ಸಂಗಬೆಟ್ಟು : ರಮಾನಾಥ ರೈ ನೇತೃತ್ವದಲ್ಲಿ ಡಿಕೆಶಿ ಪದಗ್ರಹಣ ಪೂರ್ವಭಾವಿ ಸಭೆ - Karavali Times ಸಂಗಬೆಟ್ಟು : ರಮಾನಾಥ ರೈ ನೇತೃತ್ವದಲ್ಲಿ ಡಿಕೆಶಿ ಪದಗ್ರಹಣ ಪೂರ್ವಭಾವಿ ಸಭೆ - Karavali Times

728x90

20 June 2020

ಸಂಗಬೆಟ್ಟು : ರಮಾನಾಥ ರೈ ನೇತೃತ್ವದಲ್ಲಿ ಡಿಕೆಶಿ ಪದಗ್ರಹಣ ಪೂರ್ವಭಾವಿ ಸಭೆಬಂಟ್ವಾಳ (ಕರಾವಳಿ ಟೈಮ್ಸ್) : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ಪೂರ್ವ ತಯಾರಿ ಸಿದ್ದತೆ  ಮಾಜಿ ಸಚಿವ ಬಿ. ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ ಸಂಗಬೆಟ್ಟು ಜಿಲ್ಲಾ ಪಂಚಾಯತ್ ಕ್ಷೇತ್ರದ ಅಮ್ಟಾಡಿ, ಅರಳ, ಸಂಗಬೆಟ್ಟು, ರಾಯಿ, ಪಂಜಿಕಲ್ಲು, ಪಿಲಾತಬೆಟ್ಟು, ಇರ್ವತ್ತೂರು, ಚೆನ್ನೈತೋಡಿ, ಕುಕ್ಕಿಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ನಡೆಯಿತು.ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿ.ಪಂ. ಸದಸ್ಯರಾದ ಬಿ. ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ವಲಯ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪ್ರಮುಖರಾದ ವಲೇರಿಯನ್, ದಿನೇಶ್ ಶೆಟ್ಟಿಗಾರ್, ಸುಧೀರ್ ಶೆಟ್ಟಿ, ಸದಾನಂದ ಶೆಟ್ಟಿ, ಪ್ರಶಾಂತ್ ಜೈನ್, ನವೀನ್ ಶೆಟ್ಟಿ, ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಸಂಗಬೆಟ್ಟು : ರಮಾನಾಥ ರೈ ನೇತೃತ್ವದಲ್ಲಿ ಡಿಕೆಶಿ ಪದಗ್ರಹಣ ಪೂರ್ವಭಾವಿ ಸಭೆ Rating: 5 Reviewed By: karavali Times
Scroll to Top