂ ಗೊತ್ತಾಗಿಲ್ಲ. ಕೋವಿಡ್-19 ಹೆಚ್ಚಾಗಿರುವ ತಮ್ಮ ಕ್ಷೇತ್ರದಲ್ಲಿ ಪರಿಹಾರ ಸಾಮಗ್ರಿ ವಿತರಣೆ ಚಟುವಟಿಯಲ್ಲಿ ಕೆ. ಪಳನಿ ತಮ್ಮನ್ನು ತೊಡಗಿಸಿಕೊಂಡಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ತಮಿಳುನಾಡು : ಮತ್ತೋರ್ವ ಶಾಸಕಗೆ ಕೊರೋನಾ ಪಾಸಿಟಿವ್ Rating: 5 Reviewed By: karavali Times
Scroll to Top